ಚೆಯ್ಯಂಡಾಣೆ, ಏ. ೨೫: ಚೆಯ್ಯಂಡಾಣೆ ಸಮೀಪದ ಚೇಲಾವರ ಗ್ರಾಮದ ಕಡಿಯತ್ ನಾಡು ಪೊನ್ನೋಲ ಸಾರ್ಥಾವು ಬೈತೂರ್ ಕಾರ್ಯಾರು ಹಾಗೂ ಪುದಿಯೋದಿ ದೇವರ ವಾರ್ಷಿಕ ಉತ್ಸವವು ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ನಡೆಯಿತು.
ತಾ. ೧೪ ರಂದು ಬೆಳಿಗ್ಗೆ ೯ ಗಂಟೆಗೆ ಪಡಿಞರಮ್ಮಂಡ ದೇವತಕ್ಕರ ಮನೆಯಿಂದ ಭಂಡಾರ ಆಗಮಿಸುವುದರ ಮೂಲಕ ಧಾರ್ಮಿಕ ವಿಧಿವಿಧಾನಗಳು ಆರಂಭಗೊAಡವು. ನಂತರ ತಾ. ೧೮ ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳಾದ ಎತ್ತು ಪೋರಾಟ, ಮಹಾಪೂಜೆ ಅಂದಿ ಬೊಳಕ್, ತೆಂಗಿನಕಾಯಿ ಪೊರುವುದು, ಕಣಿ ಪೂಜೆ, ವಿಶೇಷ ಪೂಜೆ, ವಾರ್ಷಿಕ ಮಹಾ ಸಭೆ, ದೇವ ತಕ್ಕರ ಮನೆಗೆ ಭಂಡಾರ ಹೊರಡುವುದು, ಪುದಿಯೋದಿ ದೇವರಿಗೆ ಮೇಲೆರಿ ಸೌದೆ ಕಡಿಯುವುದು, ದೇವತಕ್ಕರ ಮನೆಯಿಂದ ಭಂಡಾರ ಬರುವುದು, ಮೊದಲ ತೋತ, ಎರಡನೇ ತೋತ, ಮೆಲೇರಿ ಅಗ್ನಿ ಹಾಕುವುದು, ಮೂರನೇ ತೋತ, ಬಿರಾಳಿ ತೆರೆ, ಪುದಿಯೋದಿ ತೆರೆ, ಭದ್ರಕಾಳಿ ತೆರೆ ನಡೆದು ನಂತರ ತಕ್ಕರ ಮನೆಗೆ ಭಂಡಾರ ಹಿಂದಿರುಗಿಸಲಾಯಿತು. ಈ ಬಾರಿ ಸ್ಥಳೀಯ ೩ ಜನ ತಿರುವಳಕಾರರು, ಕೇರಳದ ಪ್ರಖ್ಯಾತ ಚಂಡೆ ಮೇಳದ ತಂಡದವರಿAದ ಚಂಡೆ ವಾದ್ಯ ಹಾಗೂ ಆಕರ್ಷಕ ದೀಪಾಲಂಕಾರ ನೋಡುಗರ ಗಮನ ಸೆಳೆಯಿತು.