ಸುಂಟಿಕೊಪ್ಪ, ಏ. ೨೫: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ರಾಷ್ಟಿçÃಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೀಡಿದ್ದ ಹೇಳಿಕೆಯನ್ನು ಖಂಡಿಸಿ ಸುಂಟಿಕೊಪ್ಪದಲ್ಲಿ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಯಿತು.

ಕನ್ನಡ ವೃತ್ತದಲ್ಲಿ ಪ್ರತಿಭಟನೆ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪಿ. ಆರ್.ಸುನಿಲ್ ಕುಮಾರ್, ವಿಶ್ವ ಮೆಚ್ಚಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭಯೋತ್ಪಾದಕ ಎಂದು ಕರೆದಿರುವುದರಿಂದ ದೇಶದ ಜನತೆಯೇ ತಲೆತಗ್ಗಿಸುವಂತಾಗಿದೆ. ಮೋದಿ ಹಾಗೂ ದೇಶದ ಜನರಲ್ಲಿ ಖರ್ಗೆ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ನಗರಾಧ್ಯಕ್ಷ ಎಂ.ಟಿ.ಧನು ಕಾವೇರಪ್ಪ, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಬಿ.ಕೆ.ಪ್ರಶಾಂತ್, ಯುವ ಮೋರ್ಚಾ ಆಧ್ಯಕ್ಷ ವಿಘ್ನೇಶ್, ಕಾರ್ಯದರ್ಶಿ ನಿಖಿಲ್, ಮುಖಂಡರಾದ ವಾಸುದೇವ, ಪುನೀತ್, ಓಡಿಯಪ್ಪನ ಸುದೀಶ್, ಬೂತ್ ಆದ್ಯಕ್ಷ ಪಾಂಡ್ಯನ್, ಆಕಾಶ್, ಲೀಲಾ ಮೇದಪ್ಪ, ತ್ರಿಶೂಲ್ ಸೇರಿದಂತೆ ಕಾರ್ಯಕರ್ತರು ಇದ್ದರು.