ಮಡಿಕೇರಿ, ಏ. ೨೪: ಕೊಡವ ಕುಟುಂಬಗಳ ನಡುವಿನ ಕೌಟುಂಬಿಕ ಹಾಕಿ ಉತ್ಸವದ ಬೆಳ್ಳಿಹಬ್ಬ ಸಂಭ್ರಮದ ವಿಶೇಷತೆಯಾಗಿ ಕಳೆದ ವರ್ಷ ಮುದ್ದಂಡ ಕುಟುಂಬ ಆರಂಭಿಸಿದ ಕೌಟುಂಬಿಕ ಮಹಿಳಾ ಹಾಕಿ ಪಂದ್ಯಾವಳಿ ಇದೀಗ ಎರಡನೇ ವರ್ಷಕ್ಕೆ ಕಾಲಿರಿಸುತ್ತಿದೆ. ಕಳೆದ ವರ್ಷ ಯಶಸ್ಸು ಕಂಡ ಮಹಿಳಾ ಪಂದ್ಯಾವಳಿಯನ್ನು ಚೇನಂಡ ಕುಟುಂಬವೂ ಮುಂದುವರೆಸಿದ್ದು, ತಾ. ೨೫ ರಿಂದ (ಇಂದಿನಿAದ) ಮಹಿಳಾ ಹಾಕಿ ಕಲರವವೂ ನಾಪೋಕ್ಲುವಿನಲ್ಲಿ ಆರಂಭಗೊಳ್ಳಲಿದೆ. ಕಳೆದ ವರ್ಷ ೫೮ ಕುಟುಂಬಗಳು ಪಾಲ್ಗೊಂಡಿದ್ದರೆ ಈ ಬಾರಿ ೬೧ ಕುಟುಂಬಗಳು ಭಾಗವಹಿಸಿವೆ. ೫ ಎ ಸೈಡ್ ಮಹಿಳಾ ಹಾಕಿ ಇದಾಗಿದ್ದು, ರಂಜನೀಯವಾಗಿಯೂ, ರೋಚಕವಾಗಿಯೂ ಈ ಪಂದ್ಯಾವಳಿ ವಿಶೇಷ ನಿಯಮಗಳೊಂದಿಗೆ ಗಮನ ಸೆಳೆಯಲಿದೆ. ಈ ಪಂದ್ಯಾವಳಿ ಚೇನಂಡ ಕುಟುಂಬ ಹಾಗೂ ಕೊಡವ ಹಾಕಿ ಅಕಾಡೆಮಿ ಸಹಕಾರದೊಂದಿಗೆ ನಡೆಯಲಿದೆ. ಇಂದು ಬೆಳಿಗ್ಗೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಅತಿಥಿಗಳಾಗಿ ಚೇನಂಡ ಕುಟುಂಬದ ಹಿರಿಯ ಮಹಿಳೆ ಬೇಬಿ ಬೆಳ್ಯವ್ವ, ಅಂತರರಾಷ್ಟಿçÃಯ ಹಾಕಿ ಟೆಕ್ನಿಕಲ್ ಅಫಿಷಿಯಲ್ ಪುಳ್ಳಂಗಡ ರೋಹಿಣಿ ಬೋಪಣ್ಣ, ಅಂತರ ರಾಷ್ಟಿçÃಯ ಹಾಕಿ ಗೋಲ್ ಕೀಪರ್ ಆಗಿದ್ದ ಮುಕ್ಕಾಟಿರ ನಿಲನ್ ಸೇರಿದಂತೆ ಕೊಡವ ಹಾಕಿ ಅಕಾಡೆಮಿ ಪ್ರಮುಖರು, ಚೇನಂಡ ಪ್ರಮುಖರು ಪಾಲ್ಗೊಳ್ಳಲಿದ್ದಾರೆ.

ರೂ. ೨ ಲಕ್ಷ : ಮಹಿಳಾ ಹಾಕಿ ವಿಜೇತ ಕುಟುಂಬ ರೂ. ೨ ಲಕ್ಷ ನಗದು ಹಾಗೂ ರನ್ನರ್ಸ್ ತಂಡ ರೂ. ೧ ಲಕ್ಷ ನಗದು ಬಹುಮಾನ ಪಡೆಯಲಿದೆ. ಭಾರತ ಹಾಕಿ ತಂಡಕ್ಕೆ ಆಡಿದ ಪ್ರಥಮ ಕೊಡವ ಮಹಿಳೆ ಪಾಂಡAಡ ಪುಷ್ಪ ಸುಬ್ಬಯ್ಯ ಈ ಬಹುಮಾನ ಪ್ರಾಯೋಜಿಸಿದ್ದಾರೆ. ಮೈದಾನ ೩ ರಲ್ಲಿ ಮಹಿಳಾ ಹಾಕಿ ಜರುಗಲಿದ್ದು, ಮೈದಾನ ಸಜ್ಜುಗೊಂಡಿದೆ. ಬೆಂಗಳೂರಿನ ಲೇಕ್ ಸೈಡ್ ಹಾಕಿ ಕ್ಲಬ್‌ನ ಸದಸ್ಯರು (ಜಿಲ್ಲೆಯ ಯುವಕರು) ಈ ಪಂದ್ಯಾವಳಿಯನ್ನು ನಡೆಸಿಕೊಡಲಿದ್ದಾರೆ. ಕಳೆದ ವರ್ಷ ಕಂಬೀರAಡ ವಿನ್ನರ್ಸ್ ಹಾಗೂ ಕೆಚ್ಚೆಟ್ಟಿರ ರನ್ನರ್ಸ್ ಪ್ರಶಸ್ತಿ ಗಳಿಸಿತ್ತು.