ಸಿದ್ದಾಪುರ, ಏ. ೨೩: ಬಾಡಗ-ಬಾಣಂಗಾಲ ಗ್ರಾಮದ ಮಠದ ಶ್ರೀ ಮುತ್ತಪ್ಪ ದೇವಾಲಯ ವಾರ್ಷಿಕೋತ್ಸವ ಹಾಗೂ ವಿವಿಧ ತೆರೆ ಮಹೋತ್ಸವ ತಾ ೨೫ ಹಾಗೂ ೨೬ರಂದು ನಡೆಯಲಿದೆ ಎಂದು ಶ್ರೀ ಮುತ್ತಪ್ಪ ದೇವಾಲಯದ ಅಧ್ಯಕ್ಷ ಮನೋಹರ ತಿಳಿಸಿದ್ದಾರೆ. ತಾ. ೨೫ರಂದು ಬೆಳಿಗ್ಗೆ ೭ಕ್ಕೆ ಗಣಪತಿ ಹೋಮ, ೮ಕ್ಕೆ ಧ್ವಜಾರೋಹಣ, ಅಪರಾಹ್ನ ೨ ಗಂಟೆಗೆ ಮುತ್ತಪ್ಪನ ಮಲೆ ಇಳಿಸುವುದು. ಸಂಜೆ ಶ್ರೀ ಮುತ್ತಪ್ಪನ ವೆಳ್ಳಾಟಂ, ರಾತ್ರಿ ೭ಕ್ಕೆ ಕುಟ್ಟಿಚಾತ್ತನ್ ವೆಳ್ಳಾಟಂ, ೮ಕ್ಕೆ ಕಂಡ ಕರ್ಣನ ವೆಳ್ಳಾಟಂ, ರಾತ್ರಿ ೯ಕ್ಕೆ ಅನ್ನಸಂತರ್ಪಣೆ, ೧೧ಕ್ಕೆ೪ವಸೂರಿ ಮಾಲ ವೆಳ್ಳಾಟ್ಟಂ, ತಾ ೨೬ರ ತಡರಾತ್ರಿ ೨ ಗಂಟೆಗೆ ಪೊಟ್ಟಾನ್ ದೈವದ ಅಗ್ನಿಪೂಜೆ, ೩ಕ್ಕೆ ಗುಳಿಗನ ತೆರೆ, ೫ಕ್ಕೆ ಕಂಡ ಕರ್ಣನ ತೆರೆ, ೬ಕ್ಕೆ ಕುಟ್ಟಿಚಾತನ ತೆರೆ, ೭ಕ್ಕೆ ತಿರುವಪ್ಪನ ತೆರೆ, ೮ಕ್ಕೆ ಪೊಟ್ಟಾನ್ ದೈವ ತೆರೆ, ೯ಕ್ಕೆ ೪ ವಸೂರಿಮಾಲ ತೆರೆಗಳು ನಡೆಯಲಿವೆ. ನಂತರ ಪ್ರಸಾದ ವಿತರಣೆ ನಡೆಯಲಿದೆ ಎಂದು ತಿಳಿಸಿದ್ದಾರೆ.