ಕೆ.ಎಂ. ಇಸ್ಮಾಯಿಲ್ ಕಂಡಕರೆ

ಮಡಿಕೇರಿ, ಏ. ೨೨: ಕರ್ನಾಟಕ ಸರ್ಕಾರದ ಕರ್ನಾಟಕ ಪಂಚಾಯತ್ ರಾಜ್ ಸೀಮಾ ಗಡಿ ನಿರ್ಣಯ ಆಯೋಗವು, ಕೊಡಗು ಜಿಲ್ಲೆಯ ಗ್ರಾಮ ಪಂಚಾಯಿತಿಗಳ ಚುನಾಯಿತ ಸದಸ್ಯರ ಸಂಖ್ಯೆ ನಿಗದಿಪಡಿಸಿ ತಾ. ೧೮ ರಂದು ಆದೇಶಿಸಿದ್ದು, ಆಕ್ಷೇಪಣೆ ಸಲ್ಲಿಸಲು ತಾ. ೨೪ ಕೊನೆಯ ದಿನವಾಗಿದೆ. ಅವಧಿ ಮುಗಿದ ರಾಜ್ಯದ ಗ್ರಾಮ ಪಂಚಾಯಿತಿ ಮತ್ತು ಸ್ಥಳೀಯ ಸಂಸ್ಥೆಗಳಿಗೆ ಸಕಾಲದಲ್ಲಿ ಚುನಾವಣೆ ನಡೆಸಲು ಅನುಕೂಲವಾಗುವಂತೆ ಅಂತಿಮ ಮೀಸಲಾತಿ ಅಧಿಸೂಚನೆ ಹೊರಡಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ಕೋರಿ ರಾಜ್ಯ ಚುನಾವಣಾ ಆಯೋಗ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯು ಮಾರ್ಚ್ ೨೩ ರಂದು ನಡೆದಿತ್ತು.

ಸದ್ಯ ಚಾಲ್ತಿಯಲ್ಲಿರುವ ಹಿಂದಿನ ಜನಗಣತಿ ಆಧರಿಸಿ ಪ್ರತಿ ಗ್ರಾ.ಪಂ.ಗೆ ಎಷ್ಟು ಸದಸ್ಯರು ಆಯ್ಕೆಯಾಗಬೇಕು ಎಂಬುದನ್ನು ಕರ್ನಾಟಕ ರಾಜ್ಯ ಕ್ಷೇತ್ರ ಮರುವಿಂಗಡಣಾ ಆಯೋಗ ನಿರ್ಧರಿಸಿ ಸರಕಾರಕ್ಕೆ ಶಿಫಾರಸು ಮಾಡಬೇಕು. ಅದರಂತೆ, ಅಗತ್ಯ ಅಂಕಿ-ಸAಖ್ಯೆಗಳ ಮಾಹಿತಿಯನ್ನು ೧೫ ದಿನಗಳಲ್ಲಿ ಆಯೋಗಕ್ಕೆ ಒಗದಿಸುವಂತೆ ಮಾರ್ಚ್ ೧೮ ರಂದು ಕ್ಷೇತ್ರ ಮರು ವಿಂಗಡಣಾ ಆಯೋಗ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದೆ ಎಂದು ಮಾರ್ಚ್ ೨೩ ರಂದು ರಾಜ್ಯ ಸರ್ಕಾರದ ಪರ ಹೆಚ್ಚುವರಿ ಅಡ್ವಕೇಟ್ ಜನರಲ್ ಹೈಕೋರ್ಟ್ಗೆ ಲಿಖಿತ ಮಾಹಿತಿ ನೀಡಿತ್ತು.

