ಕೋವರ್‌ಕೊಲ್ಲಿ ಇಂದ್ರೇಶ್

ಬೆAಗಳೂರು, ಏ. ೨೨: ಕೃಷಿ ಜಮೀನನ್ನು ಕೃಷಿಯೇತರ ಉದ್ದೇಶಗಳಿಗೆ ಪರಿವರ್ತನೆ ಮಾಡುವ ಪ್ರಕ್ರಿಯೆಯನ್ನು ಸರಳೀಕರಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಈಗಾಗಲೇ ಸಾಕಷ್ಟು ಬದಲಾವಣೆಯನ್ನು ಮಾಡಿದ್ದು ಈಗ ಸಂಪೂರ್ಣ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳುತ್ತಿದೆ. ರಾಜ್ಯ ಕಂದಾಯ ಇಲಾಖೆಯ ಆಯುಕ್ತರಾದ ಮೀನಾ ನಾಗರಾಜ್ ಅವರು ಸೋಮವಾರ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಆದೇಶವನ್ನು ಹೊರಡಿಸಿದ್ದು ಅಫಿಡವಿಟ್ (ಪ್ರಮಾಣ ಪತ್ರ) ಆಧಾರಿತ ಭೂಪರಿವರ್ತನೆ ಅರ್ಜಿಗಳನ್ನು ನಿಗದಿತ ಅವಧಿಯಲ್ಲಿ ವಿಲೇವಾರಿ ಮಾಡಬೇಕೆಂದು ತಿಳಿಸಿದ್ದಾರೆ.

ಕಂದಾಯ ಇಲಾಖೆಯಲ್ಲಿ ಭೂ ಪರಿವರ್ತನೆ ಅರ್ಜಿಗಳ ವಿಳಂಬ ಆಗುತ್ತಿರುವ ಕುರಿತು ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಈ ಕಟ್ಟು ನಿಟ್ಟಿನ ಆದೇಶ ಹೊರಡಿಸಲಾಗಿದೆ. ಕರ್ನಾಟಕ ಭೂ ಕಂದಾಯ ಕಾಯ್ದೆ ೧೯೬೪ರ ಕಲಂ ೯೫ ಹಾಗೂ ೧೯೬೬ರ ನಿಯಮಾವಳಿ ತಿದ್ದುಪಡಿ ನಿಯಮಗಳ ಪ್ರಕಾರ, ಹೊಸ ನಿಯಮ ಜಾರಿಯಲ್ಲಿದೆ. ಮಾಸ್ಟರ್‌ಪ್ಲಾನ್ ವ್ಯಾಪ್ತಿಯ ಹೊರಗಿನ ಜಮೀನುಗಳಿಗೆ ಸಲ್ಲಿಸಿದ ಅರ್ಜಿಗಳನ್ನು ಜಿಲ್ಲಾಧಿಕಾರಿಗಳು ೩೦ ದಿನಗಳೊಳಗೆ ತೀರ್ಮಾನ ಕೈಗೊಳ್ಳಬೇಕು. ೩೦ ದಿನಗಳಲ್ಲಿ ನಿರ್ಧಾರ ಕೈಗೊಳ್ಳದಿದ್ದರೆ, ಅರ್ಜಿದಾರರು ಶುಲ್ಕ ಪಾವತಿಸಿದ್ದಲ್ಲಿ, ಅರ್ಜಿಯನ್ನು ಪರಿಭಾವಿತ ಭೂಪರಿವರ್ತನೆ (ಆeemeಜ ಅoಟಿveಡಿsioಟಿ) ಎಂದು ಪರಿಗಣಿಸಿ, ತಂತ್ರಾAಶದ ಮೂಲಕ ಸ್ವಯಂಚಾಲಿತ ಅನುಮೋದನೆ ನೀಡಲಾಗುತ್ತದೆ.

