ನಾಪೋಕ್ಲು, ಏ. ೨೪: ಬಲ್ಲಮಾವಟಿ ನಾಲ್ನಾಡ್ ಹಾಕಿ ಕ್ಲಬ್‌ನ ವತಿಯಿಂದ ಬಲ್ಲಮಾವಟಿಯ ನೇತಾಜಿ ಪ್ರೌಢಶಾಲಾ ಆಟದ ಮೈದಾನದಲ್ಲಿ ಹಾಕಿ ತರಬೇತಿ ಶಿಬಿರವನ್ನು ಉದ್ಘಾಟಿಸಲಾಯಿತು. ಕೊಡಗಿನ ಹಿರಿಯ ಹಾಕಿ ಆಟಗಾರ ಮಡಿಕೇರಿಯ ವಾಂಡರ್ಸ್ ಕ್ಲಬ್ಬಿನ ತರಬೇತುದಾರ ಕೋಟೆರ ನಾಣಯ್ಯ ಉದ್ಘಾಟಿಸಿ ಮಾತನಾಡಿ, ಶಿಬಿರಾರ್ಥಿಗಳು ಯಾವ ರೀತಿಯಲ್ಲಿ ಶಾಲೆಯಲ್ಲಿ ಶಿಸ್ತು ಬದ್ಧವಾಗಿ ಪಾಠ ಪ್ರವಚನಗಳಲ್ಲಿ ಭಾಗವಹಿಸುತ್ತಿರೋ ಅದೇ ರೀತಿಯಲ್ಲಿ ಶಿಬಿರದಲ್ಲಿ ಭಾಗವಹಿಸಬೇಕು ಎಂದು ಸಲಹೆ ನೀಡಿದರು.

ಸಂಘದ ಅಧ್ಯಕ್ಷರಾದ ಕರವಂಡ ಸುರೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅಪ್ಪಚೆಟ್ಟೋಳಂಡ ಡಾಲಿ ಬೋಪಯ್ಯ, ನುಚ್ಚಿಮಣಿಯಂಡ ಗಣೇಶ ಭಾಗವಹಿಸಿದ್ದರು.

ಸಂಚಾಲಕ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭ ತರಬೇತುದಾರರಾದ ಅಂಜಪರವAಡ ರೋಷನ್, ಅಪ್ಪಚೆಟ್ಟೋಳಂಡ ಅಯ್ಯಪ್ಪ ,ಕರವಂಡ ಅಪ್ಪಣ್ಣ ಹಾಗೂ ನಾಲ್ನಾಡ್ ಹಾಕಿ ಕ್ಲಬ್ ಉಪಾಧ್ಯಕ್ಷ ಕೈಬಿಲಿರ ಉಮೇಶ್ ಉತ್ತಪ್ಪ, ಬೈರುಡ ಮಾಚಯ್ಯ, ಸಹಕಾರ್ಯದರ್ಶಿ ಮಚ್ಚುರ ಯಧುಕುಮಾರ್ ಸೇರಿದಂತೆ ಸಮಿತಿ ಸದಸ್ಯರು ಹಾಜರಿದ್ದರು. ಮಚ್ಚುರ ರಕ್ಷ, ಚೇನಂಡ ತಾನ್ವಿ ಪ್ರಾರ್ಥಿಸಿದ ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಚಂಗೇಟಿರ ಸೋಮಣ್ಣ ಸ್ವಾಗತಿಸಿ, ವಂದಿಸಿದರು.