ಮಡಿಕೇರಿ, ಏ. ೨೩ : ಕೊಡವ ಕುಟುಂಬಗಳ ನಡುವೆ ಮೂರ್ನಾಡಿನಲ್ಲಿ ನಡೆಯುತ್ತಿರುವ ೨೪ನೇ ವರ್ಷದ ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ ಯಲ್ಲಿ ನೆರವಂಡ ತಂಡ ಭರ್ಜರಿ ಮುನ್ನಡೆ ಸಾಧಿಸಿದೆ.
ಮೈದಾನ ೧ ರಲ್ಲಿ ತಂಬುಕುತ್ತಿರ ಮತ್ತು ಚಿರಿಯಪಂಡ ತಂಡಗಳ ನಡುವಿನ ಪಂದ್ಯದಲ್ಲಿ ೨೬ ರನ್ ಗಳಿಂದ ತಂಬುಕುತ್ತಿರ ಜಯ ಸಾಧಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ತಂಬುಕುತ್ತಿರ ೬ ಓವರ್ಗಳಲ್ಲಿ ೪ ವಿಕೆಟ್ ನಷ್ಟಕ್ಕೆ ೭೪ ರನ್ ಸೇರಿಸಿತು. ಚಿರಿಯಪಂಡ ೬ ಓವರ್ಗಳಲ್ಲಿ ೬ ವಿಕೆಟ್ ನಷ್ಟಕ್ಕೆ ೪೮ ಗಳಿಸಿ ಸೋಲು ಅನುಭವಿಸಿತು.
ಕನ್ನಂಡ ಮತ್ತು ಕರಿನೆರವಂಡ ನಡುವಿನ ಪಂದ್ಯದಲ್ಲಿ ಸೂಪರ್ ಓವರ್ನಲ್ಲಿ ಕರಿನೆರವಂಡ ತಂಡ ಗೆಲುವು ಸಾಧಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕರಿನೆರವಂಡ ತಂಡ ೬ ಓವರ್ಗಳಲ್ಲಿ ೪ ವಿಕೆಟ್ ನಷ್ಟಕ್ಕೆ ೮೭ ರನ್ ಗಳಿಸಿತು. ಕನ್ನಂಡ ೬ ಓವರ್ಗಳಲ್ಲಿ ೪ ವಿಕೆಟ್ ನಷ್ಟಕ್ಕೆ ೮೭ ರನ್ ಸೇರಿಸಿ ಸಮಬಲ ಸಾಧಿಸಿತು. ಈ ಹಿನ್ನೆಲೆಯಲ್ಲಿ ನಡೆದ ಸೂಪರ್ ಓವರ್ನಲ್ಲಿ ಕನ್ನಂಡ ೨ ವಿಕೆಟ್ ನಷ್ಟಕ್ಕೆ ೧೧ ರನ್ ಗಳಿಸಿತು. ಕರಿನೆರವಂಡ ಯಾವುದೇ ವಿಕೆಟ್ ನಷ್ಟವಿಲ್ಲದೆ ೧೨ ರನ್ ಸೇರಿಸಿ ಗೆಲುವಿನ ನಗು ಬೀರಿತು.
ಅಮ್ಮಾಟಂಡ ಮತ್ತು ನಂದಿನೆರವAಡ ನಡುವಿನ ಪಂದ್ಯದಲ್ಲಿ ನಂದಿನೆರವAಡ ತಂಡಕ್ಕೆ ೯ ವಿಕೆಟ್ಗಳ ಜಯ ಲಭಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಅಮ್ಮಾಟಂಡ ೬ ಓವರ್ಗಳಲ್ಲಿ ೫ ವಿಕೆಟ್ ನಷ್ಟಕ್ಕೆ ೫೫ ರನ್ ಸೇರಿಸಿತು. ನಂದಿನೆರವAಡ ೪.೨ ಓವರ್ಗಳಲ್ಲಿ ೧ ವಿಕೆಟ್ ನಷ್ಟಕ್ಕೆ ೬೧ ರನ್ ಗಳಿಸಿ ಗೆಲುವು ಸಾಧಿಸಿತು.
