ಗೋಣಿಕೊಪ್ಪಲು, ಮೇ.೨ : ಜನಾಂಗದ ಕಲೆ ಸಂಸ್ಕೃತಿ ಉಳಿಯಬೇಕು ಮುಂದಿನ ಪೀಳಿಗೆಗೆ ಇದು ದೊಡ್ಡ ಕೊಡುಗೆಯಾಗಬೇಕು. ಆ ನಿಟ್ಟಿನಲ್ಲಿ ಹೆಗ್ಗಡೆ ಸಮಾಜವು ವಾರ್ಷಿಕವಾಗಿ ನಡೆಸುತ್ತಿರುವ ಕ್ರೀಡೋತ್ಸವ ಸಮಾಜಕ್ಕೆ ಮಾದರಿ ಎಂದು ವೀರಾಜಪೇಟೆ ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಹೇಳಿದರು. ೪ಆರನೇ ಪುಟಕ್ಕೆ

(ಮೊದಲ ಪುಟದಿಂದ) ಗೋಣಿಕೊಪ್ಪ ಸಮೀಪದ ಹಾತೂರು ಶಾಲಾ ಮೈದಾನದಲ್ಲಿ ಹೆಗ್ಗಡೆ ಸಮಾಜದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ೨೬ನೇ ವರ್ಷದ ವಾರ್ಷಿಕ ಕ್ರೀಡೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು ಬಿಟ್ಟಂಗಾಲದಲ್ಲಿರುವ ಹೆಗ್ಗಡೆ ಸಮಾಜದ ಅಭಿವೃದ್ಧಿಗಾಗಿ ಸದ್ಯದ ಮಟ್ಟಿಗೆ ೩೦ ಲಕ್ಷ ಅನುದಾನವನ್ನು ಮುಖ್ಯಮಂತ್ರಿಗಳಿAದ ನೀಡಲಾಗಿದೆ. ಕೊಡಗಿನ ಮೂಲ ನಿವಾಸಿಗಳು ನೆಮ್ಮದಿಯ ವಾತಾವರಣದಲ್ಲಿ ಜೀವನ ಸಾಗಿಸಬೇಕು. ಈ ನಿಟ್ಟಿನಲ್ಲಿ ಕೊಡಗಿನ ಮೂಲನಿವಾಸಿಗಳು ತಮ್ಮ ಸಮಾಜವನ್ನು ಮತ್ತಷ್ಟು ಗಟ್ಟಿಗೊಳಿಸಿ ಒಗ್ಗಟ್ಟು ಕಾಪಾಡುವಂತೆ ಕರೆ ನೀಡಿದರು.

ಸಭೆಯ ಅಧ್ಯಕ್ಷತೆಯನ್ನು ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಕೊಡಗು ಹೆಗ್ಗಡೆ ಸಮಾಜದ ಜಿಲ್ಲಾಧ್ಯಕ್ಷ ಕೊರಕುಟ್ಟಿರ ಸರಚಂಗಪ್ಪ, ಕೊಡಗು ಸೇರಿದಂತೆ ರಾಜ್ಯದ ವಿವಿಧ ಭಾಗದಲ್ಲಿ ಹೆಗ್ಗಡೆ ಸಮಾಜದ ಜನಾಂಗವು ವಾಸವಿದ್ದು, ೮ ಸಾವಿರಕ್ಕೂ ಅಧಿಕ ಜನಸಂಖ್ಯೆಯನ್ನು ಹೊಂದಿರುವ ಸಮುದಾಯವಾಗಿದೆ.

ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅವರು ಸಮಾಜದ ಪದಾಧಿಕಾರಿಗಳ ನಿಯೋಗವನ್ನು ಮುಖ್ಯಮಂತ್ರಿಗಳ ಬಳಿಗೆ ಕರೆದೊಯ್ದು ೩೦ ಲಕ್ಷ ಅನುದಾನವನ್ನು ಕೊಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಶಾಸಕರು ಸಮಾಜದ ಮೇಲೆ ಅಪಾರ ಗೌರವ ಹೊಂದಿದ್ದಾರೆ. ಇವರ ಸಹಕಾರವನ್ನು ಹೆಗ್ಗಡೆ ಸಮಾಜ ಸದಾ ಸ್ಮರಿಸುತ್ತದೆ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕರ್ನಾಟಕ ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಅರುಣ್ ಮಾಚಯ್ಯ ಕ್ರೀಡೋತ್ಸವವನ್ನು ಬ್ಯಾಟಿಂಗ್ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿ, ಸಮಾಜದ ಒಗ್ಗಟ್ಟು ಸದಾ ಮುಂದುವರೆಯಲಿ, ಕ್ರೀಡೆಗೆ ಒತ್ತುನೀಡುವ ಪ್ರಯತ್ನ ಸಮಾಜದ ವತಿಯಿಂದ ಮುಂದುವರೆಯಲಿ ಎಂದರು.

