ಮಡಿಕೇರಿ, ಏ. ೨೪: ಮಡಿಕೇರಿ ರೋಟರಿ ವುಡ್ಸ್ ವತಿಯಿಂದ ಸುಬ್ರಹ್ಮಣ್ಯ - ಚಾರ್ಮಾಡಿ ಘಾಟ್‌ಗಾಗಿ ಬೈಕ್ ರೈಡ್ ಆಯೋಜಿಸಲಾಗಿತ್ತು.
ರೋಟರಿ ಸಂಸ್ಥೆಯ ಪ್ರಮುಖರಾದ ಬಿ.ಜಿ. ಅನಂತಶಯನ, ರೋಟರಿ ವುಡ್ಸ್ ಅಧ್ಯಕ್ಷ ಕಿರಣ್ ಕುಂದರ್, ನಿರ್ದೇಶಕರಾದ ಹರೀಶ್ ಕಿಗ್ಗಾಲು, ರಂಜಿತ್ ಕಿಗ್ಗಾಲು, ಚೇಂದ್ರಿಮಾಡ ವಿನು, ಕಶ್ಯಪ್ ಮತ್ತು ಚೇತನ್ ಪಾಲ್ಗೊಂಡಿದ್ದರು. ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಬೈಕ್ ರೈಡ್‌ಗೆ ರೋಟರಿ ಜಿಲ್ಲೆಯ ಪಬ್ಲಿಕ್ ಇಮೇಜ್ ಸಮಿತಿ ಉಪಾಧ್ಯಕ್ಷ ಅನಿಲ್ ಹೆಚ್.ಟಿ, ಮತ್ತು ರೋಟರಿವುಡ್ಸ್ ಮಾಜಿ ಅಧ್ಯಕ್ಷ ವಸಂತ್ ಕುಮಾರ್ ಚಾಲನೆ ನೀಡಿದರು.
ಸಂಪಾಜೆ ಮಾರ್ಗವಾಗಿ ಸುಬ್ರ‍್ರಹ್ಮಣ್ಯ ತಲುಪಿದ ಬೈಕ್ ರೈಡರ್‌ಗಳನ್ನು ಸುಬ್ರಹ್ಮಣ್ಯ ರೋಟರಿ ಸಂಸ್ಥೆಯ ಅಧ್ಯಕ್ಷರಾದ ಜಯಪ್ರಕಾಶ್, ನಿರ್ದೇಶಕರಾದ ಚಂದ್ರಶೇಖರ್, ರೋಹಿತ್ ಮತ್ತು ಸದಸ್ಯರು ಸ್ವಾಗತಿಸಿದರು. ಚಾರ್ಮಾಡಿ ಘಾಟ್‌ಗಾಗಿ ಬಂದ ರೈಡರ್‌ಗಳನ್ನು ಸೋಮವಾರಪೇಟೆ ರೋಟರಿ ಸಂಸ್ಥೆಯ ಅಧ್ಯಕ್ಷೆ ವೀಣಾ ಮನೋಹರ್, ನಿರ್ದೇಶಕ ದಿನೇಶ್, ಆಶಾ ಪುಟ್ಟರಾಜು ಮತ್ತು ಸದಸ್ಯರು ಸ್ವಾಗತಿಸಿದರು. ನಿಸರ್ಗ ರಮಣೀಯತೆ ನಡುವಿನ ೧೫೦ ಕಿ.ಮೀ. ಮಾರ್ಗದಲ್ಲಿ ಬೈಕ್ ರೈಡಿಂಗ್ ವಿನೂತನ ಅನುಭವ ನೀಡಿತ್ತು ಎಂದು ಸವಾರರು ಸಂತೋಷ ವ್ಯಕ್ತಪಡಿಸಿದರು.