ಮಡಿಕೇರಿ, ಏ. ೨೩; ಮರಗೋಡುವಿನ ಗೌಡ ಇವಿನಿಂಗ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಗೌಡ ಸಮುದಾಯಗಳ ನಡುವೆ ಏರ್ಪಡಿಸಲಾಗಿರುವ ಕುಟುಂಬ ಕಲರವ ಕ್ರಿಕೆಟ್ ಪಂದ್ಯಾವಳಿಯಲ್ಲಿ ಎಂಟು ಕುಟುಂಬ ತಂಡಗಳು ಕ್ವಾರ್ಟರ್ ಫೈನಲ್ ಹಂತಕ್ಕೆ ಪ್ರವೇಶಿಸಿವೆ.

ಇಂದು ನಡೆದ ಪಂದ್ಯದಲ್ಲಿ ಸಣ್ಣಜನ ತಂಡ ನಿಗದಿತ ೬ ಓವರ್‌ಗಳಲ್ಲಿ ೩ ವಿಕೆಟ್ ಕಳೆದುಕೊಂಡು ೭೮ ರನ್ ಗಳಿಸಿದರೆ, ಕುಯ್ಯಮುಡಿ ತಂಡ ರೋಚಕ ಹಣಾಹಣಿಯೊಂದಿಗೆ ೪ ವಿಕೆಟ್ ಕಳೆದುಕೊಂಡು ೭೭ರನ್ ಗಳಿಸಿ ಕೇವಲ ಒಂದು ರನ್‌ಗಳ ಅಂತರದಿAದ ಸೋಲನುಭವಿಸಿತು. ಉಳುವಾರನ ತಂಡ ನಿಗದಿತ ೮ ಓವರ್‌ಗಳಲ್ಲಿ ೫ ವಿಕೆಟ್‌ಗೆ ೯೫ ರನ್ ಗಳಿಸಿದರೆ, ಪೊನ್ನಚನ ತಂಡ ೮ ವಿಕೆಟ್‌ಗೆ ೫೪ ರನ್ ಗಳಿಸಿ ೪೫ ರನ್‌ಗಳ ಅಂತರದಿAದ ಸೋಲನುಭವಿಸಿತು. ಪಾಣತ್ತಲೆ ತಂಡ ೪ ವಿಕೆಟ್‌ಗೆ ೬೩ ರನ್ ಗಳಿಸಿದರೆ, ಕೊಂಬAಡ ತಂಡ ೪ ವಿಕೆಟ್ ನಷ್ಟದಲ್ಲಿ ಗುರಿ ಸಾಧಿಸಿತು.

ಕುಡೆಕಲ್ಲು ತಂಡ ೪ ವಿಕೆಟ್‌ಗೆ ಭರ್ಜರಿ ೧೧೧ ರನ್ ಗಳಿಸಿದರೆ, ಉತ್ತರವಾಗಿ ಆಡಿದ ಕಟ್ಟೆಮನೆ ತಂಡ ೬ ವಿಕೆಟ್‌ಗೆ ೬೫ ರನ್ ಮಾತ್ರ ಗಳಿಸಿ ೪೬ ರನ್‌ಗಳ ಭಾರೀ ಅಂತರದಿAದ ಸೋಲನುಭವಿಸಿತು. ಎಡಿಕೇರಿ ತಂಡ ೩ ವಿಕೆಟ್‌ಗೆ ೭೦ ರನ್ ಗಳಿಸಿದರೆ, ಇಳಂದಿಲ ತಂಡ ೬ ವಿಕೆಟ್‌ಗಳ ಜಯ ಸಾಧಿಸಿತು.

ಪರ್ಲಕೋಟಿ ತಂಡ ೩ ವಿಕೆಟ್‌ಗೆ ೭೫ ರನ್ ಗಳಿಸಿದರೆ, ಬಿದ್ರುಪಣೆ ತಂಡ ೬ ವಿಕೆಟ್‌ಗೆ ೩೩ ರನ್ ಮಾತ್ರ ಗಳಿಸಿ ಸೋಲಿಗೆ ಶರಣಾಯಿತು. ಮೇಲ್ಚೆಂಬು ತಂಡ ೬ ವಿಕೆಟ್‌ಗೆ ೪೯ ರನ್ ಗಳಿಸಿದರೆ, ಅಮೆಮನೆ ತಂಡ ೨ ವಿಕೆಟ್ ನಷ್ಟದಲ್ಲಿ ಗುರಿ ಸಾಧಿಸಿತು. ಚೀಯಪ್ಪನ ತಂಡ ೫ ವಿಕೆಟ್‌ಗೆ ೭೮ರನ್ ಗಳಿಸಿದರೆ, ಸಣ್ಣಜನ ತಂಡ ೪ ವಿಕೆಟ್ ನಷ್ಟದಲ್ಲಿ ಗುರಿ ಸಾಧಿಸಿತು. ತೆಕ್ಕಡೆ ತಂಡ ೪ ವಿಕೆಟ್‌ಗೆ ೫೫ ರನ್ ಗಳಿಸಿದರೆ, ತಳೂರು ತಂಡ ೪ ವಿಕೆಟ್ ನಷ್ಟದಲ್ಲಿ ಗೆಲುವು ಸಾಧಿಸಿತು.