ಶನಿವಾರಸಂತೆ: ಏ. ೩೦: ಸಮೀಪದ ಹೆಮ್ಮನೆ ಗ್ರಾಮದ ಶ್ರೀಬಸವೇಶ್ವರ ಸೇವಾ ಸಮಿತಿ ವತಿಯಿಂದ ಶ್ರೀಬಸವೇಶ್ವರ ದೇವಸ್ಥಾನ ಹಾಗೂ ಹೊಳೆಯಲ್ಲಿ ಶ್ರೀಬಸವೇಶ್ವರ ಸ್ವಾಮಿಯ ವಾರ್ಷಿಕ ಪೂಜಾ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ನೆರವೇರಿತು. ಮಧ್ಯಾಹ್ನ ೧೨.೩೦ ಗಂಟೆಯಿAದ ವಿಶೇಷ ಪೂಜೆ, ಮಹಾಮಂಗಳಾರತಿ ನಡೆದು, ತೀರ್ಥ-ಪ್ರಸಾದ ವಿನಿಯೋಗವಾಯಿತು ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಸಂಜೆ ಬಸವಣ್ಣ ದೇವರನ್ನು ಅಡ್ಡೆಯಲ್ಲಿ ಕುಳ್ಳಿರಿಸಿ, ಗ್ರಾಮದಲ್ಲಿ ಮೆರವಣಿಗೆ ಮಾಡಲಾಯಿತು. ಅರ್ಚಕ ದಯಾನಂದ ಪೂಜಾ ಕೈಂಕರ್ಯ ನೆರವೇರಿಸಿದರು. ಶ್ರೀ ಬಸವೇಶ್ವರ ಸೇವಾ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಗ್ರಾಮ ಪ್ರಮುಖರು ಹಾಜರಿದ್ದರು.