ಇದೀಗ ಸೀಮಾ ಗಡಿ ನಿರ್ಣಯ ಆಯೋಗ ರಾಜ್ಯದ ಗ್ರಾ.ಪಂ. ಸದಸ್ಯರ ಸಂಖ್ಯೆ ನಿಗದಿಪಡಿಸಿ ಆದೇಶ ನೀಡಿದೆ. ಕೊಡಗು ಜಿಲ್ಲೆಯಲ್ಲಿ ಮಡಿಕೇರಿ ತಾಲೂಕಿನ ೨೬ ಗ್ರಾ.ಪಂ.ಗಳಲ್ಲಿ ೨೯೫, ಸೋಮವಾರಪೇಟೆ ೨೩ ಗ್ರಾ.ಪಂ.ಗಳಲ್ಲಿ ೨೫೪, ವೀರಾಜಪೇಟೆ ೧೭ ಗ್ರಾ.ಪಂ.ಗಳಲ್ಲಿ ೨೦೫, ಕುಶಾಲನಗರ ೧೬ ಗ್ರಾ.ಪಂಗಳಲ್ಲಿ ೨೦೩ ಹಾಗೂ ಪೊನ್ನಂಪೇಟೆ ತಾಲೂಕಿನ ೨೦ ಗ್ರಾ.ಪಂ.ಗಳಲ್ಲಿ ೨೪೩ ಸದಸ್ಯ ಸ್ಥಾನಗಳನ್ನು ನಿಗದಿಪಡಿಸಲಾಗಿದೆ.

ಜಿಲ್ಲೆಯ ೧೦೨ ಗ್ರಾಮ ಪಂಚಾಯಿತಿಗಳಲ್ಲಿ ಒಟ್ಟು ೧೨೦೦ ಸದಸ್ಯ ಸ್ಥಾನಗಳನ್ನು ನಿಗದಿಪಡಿಸಿ, ಆಕ್ಷೇಪಣೆಗೆ ಅವಕಾಶ ನೀಡಲಾಗಿದೆ. ಆಕ್ಷೇಪಣೆಯ ನಂತರ ಜಿಲ್ಲೆಯಲ್ಲಿ ಸದಸ್ಯರ ಸಂಖ್ಯೆ ಕಡಿಮೆಯಾಗುತ್ತಾ ಅಥವಾ ಹೆಚ್ಚಳವಾಗುತ್ತಾ ಎಂಬದು ಕಾದುನೋಡಬೇಕಾಗಿದೆ.

ಇದೀಗ ಸೀಮಾ ಗಡಿ ನಿರ್ಣಯ ಆಯೋಗವು ಸದಸ್ಯರ ಸಂಖ್ಯೆ ನಿಗದಿಪಡಿಸಿ ಆದೇಶ ನೀಡಿದ್ದು, ಮೂರು ತಿಂಗಳೊಳಗೆ ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ವಾರ್ಡ್ವಾರು ಮೀಸಲಾತಿ ಪ್ರಕಟಿಸುವ ಸಾಧ್ಯತೆ ಇದೆ.

ಪ್ರಕಟಿಸಿರುವ ಸದಸ್ಯರ ಸಂಖ್ಯೆ

ಮಡಿಕೇರಿ ತಾಲೂಕು : ಮಕ್ಕಂದೂರು ೭, ಗಾಳಿಬೀಡು ೧೦, ಕಳಕೇರಿ ನಿಡುಗಣೆ ೧೦, ಕಡಗದಾಳು ೧೧, ಮರಗೋಡು ೧೦, ಹೊಸ್ಕೇರಿ ೯, ಕಾಂತೂರು ಮೂರ್ನಾಡು ೨೧, ಹೊದ್ದೂರು ೧೫, ಹಾಕತ್ತೂರು ೮, ಮೇಕೇರಿ ೧೦, ಬೆಟ್ಟಗೇರಿ ೧೬, ಮದೆ ೧೩, ಸಂಪಾಜೆ ೧೪, ಚೆಂಬು, ಪೆರಾಜೆ ೧೦, ಕರಿಕೆ ೧೧, ಭಾಗಮಂಡಲ೧೧, ಅಯ್ಯಂಗೇರಿ ೭, ಕುಂದಚೇರಿ ೮, ಬೇಂಗೂರು ಚೇರಂಬಾಣೆ ೧೨, ಬಲ್ಲಮಾವಟಿ ೮, ಎಮ್ಮೆಮಾಡು ೯, ನಾಪೋಕ್ಲು ೨೩, ಕುಂಜಿಲ (ಕಕ್ಕಬ್ಬೆ) ೧೪, ಕೊಣಂಜಗೇರಿ (ಪಾರಾಣೆ) ೯, ನರಿಯಂದಡ ೧೫

