ಮಡಿಕೇರಿ, ಏ. ೨೩: ಐಎಂಎ ಕೊಡಗು ಘಟಕ ಹಾಗೂ ಸುಂಟಿಕೊಪ್ಪದ ಸ್ವಸ್ಥ ವಿಶೇಷ ಶಾಲೆಯ ಆಶ್ರಯದಲ್ಲಿ ಉಚಿತ ಕೃತಕ ಕಾಲು ವಿತರಣಾ ಶಿಬಿರ ಹಾಗೂ ವೈದ್ಯಕೀಯ ಶಿಬಿರ ತಾ. ೨೫ ರಂದು ಅರಮೇರಿ ಕಳಂಚೇರಿ ಮಠದಲ್ಲಿ ನಡೆಯಲಿದೆ.

ಬೆಳಿಗ್ಗೆ ೯ ಗಂಟೆಗೆ ನಡೆಯುವ ಕಾರ್ಯಕ್ರಮವನ್ನು ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರರು, ಹಾಗೂ ಶಾಸಕರಾದ ಎ.ಎಸ್. ಪೊನ್ನಣ್ಣ ನೆರವೇರಿಸುವರು. ಶಾಂತಮಲ್ಲಿಕಾರ್ಜುನ ಸ್ವಾಮಿ ಸಾನ್ನಿಧ್ಯ ವಹಿಸುವರು.

ಶಿಬಿರದಲ್ಲಿ ಸರಕಾರಿ ಮೆಡಿಕಲ್ ಕಾಲೇಜು, ಕುಶಾಲನಗರ ಸೈರಸ್ ಆಸ್ಪತ್ರೆ ತಜ್ಞರು ಸಮಾಲೋಚನೆಗೆ ಲಭ್ಯರಿರುತ್ತಾರೆ ಎಂದು ಐಎಂಎ ಹಿರಿಯ ಉಪಾಧ್ಯಕ್ಷ ಡಾ. ಮೋಹನ್ ಅಪ್ಪಾಜಿ ತಿಳಿಸಿದ್ದಾರೆ.