ಶನಿವಾರಸಂತೆ, ಏ. ೨೮: ಸಮೀಪದ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಬೆಸೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ೨೦೦೭-೦೮ನೇ ಸಾಲಿನ ಗುರು ವೃಂದದವರಿಗೆ ಗುರು ವಂದನಾ ಹಾಗೂ ೧೦ನೇ ತರಗತಿಯ ಹಳೇ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮ ಶಾಲಾ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಬೆಸೂರು ಶಾಲೆಯ ೧೦ ಮಂದಿ ನಿವೃತ್ತ ಶಿಕ್ಷಕರು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಹಳೇ ವಿದ್ಯಾರ್ಥಿಗಳು ಶಿಕ್ಷಕರಾದ ಶೇಷಾದ್ರಿ, ರೇಣುಕಾ, ಅಬ್ದುಲ್ ನವಾಜ್, ಧರ್ಮಪ್ಪ, ಬಿ.ಆರ್.ಮಂಜುನಾಥ್, ಬಿ.ಡಿ. ವೆಂಕಟೇಶ್, ಬಿ.ಎಚ್. ರಾಜಶೇಖರ್, ಸಂಗೀತಾ ಬಿ. ನಾಯ್ಕ್, ಸತ್ಯವತಿ, ಚಂದ್ರಪ್ಪ, ಅಮೃತ್, ಡಿ.ಎಸ್. ದೇವರಾಜ್ ಹಾಗೂ ಸಿಬ್ಬಂದಿ ದಿ. ಚೆನ್ನಯ್ಯ ಅವರ ಕುಟುಂಬದವರನ್ನು ಸನ್ಮಾನಿಸಿ,, ಸ್ಮರಣಿಕೆ ನೀಡಿ ಗೌರವಿಸಿದರು.
ನಿವೃತ್ತ ಶಿಕ್ಷಕರು ತಮ್ಮ ಸೇವಾ ಅವಧಿಯ ಶಾಲಾ ದಿನಗಳನ್ನು ಸ್ಮರಿಸಿಕೊಂಡು ಸಿಹಿ-ಕಹಿ, ಸಂತೋಷದ ಕ್ಷಣಗಳನ್ನು ಮೆಲುಕು ಹಾಕುತ್ತಾ ತಮ್ಮ ಅನಿಸಿಕೆಗಳನ್ನು ಭಾವನಾತ್ಮಕವಾಗಿ ಹಂಚಿಕೊAಡರು.
೫೦ ಮಂದಿ ಹಳೇ ವಿದ್ಯಾರ್ಥಿಗಳು ಶಾಲಾ ತರಗತಿಗಳಲ್ಲಿ ಕುಳಿತು ತಮ್ಮ ನೆಚ್ಚಿನ ಗುರುಗಳ ಪಾಠ ಬೋಧನೆಯನ್ನು ಕೇಳಿದರು. ಗುರು-ಶಿಷ್ಯರು ವಿವಿಧ ವಿನೋದಾವಳಿಯ ಆಟಗಳನ್ನು ಆಡಿದರು. ಸಾಮೂಹಿಕ ವಿಶೇಷ ಸಿಹಿ ಭೋಜನ ಸವಿದು ಸಂಭ್ರಮಿಸಿದರು.
ಹಳೇ ವಿದ್ಯಾರ್ಥಿಗಳಾದ ಭುವನಾ ಮತ್ತು ಸುಷ್ಮಾ ಪ್ರಾರ್ಥಿಸಿದರು. ಪ್ರಸನ್ನಕುಮಾರ್ ಸ್ವಾಗತಿಸಿದರು. ಚೈತ್ರಾ ಪ್ರಾಸ್ತಾವಿಕ ನುಡಿಯಾಡಿದರು.ಕವನಾ ಮತ್ತು ಪ್ರಸನ್ನ ಕುಮಾರ್ ನಿರೂಪಿಸಿದರು. ಅವಿನಾಶ್ ವಂದಿಸಿದರು.