ಮಡಿಕೇರಿ, ಏ. ೨೮: ಚೆರಿಯಪರಂಬುವಿನ ಜ. ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಚೇನಂಡ ಕೊಡವ ಕೌಟುಂಬಿಕ ಹಾಕಿ ಉತ್ಸವದಲ್ಲಿ ಹಾಲಿ ಚಾಂಪಿಯನ್ ತಂಡ ಮಂಡೇಪAಡ ಹೊರಬಿದ್ದಿದೆ. ಪರದಂಡ ವಿರುದ್ಧ ೪-೨ ಗೋಲುಗಳಿಂದ ಮಂಡೇಪAಡ ಪರಾಜಿತಗೊಂಡಿದೆ. ಇದರೊಂದಿಗೆ ಇಂದಿನ ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಕಂಬೀರAಡ, ಮೂಕೊಂಡ, ಪರದಂಡ ತಂಡಗಳು ಗೆದ್ದು ಕ್ವಾರ್ಟರ್ ಫೈನಲ್‌ಗೆ ಲಗ್ಗೆಯಿಟ್ಟಿವೆ. ಕಂಬೀರAಡ ಹಾಗೂ ಅರಮಣಮಾಡ ನಡುವಿನ ಪಂದ್ಯದಲ್ಲಿ ೨-೧ ಗೋಲುಗಳಿಂದ ಕಂಬೀರAಡ ಜಯ ಸಾಧಿಸಿತು. ಕೋಳೆರ ಹಾಗೂ ಚೆಪ್ಪುಡಿರ ನಡುವಿನ ಪಂದ್ಯದಲ್ಲಿ ಚೆಪ್ಪುಡಿರ ೨-೦ ಗೋಲುಗಳಿಂದ ಜಯ ಸಾಧಿಸಿತು. ಮೂಕೊಂಡ ಹಾಗೂ ಇಟ್ಟಿರ ನಡುವಿನ ಪಂದ್ಯದಲ್ಲಿ ೫-೧ ಗೋಲುಗಳಿಂದ ಮೂಕೊಂಡ ಗೆಲುವು ಪಡೆಯಿತು.
ಮಹಿಳಾ ವಿಜೇತರು
೫ ಎ ಸೈಡ್ ಮಹಿಳಾ ವಿಭಾಗದಲ್ಲಿ ಶಿವಚಾಳಿಯಂಡ ಹಾಗೂ ತೆಕ್ಕಡ ನಡುವಿನ ಪಂದ್ಯದಲ್ಲಿ ಶಿವಚಾಳಿಯಂಡ ೨-೦ ಗೋಲುಗಳಿಂದ ಗೆಲುವು ಪಡೆದಿದೆ. ನಾಪಂಡ ಹಾಗೂ ಮುಕ್ಕಾಟಿರ (ಬೆಳ್ಳೂರು-ಹರಿಹರ) ನಡುವಿನ ಪಂದ್ಯದಲ್ಲಿ ನಾಪಂಡ ೩-೧ ಗೋಲುಗಳಿಂದ ಗೆಲುವು ಸಾಧಿಸಿತು.
ತಾತಂಡ ಹಾಗು ಕಾಯಪಂಡ ನಡುವಿನ ಪಂದ್ಯದಲ್ಲಿ ತಾತಂಡ ವಿಜಯವಾಯಿತು. ಪಂದ್ಯದ ಅವಧಿಯಲ್ಲಿ ೧-೧ ಸಮಬಲವನ್ನು ಉಭಯ ತಂಡಗಳು ಸಾಧಿಸಿದ್ದವು. ಟೈಬ್ರೇಕರ್‌ನಲ್ಲಿ ೧-೦ ಗೋಲುಗಳಿಂದ ತಾತಂಡ ಜಯಗಳಿಸಿತು. ಪಾಂಡಿರ ವಿರುದ್ಧ ಕೆಚ್ಚೆಟಿರ ೫-೦ ಗೋಲುಗಳಿಂದ ಜಯ ಸಾಧಿಸಿತು. ಕಂಬೀರAಡ ಹಾಗೂ ಚೆಯ್ಯಂಡ ನಡುವಿನ ಪಂದ್ಯದಲ್ಲಿ ಕಂಬೀರAಡ ೭-೧ ಗೋಲುಗಳಿಂದ ಗೆಲುವಿನ ನಗೆಬೀರಿತು. ಪಾಡೆಯಂಡ ಹಾಗೂ ಚೆಪ್ಪುಡಿರ ನಡುವಿನ ಪಂದ್ಯಾಟದಲ್ಲಿ ಚೆಪ್ಪುಡಿರ ೩-೧ ಗೋಲುಗಳಿಂದ ಗೆಲುವು ತನ್ನದಾಗಿಸಿಕೊಂಡಿತು. ಬಲ್ಲಚಂಡ ವಿರುದ್ಧ ಆದೇಂಗಡ ೩-೦ ಗೋಲುಗಳ ಗೆಲುವು ಪಡೆಯಿತು.
ಕಲಿಯಂಡ ಹಾಗೂ ಪೊನ್ನಚೆಟ್ಟಿರ ನಡುವಿನ ಪಂದ್ಯಾಟದಲ್ಲಿ ಪೊನ್ನಚೆಟ್ಟಿರ ೧-೨ ಗೋಲುಗಳಿಂದ ಜಯ ಪಡೆಯಿತು. ನಾಪಂಡ ಹಾಗು ಶಿವಚಾಳಿಯಂಡ ನಡುವಿನ ಹಣಾಹಣಿಯಲ್ಲಿ ಶಿವಚಾಳಿಯಂಡ ೦-೨ ಗೋಲುಗಳಿಂದ ವಿಜಯಿಯಾಯಿತು. ಕೆಚ್ಚೆಟಿರ ಹಾಗೂ ತಾತಂಡ ನಡುವಿನ ಪಂದ್ಯಾಟದಲ್ಲಿ ಕೆಚ್ಚೇಟಿರ ೭-೦ ಗೋಲುಗಳಿಂದ ಗೆಲುವು ದಾಖಲಿಸಿತು. ಕಂಬೀರAಡ ಹಾಗೂ ಚೆಪ್ಪುಡಿರ ನಡುವಿನ ಪಂದ್ಯದಲ್ಲಿ ೫-೦ ಗೋಲುಗಳಿಂದ ಕಂಬೀರAಡ ಗೆಲುವು ಪಡೆಯಿತು. ಪೊನ್ನಚೆಟ್ಟಿರ ತಂಡವನ್ನು ಆದೇಂಗಡ ೩-೧ ಗೋಲುಗಳಿಂದ ಮಣಿಸಿತು. ಕೆಚ್ಚೆಟಿರ ಹಾಗೂ ತಾತಂಡ ನಡುವಿನ ಪಂದ್ಯದಲ್ಲಿ ಕೆಚ್ಚೆಟಿರ ೦-೭ ಗೋಲುಗಳಿಂದ ಜಯ ಪಡೆಯಿತು.