ಪೆಬ್ಬಟ್ಟಿರ ಮತ್ತು ದಾಸಂಡ ನಡುವಿನ ಪಂದ್ಯದಲ್ಲಿ ದಾಸಂಡ ೬ ವಿಕೆಟ್ ಗಳಿಂದ ಗೆಲುವು ಸಾಧಿಸಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಪೆಬ್ಬಟ್ಟಿರ ೬ ಓವರ್ ಗಳಲ್ಲಿ ೩ ವಿಕೆಟ್ ನಷ್ಟಕ್ಕೆ ೬೨ ರನ್ ಗಳಿಸಿತು. ದಾಸಂಡ ೫.೩ ಓವರ್ ಗಳಲ್ಲಿ ೪ ವಿಕೆಟ್ ನಷ್ಟಕ್ಕೆ ೬೭ ರನ್ ಸೇರಿಸಿ ಜಯ ಸಾಧಿಸಿತು. ಅಳಮೇಂಗಡ ಮತ್ತು ಚೊಟ್ಟೆಯಂಡಮಾಡ ನಡುವಿನ ಹಣಾಹಣಿಯಲ್ಲಿ ಅಳಮೇಂಗಡ ತಂಡ ೯ ವಿಕೆಟ್ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಚೊಟ್ಟೆಯಂಡಮಾಡ ೬ ಓವರ್ಗಳಲ್ಲಿ ೬ ವಿಕೆಟ್ ನಷ್ಟಕ್ಕೆ ೪೯ ರನ್ ಸೇರಿಸಿತು. ಅಳಮೇಂಗಡ ೫.೪ ಓವರ್ಗಳಲ್ಲಿ ೧ ವಿಕೆಟ್ ನಷ್ಟಕ್ಕೆ ೫೩ ರನ್ ಗಳಿಸಿ ಗೆಲುವು ದಾಖಲಿಸಿತು.
ಮೈದಾನ ೨ ರಲ್ಲಿ ಮುಂಡAಡ ಮತ್ತು ಪುದಿಯೊಕ್ಕಡ ನಡುವಿನ ಪಂದ್ಯದಲ್ಲಿ ಪುದಿಯೊಕ್ಕಡ ತಂಡಕ್ಕೆ ೫ ವಿಕೆಟ್ಗಳ ಜಯ ಲಭಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಡAಡ ೬ ಓವರ್ ಗಳಲ್ಲಿ ೪ ವಿಕೆಟ್ ನಷ್ಟಕ್ಕೆ ೬೪ ರನ್ ಗಳಿಸಿತು. ಪುದಿಯೊಕ್ಕಡ ೫.೩ ಓವರ್ ಗಳಲ್ಲಿ ೫ ವಿಕೆಟ್ ನಷ್ಟಕ್ಕೆ ೬೫ ರನ್ ಸೇರಿಸಿ ಜಯ ಸಾಧಿಸಿತು.
ಮುಕ್ಕಾಟಿರ (ಕುಂಜಿಲಗೇರಿ) ಮತ್ತು ಮೂಕೊಂಡ ನಡುವಿನ ಪಂದ್ಯದಲ್ಲಿ ಮೂಕೊಂಡ ತಂಡಕ್ಕೆ ೨೬ ರನ್ಗಳ ಜಯ ದೊರೆಯಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮೂಕೊಂಡ ೬ ಓವರ್ಗಳಲ್ಲಿ ೩ ವಿಕೆಟ್ ನಷ್ಟಕ್ಕೆ ೮೨ ರನ್ ಸೇರಿಸಿತು. ಮುಕ್ಕಾಟಿರ ೬ ಓವರ್ಗಳಲ್ಲಿ ೫ ವಿಕೆಟ್ ನಷ್ಟಕ್ಕೆ ೫೬ ರನ್ ಗಳಿಸಿ ಸೋಲು ಕಂಡಿತು.
