ಚೇನಂಡ ಕಪ್ ವಿಜೇತ ಕುಟುಂಬಕ್ಕೆ ರೂ. ೩ ಲಕ್ಷ ನಗದು ಬಹುಮಾನ ನೀಡಲಾಗುತ್ತಿದೆ. ರನ್ನರ್ಸ್ ತಂಡಕ್ಕೆಎ ರೂ. ೨ ಲಕ್ಷ ಹಾಗೂ ಮೂರು ಮತ್ತು ನಾಲ್ಕನೇ ಸ್ಥಾನಕ್ಕೆ ತಲಾ ರೂ. ೧ ಲಕ್ಷ ಸೇರಿ ಒಟ್ಟು ೭ ಲಕ್ಷ ನಗದು ಬಹುಮಾನ ನೀಡಲಾಗುವುದು. ಜತೆಗೆ ಕೊಡವ ಹಾಕಿ ಅಕಾಡೆಮಿಯ ೧ ಕೆ.ಜಿ. ಬೆಳ್ಳಿಯ ರೋಲಿಂಗ್ ಟ್ರೋಫಿ ಸೇರಿದಂತೆ, ಟ್ರೋಫಿ ಮತ್ತಿತರ ಬಹುಮಾನಗಳು ಸಿಗಲಿವೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.