ಮಡಿಕೇರಿ, ಏ. ೨೩: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಹೊರಬಿದ್ದಿದ್ದು, ಕೊಡಗು ಜಿಲ್ಲೆ ಶೇ ೯೬.೫೪ ಫಲಿತಾಂಶದೊAದಿಗೆ ರಾಜ್ಯಕ್ಕೆ ೮ನೇ ಸ್ಥಾನ ಪಡೆದುಕೊಂಡಿದೆ. ರಾಜ್ಯಕ್ಕೆ ಸ್ಥಾನದಲ್ಲಿ ಕಳೆದ ಬಾರಿಗಿಂತ ಕುಸಿತ ಕಂಡರೂ ಶೇಕಡವಾರಿನಲ್ಲಿ ಹೆಚ್ಚಳವಾಗಿದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ ಶೇ ೯೮.೪೦ ರಷ್ಟು ಅಂಕದೊAದಿಗೆ ರಾಜ್ಯಕ್ಕೆ ಅಗ್ರಸ್ಥಾನ ಗಳಿಸಿಕೊಂಡು ಮತ್ತೊಮ್ಮೆ ಸಾಧನೆ ತೋರಿದೆ. ಕೊಡಗು ಜಿಲ್ಲೆ ಕಳೆದ ವರ್ಷ ಶೇ ೮೭.೫೪ ಫಲಿತಾಂಶದೊAದಿಗೆ ಪಡೆದಿತ್ತು. ಈ ಬಾರಿ ಶೇ ೯೬.೫೪ ಫಲಿತಾಂಶವನ್ನು ತನ್ನದಾಗಿಸಿಕೊಂಡಿದೆ. ಮಾರ್ಚ್ ೧೮ ರಿಂದ ಏಪ್ರಿಲ್ ೨ರ ವರೆಗೆ ನಡೆದಿದ್ದ ಪರೀಕ್ಷೆಯಲ್ಲಿ ರಾಜ್ಯಾದ್ಯಂತ ಸುಮಾರು ೮ ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಹಾಜರಾಗಿದ್ದರು.
ಶಿಕ್ಷಣ ಸಚಿವ ಮಧು ಬಂಗಾರಪ್ಪ ಇಂದು ಎಸ್‌ಎಸ್‌ಎಲ್‌ಸಿ ಫಲಿತಾಂಶ ಬಿಡುಗಡೆ ಮಾಡಿದರು. ರಾಜ್ಯದ ಏಳು ವಿದ್ಯಾರ್ಥಿಗಳು ೬೨೫ ಕ್ಕೆ ೬೨೫ ಅಂಕ ಪಡೆದಿರುವುದು ಮತ್ತೊಂದು ವಿಶೇಷವಾಗಿದೆ. ಕೊಡಗು ಜಿಲ್ಲೆಯಲ್ಲಿ ೨೯೦೪ ಬಾಲಕರು, ೩೦೪೪ ಬಾಲಕಿಯರು ಸೇರಿ ಒಟ್ಟು ೫೯೪೮ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದರು. ಈ ಪೈಕಿ ೨೭೭೬ ಬಾಲಕರು, ೨೯೬೬ ಬಾಲಕಿಯರು ಸೇರಿ ೫೭೪೨ ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದಾರೆ.
ಇದರೊಂದಿಗೆ ಶೇ ೯೬.೫೪ ಸಾಧನೆಯನ್ನು ೪ಏಳನೇ ಪುಟಕ್ಕೆ
(ಮೊದಲ ಪುಟದಿಂದ) ಕೊಡಗು ಜಿಲ್ಲೆ ಮಾಡಿ ರಾಜ್ಯಕ್ಕೆ ೮ನೇ ಸ್ಥಾನ ಗಳಿಸಿಕೊಂಡಿದೆ. ಜಿಲ್ಲೆಯ ಇಬ್ಬರು ವಿದ್ಯಾರ್ಥಿಗಳು ೬೨೫ಕ್ಕೆ ೬೨೧ ಅಂಕದೊAದಿಗೆ ಮೊದಲ ರ‍್ಯಾಂಕ್ ಹಂಚಿಕೊAಡಿದ್ದಾರೆ. ೬೨೦ ಅಂಕ ಪಡೆದ ವಿದ್ಯಾರ್ಥಿ ದ್ವಿತೀಯ ರ‍್ಯಾಂಕ್, ೬೧೯ ಅಂಕ ಪಡೆದ ಮೂವರು ವಿದ್ಯಾರ್ಥಿಗಳು ತೃತೀಯ ಸ್ಥಾನವನ್ನು ಹಂಚಿಕೊAಡಿದ್ದಾರೆ.
೬೧೮ ಅಂಕ ಪಡೆದ ಇಬ್ಬರು, ೬೧೭ ಅಂಕ ಪಡೆದ ಮೂವರು ವಿದ್ಯಾರ್ಥಿಗಳು ಕೂಡ ಇದ್ದಾರೆ. ೬೭ ಶಾಲೆಗಳ ಪೈಕಿ ೩೭ ಶಾಲೆಗಳಿಗೆ ಶೇ ೧೦೦ ಫಲಿತಾಂಶ ಲಭಿಸಿದೆ.