ವಿನ್ನಿಂಗ್ ಗೋಲು ಬಾರಿಸಿದ ಕುಲ್ಲೇಟಿರ ತಂಡದ ಅವನೀಶ್ ಮಂದಪ್ಪ ರ‍್ಯಾಲಿಪಟು ಬಲ್ಲಚಂಡ ಡೆನ್‌ತಿಮ್ಮಯ್ಯ ಪ್ರಾಯೋಜಿಸಿದ ರೂ. ೧ ಲಕ್ಷ ಬಹುಮಾನವನ್ನು ತನ್ನದಾಗಿಸಿಕೊಂಡರು. ಚೆಪ್ಪುಡಿರ ನಡುವಿನ ಫೈನಲ್ ಪಂದ್ಯದ ಅವಧಿಯಲ್ಲಿ ೧-೧ ಸಮಬಲವಾಗಿದ್ದ ಸಮಯದಲ್ಲಿ ಅವನೀಶ್ ಮಂದಪ್ಪ ಗೋಲು ಬಾರಿಸಿ ತಂಡದ ಗೋಲಿನ ಮೊತ್ತ ಹೆಚ್ಚಿಸಿದರು. ಇದಾದ ನಂತರವೂ ಶುಭಂ ಚಿಟ್ಟಿಯ್ಯಪ್ಪ ಮತ್ತೊಂದು ಗೋಲು ಬಾರಿಸಿದರಾದರೂ ಅವನೀಶ್ ಹೊಡೆದ ಗೋಲ್ ನಿರ್ಣಾಯಕವಾಗಿದ್ದರಿಂದ ಇದನ್ನು ವಿನ್ನಿಂಗ್ ಗೋಲಾಗಿ ಪರಿಗಣಿಸಲಾಯಿತು. ಇದಲ್ಲದೆ ಕೂರ್ಗ್ ಕಾಫಿ ಕ್ಯಾಸ್ಟಲ್‌ನ ಚೇನಂಡ ಪೃಥ್ವಿ ದೇವಯ್ಯ ಅವರು ವಿನ್ನಿಂಗ್ ಗೋಲಿಗೆ ಘೋಷಿಸಿದ್ದ ರೂ. ೧೦ ಸಾವಿರ ನಗದು ಬಹುಮಾನವೂ ಅವನೀಶ್ ಪಾಲಾಯಿತು.