ಸಣ್ಣುವAಡ ಮತ್ತು ಹಂಚೆಟ್ಟಿರ ನಡುವಿನ ಪಂದ್ಯದಲ್ಲಿ ಹಂಚೆಟ್ಟಿರ ತಂಡ ೩ ರನ್ ಗಳಿಂದ ಗೆಲುವು ದಾಖಲಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಹಂಚೆಟ್ಟಿರ ೬ ಓವರ್ಗಳಲ್ಲಿ ೫ ವಿಕೆಟ್ ನಷ್ಟಕ್ಕೆ ೫೦ ರನ್ ಗಳಿಸಿತು. ಸಣ್ಣುವಂಡ ೬ ಓವರ್ ಗಳಲ್ಲಿ ೪ ವಿಕೆಟ್ ನಷ್ಟಕ್ಕೆ ೪೭ ರನ್ ಸೇರಿಸಿ ಸೋಲು ಅನುಭವಿಸಿತು. ಕೊಟ್ಟಂಗಡ ಮತ್ತು ಕರವಂಡ ನಡುವಿನ ಪಂದ್ಯದಲ್ಲಿ ಕೊಟ್ಟಂಗಡ ತಂಡಕ್ಕೆ ೩೪ ರನ್ ಗಳ ಜಯ ದೊರೆಯಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೊಟ್ಟಂಗಡ ೬ ಓವರ್ ಗಳಲ್ಲಿ ೩ ವಿಕೆಟ್ ನಷ್ಟಕ್ಕೆ ೫೬ ರನ್ ಸೇರಿಸಿತು. ಕರವಂಡ ೬ ಓವರ್ ಗಳಲ್ಲಿ ೨ ವಿಕೆಟ್ ನಷ್ಟಕ್ಕೆ ೨೨ ರನ್ ಗಳಿಸಿ ಸೋಲೊಪ್ಪಿಕೊಂಡಿತು.
ಮುಕ್ಕಾಟಿರ(ಕುಂಬಳದಾಳು) ಮತ್ತು ಸಿದ್ದಂಡ ನಡುವಿನ ಪಂದ್ಯದಲ್ಲಿ ಮುಕ್ಕಾಟಿರ ತಂಡಕ್ಕೆ ೨೬ ರನ್ ಗಳ ಜಯ ಲಭಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಕ್ಕಾಟಿರ ೬ ಓವರ್ ಗಳಲ್ಲಿ ೫ ವಿಕೆಟ್ ನಷ್ಟಕ್ಕೆ ೭೦ ರನ್ ಗಳಿಸಿತು. ಸಿದ್ದಂಡ ೬ ಓವರ್ ಗಳಲ್ಲಿ ೬ ವಿಕೆಟ್ ನಷ್ಟಕ್ಕೆ ೪೪ ರನ್ ಗಳನ್ನು ಸೇರಿಸಿ ಸೋಲು ಅನುಭವಿಸಿತು.
ನೆರವಂಡ ಮತ್ತು ಬೊಳ್ಳೆರ ನಡುವಿನ ಪಂದ್ಯದಲ್ಲಿ ನೆರವಂಡ ತಂಡ ೬೦ ರನ್ ಗಳಿಂದ ಭರ್ಜರಿ ಜಯ ಸಾಧಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ನೆರವಂಡ ೬ ಓವರ್ ಗಳಲ್ಲಿ ೨ ವಿಕೆಟ್ ನಷ್ಟಕ್ಕೆ ೧೦೮ ರನ್ ಸೇರಿಸಿತು. ಬೊಳ್ಳೆರ ೬ ಓವರ್ಗಳಲ್ಲಿ ೫ ವಿಕೆಟ್ ನಷ್ಟಕ್ಕೆ ೪೮ ರನ್ ಗಳನ್ನಷ್ಟೇ ಗಳಿಸಿ ಸೋಲು ಕಂಡಿತು.
ಮೈದಾನ ೩- ಮಹಿಳಾ ಕ್ರಿಕೆಟ್
ನಾಟೋಳಂಡ ಮತ್ತು ಮೇವಡ ನಡುವಿನ ಪಂದ್ಯದಲ್ಲಿ ಮೇವಡ ಗೆಲುವು ಸಾಧಿಸಿತು. ನಾಟೋಳಂಡ ೫ ವಿಕೆಟ್ ನಷ್ಟಕ್ಕೆ ೨೮ ರನ್ ಗಳನ್ನು ಗಳಿಸಿದರೆ, ಮೇವಡ ಯಾವುದೇ ವಿಕೆಟ್ ನಷ್ಟವಿಲ್ಲದೆ ೨೯ ರನ್ ಸೇರಿಸಿ ವಿಜಯಿಯಾಯಿತು.