ಸೋಮವಾರಪೇಟೆ : ಕೊಡ್ಲಿಪೇಟೆ ೧೫, ಬ್ಯಾಡಗೊಟ್ಟ ೯, ಬೆನ್ನೂರು ೧೩, ಹಂಡ್ಲಿ ೧೧, ಶನಿವಾರಸಂತೆ ೧೦, ದುಂಡಳ್ಳಿ ೧೩, ನಿಡ್ತ ೧೩, ಆಲೂರು ೧೫, ಗೌಡಳ್ಳಿ ೧೦, ದೊಡ್ಡಮಳ್ತೆ ೯, ಶಾಂತಳ್ಳಿ ೭, ತೋಳೂರು ಶೆಟ್ಟಳ್ಳಿ ೧೩, ಬೆಟ್ಟದಳ್ಳಿ ೭, ಹಾನಗಲ್ಲು ೧೨, ಚೌಡ್ಲು ೧೪, ಬೇಳೂರು, ೧೫, ಕಿರಗಂದೂರು ೧೦, ಐಗೂರು ೧೧, ನೇರುಗಳಲೆ ೧೨, ಗಣಗೂರು ೮, ಹರದೂರು ೧೧, ಮಾದಾಪುರ ೧೬, ಗರ್ವಾಲೆ ೫

ವೀರಾಜಪೇಟೆ : ಚೆಂಬೆಬೆಳ್ಳೂರು ೧೦, ಬಿಟ್ಟಂಗಾಲ ೧೬, ಬೇಟೋಳಿ ೯, ಆರ್ಜಿ ೭, ಕೆದಮುಳ್ಳೂರು ೧೨, ಕಾಕೋಟುಪರಂಬು ೧೧, ಕದನೂರು ೧೦, ಅಮ್ಮತ್ತಿ ೯, ಕಾರ್ಮಾಡು ೧೨, ಬಿಳುಗುಂದ ೮, ಹೊಸೂರು ೧೨, ಪಾಲಿಬೆಟ್ಟ ೯, ಕಣ್ಣಂಗಾಲ ೧೦, ಹಾಲುಗುಂದ ೧೦, ಸಿದ್ದಾಪುರ ೨೫, ಮಾಲ್ದಾರೆ ೧೮, ಚೆನ್ನಯ್ಯನಕೋಟೆ ೧೭.

ಕುಶಾಲನಗರ : ನೆಲ್ಲಿಹುದಿಕೇರಿ ೨೦, ವಾಲ್ನೂರು ತ್ಯಾಗತ್ತೂರು ೧೧, ನಂಜರಾಯಪಟ್ಟಣ ೮, ಗುಡ್ಡೆಹೊಸೂರು ೧೫, ಕೂಡಿಗೆ ೧೫, ಕೂಡುಮಂಗಳೂರು ೨೪, ಹೆಬ್ಬಾಲೆ ೧೪, ತೊರೆನೂರು ೧೦, ಶಿರಂಗಾಲ ೯, ಚೆಟ್ಟಳ್ಳಿ ೧೫, ಕೆದಕಲ್ ೮, ಕೊಡಗರಹಳ್ಳಿ ೧೦, ಕಂಬಿಬಾಣೆ ೬, ೭ನೇ ಹೊಸಕೋಟೆ ೧೦, ನಾಕೂರು ಶಿರಂಗಾಲ ೮ ಸುಂಟಿಕೊಪ್ಪ ೨೦

ಪೊನ್ನಂಪೇಟೆ ; ಕಿರುಗೂರು ೧೦, ಅರುವತ್ತೋಕ್ಲು ೧೨, ಬಿ. ಶೆಟ್ಟಿಗೇರಿ ೬, ಹಾತೂರು ೧೮, ದೇವರಪುರ ೧೨, ತಿತಿಮತಿ ೧೫, ಕಾನೂರು ೧೨, ಬಾಳಲೆ ೧೩, ನಿಟ್ಟೂರು ೯, ಪೊನ್ನಪ್ಪಸಂತೆ ೮, ಮಾಯಮುಡಿ ೧೫, ಶ್ರೀಮಂಗಲ ೧೧, ನಾಲ್ಕೇರಿ ೭, ಕೆ.ಬಾಡಗ ೯, ಕುಟ್ಟ ೧೬, ಟಿ. ಶೆಟ್ಟಿಗೇರಿ ೧೬, ಬಲ್ಯಮಂಡೂರು ೬, ಹುದಿಕೇರಿ ೧೬, ಬಿರುನಾಣಿ ೧೧, ಗೋಣಿಕೊಪ್ಪಲು ೨೧