ಗೋಣಿಕೊಪ್ಪ ವರದಿ, ಮೇ. ೩: ಪೊನ್ನಂಪೇಟೆ ತಾಲೂಕಿನ ಕುಟ್ಟ ಕರ್‌ಂಗಾಳಿ ದೇವಿ ಜಾತ್ರೆ ತಾ. ೪ ರಿಂದ ತಾ. ೬ ವರೆಗೆ ಜರುಗಲಿದೆ. ತಾ. ೬ ರಂದು ದೊಡ್ಡಮುಡಿ ತೆಯ್ಯಂ ಆಚರಣೆ ನೆರವೇರಲಿದೆ.

ತಾ. ೪ ರಂದು ರಾತ್ರಿ ೯ ಗಂಟೆಗೆ ಪೂ ವೆಳ್ಳಾಟಂ ನೆರವೇರಲಿದೆ. ತಾ.೫ ರಂದು ಮಧ್ಯಾಹ್ನ ೧೨ ಗಂಟೆಗೆ ಮಹಾಪೂಜೆ, ಮ. ೧ ಕ್ಕೆ ಅನ್ನಸಂತರ್ಪಣೆ, ರಾತ್ರಿ ೭ ಗಂಟೆಗೆ ಉತ್ಸವ ಮೂರ್ತಿ ಪೂಜಾ ಕಾರ್ಯ ಪೂಜೆಕಲ್ ಸ್ಥಾನದಲ್ಲಿ ನೆರವೇರಲಿದೆ. ರಾತ್ರಿ ೧೦.೩೦ ಗಂಟೆಗೆ ಪೊನ್ನ್ ಮಗಳಂ ತೆಯ್ಯಂ, ರಾತ್ರಿ ೧೧.೩೦ ಕ್ಕೆ ಕುಟ್ಟಿಚಾತನ್ ತೆಯ್ಯಂ ನೆರವೇರಲಿದೆ. ತಾ. ೬ ರಂದು ಬೆಳಗ್ಗೆ ೬.೪೫ಕ್ಕೆ ದೊಡ್ಡ ಮುಡಿ ತೆಯ್ಯಂ ನಡೆಯಲಿದೆ.