ಮಡಿಕೇರಿ, ಏ. ೨೩: ನಾಲ್ಕು ವರ್ಷಗಳಿಂದ ನಗರದ ತನಲ್ ಆಶ್ರಮದಲ್ಲಿ ಆಶ್ರಯ ಪಡೆದಿದ್ದ ಅನಾಥ ಯುವತಿ ಮೈನಾ ಇಂದು ಕೂಪದಿರ ಪೂವಣ್ಣ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದಳು.
ಯಾರೂ ಇಲ್ಲದೇ ಏಕಾಂಗಿಯಾಗಿ ತನಲ್ ಆಶ್ರಮಕ್ಕೆ ದಾಖಲಾಗಿದ್ದ ಮೈನಾಳನ್ನು ಸತಿಯಾಗಿ ಸ್ವೀಕರಿಸುವ ಮೂಲಕ ಬೆಟ್ಟತ್ತೂರಿನ ಪೂವಣ್ಣ ಆಕೆಯ ಬಾಳಿಗೆ ಬೆಳಕಾದರು. ಆಶ್ರಮದ ಆವರಣದಲ್ಲಿ ಕೊಡವ ಸಂಪ್ರದಾಯದAತೆ ವಿವಾಹ ನೆರವೇರಿತು.
ಪೂವಣ್ಣ ಅವರ ಕುಟುಂಬಸ್ಥರು,ಸ್ನೇಹಿತರು,ತನಲ್ ಆಶ್ರಮದ ಪ್ರಮುಖರು, ಸದಸ್ಯರು, ಸಿಬ್ಬಂದಿ, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಜನಪ್ರತಿನಿಧಿಗಳು ವಿವಾಹ ಸಂಭ್ರಮದಲ್ಲಿ ಭಾಗಿಗಳಾಗಿ ನವ ದಂಪತಿಯನ್ನು ಹರಸಿದರು. ತನಲ್ ಆಶ್ರಮದ ಸದಸ್ಯರು, ದಾನಿಗಳ ನೆರವಿನೊಂದಿಗೆ ಮೈನಾಳನ್ನು ಶಾಸ್ತೊçÃಕ್ತವಾಗಿ ಮನೆ ಮಗಳಂತೆ ಪೂವಣ್ಣ ಅವರಿಗೆ ವಿವಾಹ ಮಾಡಿಕೊಡಲಾಯಿತು. ಉಪಾಹಾರ ಹಾಗೂ ಊಟೋಪ ಚಾರಗಳೊಂದಿಗೆ ವಿವಾಹ ಸಮಾರಂಭ ಸಂಭ್ರಮದಿAದ ನೆರವೇರಿತು.
ಶುಭ ಕೋರಿದ ನ್ಯಾಯಾಧೀಶರು - ಶಾಸಕರು
ಮೈನಾ ಹಾಗೂ ಪೂವಣ್ಣ ಇವರುಗಳ ವಿವಾಹದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಶುಭ ಅವರು ಪಾಲ್ಗೊಂಡು ನೂತನ ದಂಪತಿಗೆ ಶುಭ ಹಾರೈಸಿದರು.
ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ, ಮಹಿಳಾ ಮತ್ತು ಮಕ್ಕಳ ೪ಏಳನೇ ಪುಟಕ್ಕೆ
(ಮೊದಲ ಪುಟದಿಂದ) ಕಲ್ಯಾಣ ಇಲಾಖೆ ಉಪ ನಿರ್ದೇಶಕ ಪ್ರಸನ್ನ ಕುಮಾರ್ ಅವರುಗಳು ಕೂಡ ವಿವಾಹ ಸಮಾರಂಭದಲ್ಲಿ ಭಾಗವಹಿಸಿ ವಧು-ವರರನ್ನು ಹರಸಿದರು. ತನಲ್ ಆಶ್ರಮದ ಅಧ್ಯಕ್ಷ ಮೊಹಮ್ಮದ್ ಮುಸ್ತಫಾ ಮತ್ತಿತರರು ಹಾಜರಿದ್ದರು.