ಮುಳ್ಳೂರು, ಏ. ೨೪: ಮಹಿಳೆಯರು ಪ್ರತಿಯೊಂದು ಕ್ಷೇತ್ರಗಳಲ್ಲಿ ಪುರಷರಷ್ಟೆ ಸರಿ ಸಮಾನರಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿದ್ದು ಈ ಮೂಲಕವಾಗಿ ಸಂವಿಧಾನದಲ್ಲಿ ನಮಗೆ ಅವಕಾಶ ಮಾಡಿಕೊಟ್ಟಿರುವ ಡಾ.ಅಂಬೇಡ್ಕರ್ ಅವರಿಗೆ ಸದಾ ಅಭಾರಿಯಾಗಿರಬೇಕು’ ಎಂದು ತಾಲೂಕು ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಮಿಲನ ಕೆ.ಭರತ್ ಅಭಿಪ್ರಾಯ ಪಟ್ಟರು. ಅವರು ಸಮಿಪದ ಮುಳ್ಳೂರು-ಹೊನ್ನೆಕೊಪ್ಪಲು ಗ್ರಾಮದಲ್ಲಿ ಗ್ರಾಮದ ಶ್ರೀ ವಿಶ್ವರತ್ನ ಡಾ.ಬಿ.ಆರ್.ಅಂಬೇಡ್ಕರ್ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ ೧೩೫ನೇ ಜನ್ಮ ದಿನಾಚರಣೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು. ಮಹಿಳೆಯರು ಪರುಷರಷ್ಟೆ ಅಧಿಕಾರ ವೇತನ ಸ್ಥಾನ ಮಾನ ಪಡೆದುಕೊಳ್ಳುತ್ತಿದ್ದು ಈ ದಿಸೆಯಲ್ಲಿ ಮಹಿಳೆಯರು ಅಂಬೇಡ್ಕರ್ ಅವರನ್ನು ನೆನಪಿಸಿಕೊಳ್ಳುವ ಅಗತ್ಯ ಇದೆ ಎಂದರು.

ಶನಿವಾರಸಂತೆ ವಿಘ್ನೇಶ್ವರ ಬಾಲಕಿಯರ ಪ್ರೌಢಶಾಲಾ ಸಹ ಶಿಕ್ಷಕ ಕೆ.ಪಿ.ಜಯಕುಮಾರ್ ಮಾತನಾಡಿ-ಡಾ.ಅಂಬೇಡ್ಕರ್ ಅವರು ಭಾಷಣದ ಒಂದು ವಸ್ತು ಅಲ್ಲ ನಮ್ಮ ನಿಮ್ಮೆಲ್ಲಾರ ಬದುಕಿನ ವಸ್ತು ಈ ನಿಟ್ಟಿನಲ್ಲಿ ಅವರ ಜನ್ಮ ದಿನಾಚರಣೆ ನಮ್ಮ ಬದುಕಿನ ದಿನವಾಗಬೇಕು ಎಂದರು. ನಿವೃತ್ತ ಶಿಕ್ಷಕ ಎಂ.ಪಿ.ವಸAತ್ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿವೃತ್ತ ಗ್ರಾಮ ಸಹಾಯಕ ಎಂ.ಕೆ.ಮಲ್ಲೇಶ್ ಅಧ್ಯಕ್ಷತೆವಹಿಸಿದ ಸಮಾರಂಭದಲ್ಲಿ ಪ್ರಮುಖರಾದ ರಾಜು ಗೊರೂರು, ರಾಜಶೇಖರ್, ಎಂ.ಎನ್.ರಾಜಪ್ಪ, ತೇಜಾವತಿ, ಕೆ.ಬಿ.ಮಹೇಶ್, ವಕೀಲ ಎಂ.ಎನ್.ಶAಕರ್ ಮುಂತಾದವರು ಹಾಜರಿದ್ದರು.