ಓಡಿಯಂಡ ಮತ್ತು ಮಂದನೆರವAಡ ನಡುವಿನ ಪಂದ್ಯದಲ್ಲಿ ಓಡಿಯಂಡ ಗೆಲುವು ದಾಖಲಿಸಿತು. ಓಡಿಯಂಡ ಯಾವುದೇ ವಿಕೆಟ್ ನಷ್ಟವಿಲ್ಲದೆ ೮೮ ರನ್ ಸೇರಿಸಿತು. ಮಂದನೆರವAಡ ೩ ವಿಕೆಟ್ ನಷ್ಟಕ್ಕೆ ೪೧ ರನ್ ಗಳಿಸಿ ಸೋಲೊಪ್ಪಿಕೊಂಡಿತು.
ಅರಮಣಮಾಡ ಮತ್ತು ಕಲಿಯಂಡ ನಡುವಿನ ಹಣಾಹಣಿಯಲ್ಲಿ ಅರಮಣಮಾಡ ಪಂದ್ಯವನ್ನು ಗೆದ್ದುಕೊಂಡಿತು. ಅರಮಣಮಾಡ ೧ ವಿಕೆಟ್ ನಷ್ಟಕ್ಕೆ ೫೦ ರನ್ ಗಳಿಸಿತು. ಕಲಿಯಂಡ ಯಾವುದೇ ವಿಕೆಟ್ ನಷ್ಟವಿಲ್ಲದೆ ೪೭ ರನ್ ಸೇರಿಸಿ ಸೋಲು ಅನುಭವಿಸಿತು.
ಕಾಣತಂಡ ಮತ್ತು ಮೂಕಳೇರ ನಡುವಿನ ಪಂದ್ಯದಲ್ಲಿ ಕಾಣತಂಡ ಗೆಲುವು ದಾಖಲಿಸಿತು. ಕಾಣತಂಡ ೫ ವಿಕೆಟ್ ನಷ್ಟಕ್ಕೆ ೪೧ ರನ್ ಸೇರಿಸಿತು. ಮೂಕಳೆರ ೩ ವಿಕೆಟ್ ನಷ್ಟಕ್ಕೆ ೩೧ ರನ್ ಗಳಿಸಿ ಸೋಲು ಕಂಡಿತು.
ಆದೇAಗಡ ಮತ್ತು ಅಜ್ಜಿಕುಟ್ಟಿರ ನಡುವಿನ ಪಂದ್ಯದಲ್ಲಿ ಆದೇಂಗಡ ಜಯ ಸಾಧಿಸಿತು. ಅಜ್ಜಿಕುಟ್ಟಿರ ೨ ವಿಕೆಟ್ ನಷ್ಟಕ್ಕೆ ೫೬ ರನ್ ಗಳಿಸಿತು. ಆದೇಂಗಡ ೧ ವಿಕೆಟ್ ನಷ್ಟಕ್ಕೆ ೫೭ ರನ್ ಸೇರಿಸಿ ಗೆಲುವು ಕಂಡಿತು. ನೆಲ್ಲಿರ ಮತ್ತು ಮಣವಟ್ಟಿರ ನಡುವಿನ ಪಂದ್ಯದಲ್ಲಿ ಮಣವಟ್ಟಿರ ಗೆಲುವಿನ ನಗು ಬೀರಿತು. ಮಣವಟ್ಟಿರ ಯಾವುದೇ ವಿಕೆಟ್ ನಷ್ಟವಿಲ್ಲದೆ ೬೬ ರನ್ ಸೇರಿಸಿತು. ನೆಲ್ಲಿರ ೬ ವಿಕೆಟ್ ನಷ್ಟಕ್ಕೆ ಕೇವಲ ೧೯ ರನ್ ಗಳಿಸಿ ಸೋಲೊಪ್ಪಿಕೊಂಡಿತು.