ವೇದಿಕೆಯಲಿ ಹೆಗ್ಗಡೆ ಸಮಾಜದ ನಿಕಟಪೂರ್ವ ಅಧ್ಯಕ್ಷರಾದ ಪಡಿಞರಂಡ ಜಿ. ಅಯ್ಯಪ್ಪ ಟ್ರೋಫಿ ದಾನಿಗಳಾದ ನಿವೃತ್ತ ಸಬ್‌ಇನ್ಸ್ಪೆಕ್ಟರ್ ಕೊಂಗೆಪAಡ ಮಾಚಯ್ಯ ಆಡಳಿತ ಮಂಡಳಿ ನಿರ್ದೇಶಕರು ಸೇರಿದಂತೆ ಸಮಾಜದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಂಗವಾಗಿ ಶಾಸಕ ಪೊನ್ನಣ್ಣ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಆರಂಭದಲ್ಲಿ ತ್ರಷಾ ಪ್ರಾರ್ಥಿಸಿ ಹೆಗ್ಗಡೆ ಸಮಾಜದ ಕಾರ್ಯದರ್ಶಿ ಪಡಿಞರಂಡ ಪ್ರಭುಕುಮಾರ್ ಸ್ವಾಗತಿಸಿ, ಕ್ರೀಡಾ ಸಂಚಾಲಕ ಪಂದಿಕAಡ ನಾಗೇಶ್ ನಿರೂಪಿಸಿ, ವಂದಿಸಿದರು.

ಸಮಾರೋಪ

ಸಮಾರೋಪ ಸಮಾರಂಭ ತಾ.೩ರ ಮಧ್ಯಾಹ್ನ ೨.೩೦ ಗಂಟೆಗೆ ಕೊಡಗು ಹೆಗ್ಗಡೆ ಸಮಾಜದ ಅಧ್ಯಕ್ಷ ಕೊರಕುಟ್ಟಿರ ಸರ ಚಂಗಪ್ಪ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಹಿರಿಯ ವಕೀಲ, ಹೆಗ್ಗಡೆ ಸಮಾಜದ ಮಾಜಿ ಅಧ್ಯಕ್ಷ ಪಡಿಜ್ಞರಂಡ ಜಿ. ಅಯ್ಯಪ್ಪ, ಪೊಲೀಸ್ ಇಲಾಖೆಯ ಸರ್ಕಲ್ ಇನ್ಸ್ಪೆಕ್ಟರ್ ತುದಿಮಾಡ ಸವಿ ಲೋಕೇಶ್, ಟ್ರೋಫಿ ದಾನಿಗಳಾದ ನಿವೃತ್ತ ಸಬ್ ಇನ್ಸ್ಪೆಕ್ಟರ್ ಕೆ.ಎಸ್.ಆರ್‌ಪಿಯ ಕೊಂಗೆಪAಡ ಮಾಚಯ್ಯ ಭಾಗವಹಿಸಲಿದ್ದಾರೆ.

ಕೃಷಿ ಇಲಾಖೆಯ ರಾಜ್ಯ ಪ್ರಶಸ್ತಿ ಪಡೆದ ಹಾಲುಗುಂದ ಗ್ರಾಮದ ಕೃಷಿಕ, ಪಂದಿಕAಡ ಜಯ ಬೋಪಣ್ಣ, ಕಿಗ್ಗಾಲು ಗ್ರಾಮದ ಕೃಷಿಕ ಪಡಿಞರಂಡ ರೇಣುಕುಮರ್, ರಾಷ್ಟಿçÃಯ ವೆಟ್ರನ್ ಅಥ್ಲೆಟಿಕ್ ಮೀಟ್‌ನಲ್ಲಿ ಸಾಧನೆ ಮಾಡಿದ ಮೂರೀರ ಶಾಂತಿ ಬೆಳ್ಯಪ್ಪ, ಅಚ್ಚಪಂಡ ಟೀನಾ ಸೋಮಣ್ಣ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು. ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ ಶಿಕ್ಷಣದಲ್ಲಿ ಉತ್ತಮ ಸಾಧನೆ ಮಾಡಿದ ಸಮಾಜದ ಸದಸ್ಯರ ಮಕ್ಕಳಿಗೆ ಸ್ಕಾಲರ್‌ಶಿಪ್ ವಿತರಣೆ ನಡೆಯಲಿದೆ.