ಸೋಮವಾರಪೇಟೆ, ಏ. ೨೨: ಬೆಂಗಳೂರಿನ ದೇವನಹಳ್ಳಿಯಲ್ಲಿ ನಡೆದ ಜೆ.ಸಿ. ಅಲ್ಮಿನಿ ಕ್ಲಬ್‌ನ ಪದಗ್ರಹಣ ಕಾರ್ಯಕ್ರಮದಲ್ಲಿ ಜೇಸೀ ವಿಭಾಗೀಯ ಉಸ್ತುವಾರಿಯಾಗಿ ಪಟ್ಟಣದ ಎ.ಆರ್. ಮಮತ ಹಾಗೂ ವಲಯ ಸಂಯೋಜಕರಾಗಿ ಎ.ಎಸ್. ಮಹೇಶ್ ಅವರುಗಳು ಅಧಿಕಾರ ಸ್ವೀಕರಿಸಿದರು.

ವಲಯ ೧೪ ರ ಚೇರ್ಮನ್ ಆಗಿ ಆನಂದರವರು ಪದವಿ ಸ್ವೀಕಾರ ಮಾಡಿದರು. ಕಾರ್ಯಕ್ರಮದಲ್ಲಿ ನ್ಯಾಷನಲ್ ಪ್ರೆಸಿಡೆಂಟ್ ಭರತ್, ನ್ಯಾಷನಲ್ ಚೇರ್ಮನ್ ನರೇನ್ ಕಾರ್ಯಪ್ಪ, ನ್ಯಾಷನಲ್ ವೈಸ್ ಚೇರ್ಮನ್ ರಂಜೀವ್ ಕುರುಪ್, ಮುಖ್ಯಸ್ಥರಾದ ದೇವರಾಜ್, ಕುಮಾರ್, ಶಶಿಕಾಂತ್, ರಂಗಸ್ವಾಮಿ, ಯೋಗೇಶ್, ವಲಯ ಅಧ್ಯಕ್ಷ ಪ್ರಜ್ವಲ್ ಸೇರಿದಂತೆ ಇತರರು ಇದ್ದರು.