ಗೋಣಿಕೊಪ್ಪಲು, ಏ. ೨೮: ಯರವ ಸಮಾಜದಿಂದ ಆಯೋಜಿತ ೧೫ನೇ ವರ್ಷದ ಯರವ ಕ್ರೀಡೋತ್ಸವ ತಾ. ೨೯ ರಿಂದ (ಇಂದಿನಿAದ) ಮೇ ೩ರವರಗೆ ತಿತಿಮತಿ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ನಡೆಯಲಿದೆ. ಜಿಲ್ಲೆಯ ೬೦ ಯರವ ಕುಟುಂಬಗಳು ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಲಿವೆ.

ಪಂದ್ಯಾಟದ ಆತಿಥ್ಯವನ್ನು ಉಳಕುಚ್ಚುಲಾತ್ಲೇರಂಡ ಕುಟುಂಬ ವಹಿಸಿಕೊಂಡಿದ್ದು, ಈಗಾಗಲೇ ಪಂದ್ಯಾಟಕ್ಕೆ ಅಂತಿಮ ಸಿದ್ಧತೆಗಳು ನಡೆದಿವೆ. ಈ ಬಾರಿ ೮ ಮಹಿಳಾ ತಂಡಗಳು ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿರುವುದು ಮತ್ತೊಂದು ವಿಶೇಷವಾಗಿದೆ. ದಾನಿಗಳ ಸಹಕಾರದಿಂದ ಸಮಾಜದ ಯುವ ಉತ್ಸಾಹಿ ಯುವಕರ ತಂಡ ಕ್ರೀಡಾಕೂಟ ಆಯೋಜನೆಯಲ್ಲಿ ತೊಡಗಿಸಿಕೊಂಡಿದೆ.

ಇಂದು ಬೆಳಿಗ್ಗೆ ೯.೩೦ ಗಂಟೆಗೆ ಪಂದ್ಯಾವಳಿ ಆರಂಭಗೊಳ್ಳಲಿದ್ದು ಉದ್ಘಾಟನಾ ಪಂದ್ಯವನ್ನು ಕಾಪ್ಸ್ ವಿದ್ಯಾ ಸಂಸ್ಥೆಯ ಪಬ್ಲಿಕ್ ರಿಲೆಷನ್ ಮ್ಯಾನೇಜರ್ ಅಣ್ಣಳಮಾಡ ಮಾನಸ ತಿಮ್ಮಯ್ಯ, ಪಾಲಿಬೆಟ್ಟದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮೂಕೊಂಡ ವಿಜು ಸುಬ್ರಮಣಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಗುಮ್ಮಟ್ಟಿರ ಕಿಲನ್ ಗಣಪತಿ ಹಾಗೂ ಇತರ ಗಣ್ಯರು ಉದ್ಘಾಟಿಸಲಿದ್ದಾರೆ.

ಯರವ ಸಮಾಜದ ಅಧ್ಯಕ್ಷ ಸಿದ್ದಪ್ಪ ಅಧ್ಯಕ್ಷತೆಯಲ್ಲಿ ಮೇ ೩ರ ಸಂಜೆ ೪ಗಂಟೆಗೆ ನಡೆಯುವ ಸಮಾರೋಪ ಸಮಾರಂಭಕ್ಕೆ ಮುಖ್ಯಮಂತ್ರಿ ಕಾನೂನು ಸಲಹೆಗಾರ, ಶಾಸಕ ಎ.ಎಸ್.ಪೊನ್ನಣ್ಣ, ಕ್ರೀಡಾ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷÀ ಸಿ.ಎಸ್.ಅರುಣ್ ಮಾಚಯ್ಯ, ರಾಜ್ಯ ಚೀಫ್ ಎಲೆಕ್ಟಿçಕಲ್ ಆಫೀಸರ್ ತೀತಿರ ಅಪ್ಪಚ್ಚು, ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಅಂಗವಾಗಿ ಎಸ್‌ಎಸ್‌ಎಲ್‌ಸಿಯಲ್ಲಿ ಅತ್ಯಾಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.