ಅಫಿಡವಿಟ್ ಆಧಾರಿತ ಭೂ ಪರಿವರ್ತನೆ ಅರ್ಜಿಗೆ ಸಂಬAಧಿಸಿದAತೆ ತಾಲೂಕು ತಹಶೀಲ್ದಾರರು, ಅರಣ್ಯ ಇಲಾಖೆ ಮೊದಲಾದ ಸಂಬAಧಪಟ್ಟ ಇಲಾಖೆಗಳು ಅಭಿಪ್ರಾಯ ನೀಡಲು ೧೫ ದಿನಗಳ ಕಾಲಾವಕಾಶವಿದ್ದು, ಜಿಲ್ಲಾಧಿಕಾರಿಗಳ ಕಚೇರಿ ವಿಷಯ ನಿರ್ವಾಹಕರಿಗೆ ೫ ದಿನಗಳು, ಅಪರ ಜಿಲ್ಲಾಧಿಕಾರಿಗಳಿಗೆ ೫ ದಿನಗಳು ಹಾಗೂ ಜಿಲ್ಲಾಧಿಕಾರಿಗಳಿಗೆ ೫ ದಿನಗಳ ಕಾಲಾವಕಾಶ ಇರುತ್ತದೆ. ಒಟ್ಟು ೩೦ ಕೆಲಸದ ದಿನಗಳಲ್ಲಿ ಜಿಲ್ಲಾಧಿಕಾರಿಗಳು ತೀರ್ಮಾನ ಕೈಗೊಳ್ಳದಿದ್ದರೆ, ಸದರಿ ಭೂ ಪರಿವರ್ತನಾ ಅರ್ಜಿಗೆ ಅನುಮೋದನೆ ಇದೆ ಎಂದು ಪರಿಗಣಿಸಿ, ಶುಲ್ಕ ಪಾವತಿಗಾಗಿ ಅರ್ಜಿದಾರರ ಲಾಗಿನ್‌ಗೆ ವರ್ಗಾವಣೆಯಾಗುತ್ತದೆ.

ಶುಲ್ಕ ಪಾವತಿಯಾದ ನಂತರ ತಂತ್ರಾAಶದ ಮೂಲಕ ಸ್ವಯಂಚಾಲಿತವಾಗಿ ಭೂಪರಿವರ್ತನೆ ಆದೇಶ ಸೃಜಿಸಲಾಗುತ್ತದೆ ಎಂದು ಕಂದಾಯ ಆಯುಕ್ತೆ ಮೀನಾ ನಾಗರಾಜ್ ಅವರಿಂದ ಡಿಜಿಟಲ್ ಸಹಿ ಮಾಡಲಾದ ಆದೇಶದಲ್ಲಿ ತಿಳಿಸಲಾಗಿದೆ. ಈ ಆದೇಶದ ಪ್ರತಿಯನ್ನು ರಾಜ್ಯದ ಎಲ್ಲಾ ಉಪವಿಭಾಗಾಧಿಕಾರಿಗಳು ಹಾಗೂ ತಾಲೂಕು ತಹಶೀಲ್ದಾರರಿಗೆ ಮಾಹಿತಿ ಮತ್ತು ಅಗತ್ಯ ಕ್ರಮಕ್ಕಾಗಿ ಕಳುಹಿಸಲಾಗಿದೆ. ಕರ್ನಾಟಕ ಭೂ ಕಂದಾಯ ಕಾಯ್ದೆ ೧೯೬೪ರ ಕಲಂ ೯೫ ಹಾಗೂ ೧೯೬೬ರ ನಿಯಮಾವಳಿ ತಿದ್ದುಪಡಿ ನಿಯಮಗಳು ೨೦೨೫ರ ಡಿಸೆಂಬರ್ ೨೩ರಿಂದ ಜಾರಿಯಲ್ಲಿದ್ದು, ಭೂ ಪರಿವರ್ತನೆ ಪ್ರಕ್ರಿಯೆಯನ್ನು ಸರಳೀಕರಿಸುವುದು, ಪಾರದರ್ಶಕತೆ ಹೆಚ್ಚಿಸುವುದು ಮತ್ತು ತಂತ್ರಜ್ಞಾನ ಆಧಾರಿತ ಅನುಮೋದನೆ ವ್ಯವಸ್ಥೆಯನ್ನು ಅಳವಡಿಸುವುದು ಇದರ ಮುಖ್ಯ ಉದ್ದೇಶವಾಗಿದೆ.