ವೀರಾಜಪೇಟೆ, ಏ. ೩೦: ಸಮೀಪದ ಬೇಟೋಳಿ ರಾಮನಗರದ ಶ್ರೀ ಪುದುಪಾಡಿ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಸಭಾಂಗಣದಲ್ಲಿ ಮೂರು ದಿವಸಗಳ ಕಾಲ ಮಕ್ಕಳ ವೈದಿಕ ಶಿಬಿರವು ಯಶಸ್ವಿಯಾಗಿ ಸಂಪನ್ನಗೊAಡಿತು. ಶಿಬಿರಕ್ಕೆ ಶ್ರೀ ಪುದುಪಾಡಿ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಉಪಾಧ್ಯಕ್ಷ ನಂದ ಬೋರ್ಕರ್ ಚಾಲನೆ ನೀಡಿದರು. ದೇವಸ್ಥಾನದ ಪ್ರಧಾನ ಅರ್ಚಕ ವಿಶ್ವನಾಥ್ ಭಟ್ ಹಾಗೂ ಕಳತ್ಮಾಡುವಿನ ಅರ್ಚಕ ಶ್ರೇಯಸ್ ಭಟ್ ವೈದಿಕ ಶಿಬಿರದ ಪ್ರಯುಕ್ತ ಮಕ್ಕಳಿಗೆ ವಿವಿಧ ತರಬೇತಿ ನೀಡಿದರು. ಅರ್ಚಕರು ವಟುಗಳಿಗೆ ಸಂಧ್ಯಾವAದನೆ, ಕುಲದೇವರ ಪೂಜಾ ವಿಧಾನಗಳು, ಮಂತ್ರ ಪಠಣ ಶ್ಲೋಕ ಪಠಣ, ಜನಿವಾರ ಧರಿಸುವ ವಿಧಾನಗಳು, ಶ್ರೀ ಸತ್ಯನಾರಾಯಣ ಪೂಜೆಯ ಮಂತ್ರಗಳು, ಪಂಚಗವ್ಯದ ಪೂಜಾ ವಿಧಾನ ಇನ್ನೂ ಮುಂತಾದ ಪೂಜಾ ವಿಧಾನಗಳ ಕುರಿತು ತರಬೇತಿ ನೀಡಿದರು. ದೇವಸ್ಥಾನದ ಆಡಳಿತ ಮಂಡಳಿ ಸದಸ್ಯೆ ಸಂಗೀತ ಮಕ್ಕಳಿಗೆ ಯೋಗಾಭ್ಯಾಸವನ್ನು ಮಾಡಿಸಿದರು. ಹೆಗ್ಗಳ ಗ್ರಾಮದ ಸುರೇಶ್ ಧರ್ಮ ಶಿಕ್ಷಣದ ಮಹತ್ವವನ್ನು ವಿವರಿಸಿದರು. ಸಮಾರೋಪದಲ್ಲಿ ಶಿಬಿರದಲ್ಲಿ ಭಾಗವಹಿಸಿದ ಎಲ್ಲಾ ಶಿಬಿರಾರ್ಥಿಗಳಿಗೆ ದೇವಸ್ಥಾನದ ವತಿಯಿಂದ ಪ್ರಮಾಣ ಪತ್ರಗಳನ್ನು ನೀಡಲಾಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಬಿ.ಪಿ. ಸಂತೋಷ್, ಉಪಾಧ್ಯಕ್ಷ ಶೈಲೇಶ್ ಕಾಮತ್, ಕಾರ್ಯದರ್ಶಿ ಬಿ.ಎನ್. ಶಾಂತಿಭೂಷಣ್, ಸದಸ್ಯರುಗಳು, ಮಕ್ಕಳ ಪೋಷಕರುಗಳು ಉಪಸ್ಥಿತರಿದ್ದರು.