ಚೆಪ್ಪುಡಿರ-ಕುಲ್ಲೇಟಿರ ತಂಡಗಳು ೧-೧ ಗೋಲಿನಿಂದ ಸಮವಾಗಿ ಬಿರುಸಿನ ಹೋರಾಟ ಮುಂದುವರೆದಿತ್ತು. ಈ ಸಂದರ್ಭ ತೀರ್ಪೊಂದನ್ನು ಪ್ರಶ್ನಿಸಿ ಕುಲ್ಲೇಟಿರ ಆಟಗಾರರು ವೀಡಿಯೋ ರೆಫರಲ್ಗೆ ಬೇಡಿಕೆಯಿತ್ತರು. ಇದರಲ್ಲಿ ಕುಲ್ಲೇಟಿರಕ್ಕೆ ಪೆನಾಲ್ಟಿ ಕಾರ್ನರ್ ಲಭಿಸಿತು. ಈ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಕುಲ್ಲೇಟಿರ ಅವನೀಶ್ ಮಂದಪ್ ಗೋಲುಗಳಿಸಿ ಕುಲ್ಲೇಟಿರ ಮುನ್ನಡೆ ಪಡೆದು ನಂತರ ವಿಜಯಮಾಲೆಯನ್ನೂ ಧರಿಸಿತು.