ಮಡಿಕೇರಿ, ಏ.೨೩: ಕೊಡವ ಕೌಟುಂಬಿಕ ಹಾಕಿ ಉತ್ಸವ ಚೇನಂಡ ಕಪ್‌ನಲ್ಲಿ ನಿನ್ನೆ ಹಾಗೂ ಇಂದು ಅಚ್ಚರಿಯ ಫಲಿತಾಂಶ ಹೊರಬಿದ್ದಿದ್ದು ಮಾಜಿ ಚಾಂಪಿಯನ್ ತಂಡಗಳ ಪೈಕಿ ಕಲಿಯಂಡ ಹಾಗೂ ಅಂಜಪರವAಡ ತಂಡಗಳು ಪಂದ್ಯಾವಳಿಯಿAದ ನಿರ್ಗಮಿಸಿದೆ.

೧೯೯೭ರ ಪಾಂಡAಡ ಕಪ್, ೨೦೧೪ರ ತಾತಂಡ ಕಪ್ ಹಾಗೂ ೨೦೧೬ರ ಶಾಂತೆಯAಡ ಕಪ್ ವಿಜೇತ ತಂಡವಾಗಿದ್ದ ಕಲಿಯಂಡ ಕುಟುಂಬ ಬುಧವಾರ ನಡೆದ ಪಂದ್ಯದಲ್ಲಿ ಪೆಮ್ಮಂಡ ತಂಡದವರು ೩-೧ ಗೋಲುಗಳಿಂದ ಪರಾಭವಗೊಂಡು ೨೬ನೆಯ ವರ್ಷದ ಹಾಕಿ ಉತ್ಸವದಿಂದ ಹೊರಬಿದ್ದಿದೆ. ಇದರೊಂದಿಗೆ ೨೦೦೮ರ ಅಳಮೇಂಗಡ ಕಪ್ ಹಾಗೂ ೨೦೧೩ರ ಮಾದಂಡ ಕಪ್ ವಿಜೇತ ಅಂಜಪರವAಡ ತಂಡವೂ ಟೂರ್ನಿಯಿಂದ ಹೊರಬಿದ್ದಿದೆ. ಅರಮಣಮಾಡ ಎದುರು ಅಂಜಪರವAಡ ಸೋಲನುಭವಿಸಿತು.

ಇದಲ್ಲದೆ ಕಳೆದ ೨೫ ವರ್ಷಗಳಲ್ಲಿ ಹಾಕಿ ಉತ್ಸವ ಆಯೋಜಿಸಿರುವ ಕುಟುಂಬಗಳ ಪೈಕಿ ಪಾಂಡAಡ, ಕೋಡಿರ, ಕಳ್ಳಿಚಂಡ, ಚೆಕ್ಕೆರ, ಮಚ್ಚಮಾಡ, ಮನೆಯಪಂಡ, ತಾತಂಡ, ಮಾದಂಡ, ಅಪ್ಪಚೆಟ್ಟೋಳಂಡ, ಮಾಳೆಯಂಡ, ಕುಂಡ್ಯೋಳAಡ, ಮುದ್ದಂಡ, ಶಾಂತೆಯAಡ, ಕುಪ್ಪಂಡ(ನಾAಗಾಲ), ಅಳಮೇಂಗಡ, ಬಿದ್ದಂಡ, ಮಂಡೇಟಿರ ಕುಟುಂಬಗಳ ತಂಡಗಳೂ ಪಂದ್ಯಾವಳಿಯಿAದ ನಿರ್ಗಮಿಸಿವೆ.

ತಾ.೨೩ರ ಫಲಿತಾಂಶಗಳು

ಕೋಳೆರ ತಂಡವು ಕರೋಟಿರ ತಂಡವನ್ನು ೪-೧ ಗೋಲುಗಳಿಂದ ಮಣಿಸಿತು. ಕೊಲ್ಲೀರ ತಂಡವು ನಂದೇಟಿರ ತಂಡವನ್ನು ೨-೧ ಗೋಲುಗಳಿಂದ ಸೋಲಿಸಿತು. ನೆಲ್ಲಮಕ್ಕಡ ತಂಡವು ಮುಕ್ಕಾಟಿರ (ಮೂವತ್ತೋಕ್ಲು) ತಂಡದ ವಿರುದ್ಧ ೪-೦ ಅಂತರದಲ್ಲಿ ಜಯ ಸಾಧಿಸಿತು.

ಕುಪ್ಪಂಡ(ಕೈಕೇರಿ) ತಂಡವು ಚಂದುರ ತಂಡದ ವಿರುದ್ಧ ೩-೦ ಅಂತರದಲ್ಲಿ ಗೆಲುವು ಸಾಧಿಸಿತು. ಕುಪ್ಪಂಡ ಪರ ಸೋಮಯ್ಯ ಕೆ.ಪಿ ಹ್ಯಾಟ್ರಿಕ್ ಬಾರಿಸಿದರು. ಸೋಮೆಯಂಡ ತಂಡವು ಮುಕ್ಕಾಟಿರ (ಪುಲಿಕೋಟ್) ತಂಡವನ್ನು ಟೈ ಬ್ರೇಕರ್‌ನಲ್ಲಿ ೪-೩ ಅಂತರದಲ್ಲಿ ಮಣಿಸಿತು. ನಿಗದಿತ ಪಂದ್ಯದಲ್ಲಿ ೨-೨ ಸಮಬಲವಾಗಿತ್ತು. ಚೆಪ್ಪುಡಿರ ತಂಡವು ನಾಗಂಡ ತಂಡವನ್ನು ೪-೦ ಅಂತರದಲ್ಲಿ ಮಣಿಸಿತು. ಬೋಟ್ಟೋಳಂಡ ತಂಡವು ಕನ್ನಂಡ ತಂಡವನ್ನು ೩-೨ ಗೋಲುಗಳಿಂದ ಸೋಲಿಸಿತು. ಕಂಬೀರAಡ ತಂಡವು ಮಣವಟ್ಟೀರ ತಂಡವನ್ನು ೨-೦ ಗೋಲುಗಳಿಂದ ಮಣಿಸಿತು.

ಮುಕ್ಕಾಟಿರ (ಹರಿಹರ) ತಂಡವು ೧-೦ ಅಂತರದಲ್ಲಿ ನಾಪಂಡ ತಂಡವನ್ನು ಸೋಲಿಸಿತು.

ಬಲ್ಲಚಂಡ ತಂಡವು ಪುದಿಯೊಕ್ಕಡ ತಂಡವನ್ನು ಟೈ ಬ್ರೇಕರ್‌ನಲ್ಲಿ ೬-೫ ಗೋಲುಗಳಿಂದ ಮಣಿಸಿತು. ನಿಗದಿತ ಪಂದ್ಯದಲ್ಲಿ ೧-೧ ಸಮಬಲವಾಗಿತ್ತು. ಮೂಕೊಂಡ ತಂಡವು ಮಂಡೇಟಿರ ತಂಡವನ್ನು ೪-೦ ಗೋಲುಗಳಿಂದ ಮಣಿಸಿತು. ಅರಮಣಮಾಡ ತಂಡವು ಅಂಜಪರವAಡ ತಂಡವನ್ನು ಟೈ ಬ್ರೇಕರ್‌ನಲ್ಲಿ ೪-೨ ಅಂತರದಲ್ಲಿ ಮಣಿಸಿತು. ನಿಗದಿತ ಪಂದ್ಯದಲ್ಲಿ ೦-೦ ಸಮಬಲವಾಗಿತ್ತು.