ಮಡಿಕೇರಿ, ಏ. ೨೮: ಕೊಡವ ಕುಟುಂಬಗಳ ನಡುವೆ ಮೂರ್ನಾಡಿನಲ್ಲಿ ನಡೆಯುತ್ತಿರುವ ೨೪ನೇ ವರ್ಷದ ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆಯಲ್ಲಿ ಮಂಗಳವಾರ ನಡೆದ ಕ್ವಾರ್ಟರ್ ಫೈನಲ್‌ನಲ್ಲಿ ಗೆದ್ದ ತಂಡಗಳು ಸೆಮಿಫೈನಲ್ ಸಮರಕ್ಕೆ ಸಜ್ಜಾಗಿದೆ. ತಾ. ೨೯ ರಂದು (ಇಂದು) ಪುರುಷರ ಹಾಗೂ ಮಹಿಳೆಯರ ವಿಭಾಗದ ಸೆಮಿಫೈನಲ್ ನಡೆಯಲಿದೆ.

ಚೆಕ್ಕೇರ ಮತ್ತು ಮಲ್ಲಾಜ್ಜಿರ ತಂಡಗಳ ನಡುವಿನ ಪಂದ್ಯದಲ್ಲಿ ಚೆಕ್ಕೇರ ೬೪ ರನ್‌ಗಳಿಂದ ಗೆಲುವು ಸಾಧಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಚೆಕ್ಕೇರ ೮ ಓವರ್ ಗಳಲ್ಲಿ ೪ ವಿಕೆಟ್ ನಷ್ಟಕ್ಕೆ ೧೦೦ ರನ್ ಸಾಧನೆ ಮಾಡಿತು. ಮಲ್ಲಾಜ್ಜಿರ ೮ ಓವರ್‌ಗಳಲ್ಲಿ ೯ ವಿಕೆಟ್ ನಷ್ಟಕ್ಕೆ ಕೇವಲ ೩೬ ರನ್‌ಗಳನ್ನಷ್ಟೇ ಸೇರಿಸಿ ಸೋಲೊಪ್ಪಿಕೊಂಡಿತು. ಚೆಕ್ಕೇರ ಆಕರ್ಷ್ ೪೭ ರನ್ ಗಳಿಸಿ ತಂಡದ ಗೆಲುವಿಗೆ ಸಹಕಾರಿಯಾದರು. ಮಲ್ಲಜ್ಜಿರ ಪರ ರೋಷನ್ ೨ ವಿಕೆಟ್ ಪಡೆದು ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಮೋಟನಾಳಿರ ಮತ್ತು ಪಂದ್ಯAಡ ನಡುವಿನ ಪಂದ್ಯದಲ್ಲಿ ಪಂದ್ಯAಡ ತಂಡಕ್ಕೆ ೭ ವಿಕೆಟ್‌ಗಳ ಜಯ ಲಭಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮೋಟನಾಳಿರ ೮ ಓವರ್‌ಗಳಲ್ಲಿ ೬ ವಿಕೆಟ್ ನಷ್ಟಕ್ಕೆ ೫೫ ರನ್ ಸೇರಿಸಿತು. ಪಂದ್ಯAಡ ೪ ಓವರ್‌ಗಳಲ್ಲಿ ೩ ವಿಕೆಟ್ ನಷ್ಟಕ್ಕೆ ೫೯ ರನ್ ಗಳಿಸಿ ಗೆಲುವು ದಾಖಲಿಸಿತು. ಮೋಟನಾಳಿರ ಶರತ್ ೨೫ ರನ್ ಸೇರಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಪಂದ್ಯAಡ ಅಯ್ಯಪ್ಪ ೧೮ ರನ್ ಗಳನ್ನು ಗಳಿಸಿದರು. ಮಾಳೇಟಿರ (ಕೆದಮುಳ್ಳೂರು) ಮತ್ತು ಅಳಮೇಂಗಡ ನಡುವಿನ ಪಂದ್ಯದಲ್ಲಿ ಮಾಳೇಟಿರ ೪೦ ರನ್‌ಗಳಿಂದ ವಿಜಯ ಸಾಧಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮಾಳೇಟಿರ ೮ ಓವರ್‌ಗಳಲ್ಲಿ ೫ ವಿಕೆಟ್ ನಷ್ಟಕ್ಕೆ ೯೫ ರನ್ ಗಳಿಸಿತು. ಅಳಮೇಂಗಡ ೮ ಓವರ್‌ಗಳಲ್ಲಿ ೫ ವಿಕೆಟ್ ನಷ್ಟಕ್ಕೆ ೫೫ ರನ್ ಸೇರಿಸಿ ಸೋಲು ಕಂಡಿತು. ಮಾಳೇಟಿರ ರಿಷಬ್ ೬೪ ರನ್ ಸೇರಿಸಿ ತಂಡದ ಗೆಲುವಿಗೆ ಸಹಕಾರಿಯಾದರು. ಅಳಮೇಂಗಡ ದಿಲೀಪ್ ೩೪ ರನ್ ಗಳಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಅಳಮೇಂಗಡ ಪರ ಸೋಮಣ್ಣ ೩ ವಿಕೆಟ್ ಪಡೆದರು.

ನೆರವಂಡ ಮತ್ತು ಪಾರುವಂಡ ನಡುವಿನ ಪಂದ್ಯದಲ್ಲಿ ೮ ವಿಕೆಟ್‌ಗಳಿಂದ ಪಾರುವಂಡ ಗೆಲುವು ದಾಖಲಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ನೆರವಂಡ ೮ ಓವರ್‌ಗಳಲ್ಲಿ ೪ ವಿಕೆಟ್ ನಷ್ಟಕ್ಕೆ ೭೭ ರನ್ ಸೇರಿಸಿತು. ಪಾರುವಂಡ ೫.೫ ಓವರ್‌ಗಳಲ್ಲಿ ೨ ವಿಕೆಟ್ ನಷ್ಟಕ್ಕೆ ೭೮ ರನ್ ಗಳಿಸಿ ಗೆಲುವಿನ ನಗು ಬೀರಿತು. ಪ್ರವೀಣ್ ೩೫ ರನ್ ಪೇರಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಪಾರುವಂಡ ಪ್ರಿನ್ಸ್ ೫೯ ರನ್ ಗಳನ್ನು ಗಳಿಸಿ ತಂಡದ ಗೆಲುವಿಗೆ ಸಹಕಾರಿಯಾದರು