ಮಡಿಕೇರಿ, ಏ. ೨೨: ಕುಂಜಿಲ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಮೇ ೬ ರಿಂದ ೧೦ರವರಗೆ ಜಿಲ್ಲೆಯ ಜಮಾಅತ್ಗಳ ನಡುವೆ ೨ನೇ ವರ್ಷದ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಲಾಗಿದೆ ಎಂದು ಕ್ಲಬ್ ಕಾರ್ಯದರ್ಶಿ ಮೊಹಮ್ಮದ್ ಷರೀಫ್ ತಿಳಿಸಿದರು. ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೫ ದಿನಗಳ ಕಾಲ ಕಕ್ಕಬ್ಬೆಯ ಪ್ರೌಢಶಾಲಾ ಮೈದಾನದಲ್ಲಿ ಪಂದ್ಯಾಟ ನಡೆಯಲಿದ್ದು, ೬೦ಕ್ಕೂ ಹೆಚ್ಚು ತಂಡಗಳು ಭಾಗವಹಿಸುವ ನಿರೀಕ್ಷೆ ಇದೆ. ವಿಜೇತ ತಂಡಕ್ಕೆ ರೂ ೬೬, ೬೬೬ ಹಾಗೂ ದ್ವಿತೀಯ ಸ್ಥಾನ ಪಡೆಯುವ ತಂಡಕ್ಕೆ ರೂ. ೩೩,೩೩೩ ಬಹುಮಾನ ನೀಡಲಾಗುವುದು. ತೃತೀಯ ಹಾಗೂ ನಾಲ್ಕನೇ ಸ್ಥಾನ ಪಡೆಯುವ ತಂಡಗಳಿಗೆ ಆಕರ್ಷಕ ಟ್ರೋಫಿ ನೀಡಲಾಗುವುದು. ೬ ಓವರ್ಗಳ ಪಂದ್ಯಾಟ ಇದಾಗಿದ್ದು, ಮೇ ೧ ರೊಳಗಾಗಿ ತಂಡವನ್ನು ನೋಂದಾಯಿಸಿಕೊಳ್ಳಬೇಕು. ೯೮೪೫೨೨೫೨೮೪ ಸಂಖ್ಯೆಗೆ ಸಂಪರ್ಕಿಸಿ ನೋಂದಣಿ ಮಾಡಿಕೊಳ್ಳಬಹುದಾಗಿದೆ ಎಂದರು. ಗೋಷ್ಠಿಯಲ್ಲಿ ಕ್ಲಬ್ ಅಧ್ಯಕ್ಷ ಮೊಯ್ದು ಕುಂಜಿಲ, ಉಪಾಧ್ಯಕ್ಷ ಮುಸ್ತಾಫ, ಸಹಕಾರ್ಯದರ್ಶಿ ರಿಜ್ವಾನ್, ಖಜಾಚಿ ಶಮೀರ್, ತೀರ್ಪುಗಾರ ಹನೀಫ್ ಪಾಲ್ಗೊಂಡಿದ್ದರು.