ಮಡಿಕೇರಿ, ಏ. ೩೦ : ಹೊದ್ದೂರು ಭಗವತಿ ಕಾಲೋನಿ ಶ್ರೀ ಮಾರಿಯಮ್ಮ ದೇವಸ್ಥಾನ ಸಮಿತಿಯ ವತಿಯಿಂದ ೧೮ನೇ ವರ್ಷದ ಮಾರಿಯಮ್ಮ ಉತ್ಸವ ಶ್ರದ್ಧಾಭಕ್ತಿಯಿಂದ ಜರುಗಿ ಸಂಪನ್ನಗೊAಡಿತು.
ತಾ. ೨೭ ರಂದು ಸಂಜೆ ೫ ಗಂಟೆಗೆ ಕಾವೇರಿ ಹೊಳೆಯಲ್ಲಿ ಮಾರಿಯಮ್ಮ ದೇವರ ಜಳಕದ ಬಳಿಕ ವಾದ್ಯಗೋಷ್ಠಿಯೊಂದಿಗೆ ಮುಖ್ಯ ರಸ್ತೆಯಲ್ಲಿ ಮೆರವಣಿಗೆಯೊಂದಿಗೆ ದೈವನೆಲೆಗೆ ಆಗಮನ, ವಿವಿಧ ಪೂಜಾ ಕಾರ್ಯದೊಂದಿಗೆ ರಾತ್ರಿ ೯ ಗಂಟೆಗೆ ಅನ್ನಸಂತರ್ಪಣೆ ನಡೆಯಿತು.
ತಾ. ೨೮ ರಂದು ಬೆಳಿಗ್ಗೆ ೧೧ ಗಂಟೆಗೆ ಶ್ರೀ ಮಾರಿಯಮ್ಮ, ಕಾಳಮ್ಮ, ಭೂಮಿಗುಳಿಗ, ರಾಹುಗುಳಿಗ, ಕೊರಗದೈವ, ಯಲ್ಲಮ್ಮ, ದುರ್ಗಮ್ಮ ದೈವಗಳ ದರ್ಶನ, ಹರಕೆ ಒಪ್ಪಿಸುವುದು ಬಳಿಕ ೧ ಗಂಟೆಗೆ ಅನ್ನಸಂತರ್ಪಣೆ ನಡೆಯಿತು.
ದೈವನೆಲೆಯ ಅರ್ಚಕರಾದ ಹೆಚ್. ಗಣೇಶ್ ಹಾಗೂ ಬಾಬು ಹೆಚ್.ಟಿ. ಅವರು ಪೂಜಾ ಕಾರ್ಯದ ವಿಧಿ ವಿಧಾನ ನೆರವೇರಿಸಿದರು. ಗ್ರಾಮದ ಹಾಗೂ ಹೊರ ಗ್ರಾಮದ ಭಕ್ತರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದರು. -ಪವಿತ್ರ