ಐಗೂರು/ಗೋಣಿಕೊಪ್ಪಲು, ಏ. ೩೦: ಬಿರುಬಿಸಿಲಿನ ನಡುವೆ ಅಲ್ಲಲ್ಲಿ ಮಳೆಯಾಗಿದೆ. ಐಗೂರು ವ್ಯಾಪ್ತಿಯಲ್ಲಿ ೨೫ ಸೆಂಟು ಮಳೆಯಾಗಿದೆ.
ಗೋಣಿಕೊಪ್ಪಲುವಿನಲ್ಲಿ ಸಂಜೆಯ ವೇಳೆ ಗುಡುಗು ಮಿಂಚಿನೊAದಿಗೆ ಮಳೆ ಸುರಿದ ಪರಿಣಾಮ ಕಾದಿದ್ದ ಭೂಮಿ ಕೊಂಚ ತಂಪಾಯಿತು.
ಗುಡುಗು ಮಿಂಚಿನ ರಭಸದ ಹಿನ್ನೆಲೆಯಲ್ಲಿ ಚೆಸ್ಕಾಂ ಇಲಾಖೆ ಮುಂಜಾಗ್ರತಾ ಕ್ರಮವಾಗಿ ವಿದ್ಯುತ್ ಅನ್ನು ಕೆಲಕಾಲ ನಿಲುಗಡೆಗೊಳಿಸಿತ್ತು.
ಸಿದ್ದಾಪುರ ವ್ಯಾಪ್ತಿಯಲ್ಲಿ
ಸಿದ್ದಾಪುರ ಹಾಗೂ ಅಮ್ಮತ್ತಿ ಹೋಬಳಿ ವ್ಯಾಪ್ತಿಯಲ್ಲಿ ಗುಡುಗು ಸಹಿತ ಮಳೆ ಸುರಿದಿದೆ. ಅಮ್ಮತ್ತಿ ಪಟ್ಟಣ ವ್ಯಾಪ್ತಿಯಲ್ಲಿ ಗುಡುಗು ಮಿಂಚು ಸಹಿತ ಧಾರಾಕಾರ ಮಳೆ ಸುರಿದಿದ್ದು, ಅಬ್ಬರದ ಸಿಡಿಲಿನ ಹಾಗೂ ಮಿಂಚಿನ ಒಡೆತ ಸಾರ್ವಜನಿಕರಲ್ಲಿ ಆತಂಕ ಮೂಡಿಸಿತು. ಬಿಸಿಲಿನಿಂದ ಬಸವಳಿದಿದ್ದ ಜನರು ಕೊಂಚ ನಿರಾಳರಾದರು. ಕೃಷಿಕರು ಸಂತಸ ಅನುಭವಿಸಿದರು.
ಅಮ್ಮತ್ತಿ ಭಾಗದಲ್ಲಿ ಗಾಳಿ ಮಳೆಯಿಂದ ವಿದ್ಯುತ್ ತಂತಿಯ ಮೇಲೆ ಮರಗಳು ಬಿದ್ದ ಪರಿಣಾಮ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ೩೩ ಕೆವಿ ಲೈನ್ ಮೇಲೆ ಮರ ಬಿದ್ದು ಎರಡು ಕಂಬ ಮತ್ತು ೧೦ ವಿದ್ಯುತ್ ತಂತಿ ತುಂಡಾಗಿರುವ ಹಿನ್ನೆಲೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಚೆಸ್ಕಾಂ ಪ್ರಕಟಣೆ ತಿಳಿಸಿದೆ.