ವೀರಾಜಪೇಟೆ, ಏ.೨೫: ಸವಾಲನ್ನು ಎದುರಿಸುವುದು ಹಾಗೂ ಸವಾಲುಗಳನ್ನು ಗೆಲ್ಲುವುದನ್ನು, ಕ್ರೀಡೆಯ ಮೂಲಕ ಕಲಿತು ನಿಜ ಜೀವನದಲ್ಲೂ ಅಳವಡಿಸಿಕೊಳ್ಳುವ ಪ್ರಯತ್ನ ಮಾಡಿದರೆ ಎಲ್ಲರಿಗೂ ಯಶಸ್ಸು ಸಿಗುತ್ತದೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವೀರಾಜಪೇಟೆ ಶಾಸಕರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಹೇಳಿದರು.

ವಿರಾಜಪೇಟೆಯಲ್ಲಿ ನಡೆಯುತ್ತಿರುವ, ಲೆಜೆಂಡ್ಸ್ ಕಪ್ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿಯಲ್ಲಿ ಮುಖ್ಯ ಅತಿಥಿಯಾಗಿ, ಭಾಗವಹಿಸಿ ಕ್ರೀಡಾಪಟುಗಳನ್ನು ಉದ್ದೇಶಿಸಿ ಮಾತನಾಡಿದ ಶಾಸಕರು, ಇಂದಿನ ಯುವಕರು ಕ್ರಿಕೆಟ್ನಲ್ಲಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವುದಕ್ಕೆ ಇಂತಹ ಟೂರ್ನಮೆಂಟ್‌ಗಳು ಸಹಕಾರಿಯಾಗಲಿದೆ. ಜೀವನದ ಪಾಠವನ್ನು ಸಹ ಕ್ರಿಕೆಟ್ನಿಂದ ಕಲಿಯಬಹುದು. ಎಲ್ಲರೂ ಜೀವನದಲ್ಲಿ ಶಿಸ್ತನ್ನು ಅಳವಡಿಸಿಕೊಳ್ಳುವಂತೆ ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷ ನಾಸಿರ್, ಪ್ರಮುಖರಾದ ಅಪ್ಪಣ್ಣ ಹಾಗೂ ಆಯೋಜನ ಸಮಿತಿಯ ಪ್ರಮುಖರು ಉಪಸ್ಥಿತರಿದ್ದರು.