ನಾಪೋಕ್ಲು, ಏ. ೩೦: ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ೧೨ನೇ ಕನ್ನಡ ಸಾಹಿತ್ಯ ಸಮ್ಮೇಳನ ಮಡಿಕೇರಿ ತಾಲೂಕು ಕಡಂಗ - ಅರಪಟ್ಟು ಗ್ರಾಮದಲ್ಲಿರುವ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಮೇ ೨೦ ರಂದು ನಡೆಯಲಿದೆ.
ಕವಿಗೋಷ್ಠಿಯಲ್ಲಿ ಕವನ ವಾಚಿಸಲು ಆಸಕ್ತ ಕವಿ / ಕವಯತ್ರಿಯರಿಂದ ಸ್ವರಚಿತ ಕವನಗಳನ್ನು ಆಹ್ವಾನಿಸಲಾಗಿದೆ. ಮಡಿಕೇರಿ ತಾಲೂಕಿನ ಆಸಕ್ತ ಕವಿ / ಕವಯತ್ರಿಯರು ಕನ್ನಡ ಭಾಷೆಯ ಒಂದು ಕವನವನ್ನು ಮೇ ೫ ರ ಒಳಗಾಗಿ ಕಳುಹಿಸಿಕೊಡಬೇಕು. ಆ ನಂತರ ಬರುವ ಕವನಗಳನ್ನು ಪರಿಗಣಿಸಲಾಗುವುದಿಲ್ಲ.
ಕವನವು ೧೬ ಗೆರೆಗಳಿಗೆ ಸೀಮಿತವಾಗಿರಬೇಕು. ಕನ್ನಡ ಭಾಷೆಯ ಚುಟುಕು ಕವನ (೪ ಸಾಲಿನ ಗರಿಷ್ಠ ೪ ಕವನಗಳಿಗೆ ಮಾತ್ರ ಅವಕಾಶ). ಮಕ್ಕಳ ಕವನ(೬ ರಿಂದ ೧೩ ವರ್ಷ ಒಳಪಟ್ಟವರು)ಗಳಿಗೂ ಅವಕಾಶ ಕಲ್ಪಿಸಲಾಗಿದೆ. ಕವನಗಳನ್ನು ಕಳುಹಿಸುವವರು ತಮ್ಮ ಪೂರ್ಣ ವಿಳಾಸ, ಮೊಬೈಲ್ ಸಂಖ್ಯೆ, ಭಾವಚಿತ್ರವನ್ನು ತಪ್ಪದೆ ಕಳುಹಿಸಿಕೊಡಬೇಕು. ಮಾಹಿತಿಗಳಿಲ್ಲದ ಕವನಗಳನ್ನು ಆಯ್ಕೆಗೆ ಪರಿಗಣಿಸಲಾಗುವುದಿಲ್ಲ. ಕವನಗಳನ್ನು ಮತ್ತು ಮಾಹಿತಿಯನ್ನು ವ್ಯಾಟ್ಸಾö್ಯಪ್ ಸಂಖ್ಯೆಗೂ ಕಳುಹಿಸಬಹುದು. ಕವನಗಳನ್ನು ಟೈಪ್ ಮಾಡಿ ಕಳುಹಿಸಬೇಕು. ವಾಟ್ಸಾö್ಯಪ್‌ನಲ್ಲಿ ಕವನದ ಛಾಯಾ ಪ್ರತಿಯನ್ನು ಕಳುಹಿಸಿದರೆ ಅದನ್ನು ಪರಿಗಣಿಸಲಾಗುವುದಿಲ್ಲ.
ಬಂದ ಕವನಗಳನ್ನು ಪರಾಮರ್ಶಿಸಿ ಆಯ್ಕೆಯಾದ ಕವಿಗಳಿಗೆ ಕವನ ವಾಚನ ಮಾಡಲು ಅವಕಾಶ ನೀಡಲಾಗುವುದು. ವಾಟ್ಸಾö್ಯಪ್ ಸೌಲಭ್ಯ ಇಲ್ಲದಿರುವವರು ಅಂಚೆ ಮೂಲಕ ಕಡ್ಲೇರ ತುಳಸಿ ಮೋಹನ್, ಅಧ್ಯಕ್ಷರು, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಬೆಟ್ಟಗೇರಿ ಗ್ರಾಮ ಮತ್ತು ಅಂಚೆ, ಮಡಿಕೇರಿ ತಾಲೂಕು - ೫೭೧೨೦೧ ಈ ವಿಳಾಸಕ್ಕೆ ಕಳುಹಿಸಬಹುದು. ವಾಟ್ಸಾö್ಯಪ್ ಮಾಡುವವರು ೯೪೮೩೧೧೦೯೪೦ ಗೆ ಕಳುಹಿಸಬಹುದು ಎಂದು ೧೨ನೇ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಧಾನ ಕಾರ್ಯದರ್ಶಿ ಬಾಳೆಯಡ ದಿವ್ಯಾ ಮಂದಪ್ಪ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.