(ಕಾಯಪಂಡ ಶಶಿ ಸೋಮಯ್ಯ)

ಮಡಿಕೇರಿ, ಏ. ೨೧: ಕೊಡವ ಕೌಟುಂಬಿಕ ಹಾಕಿ ಉತ್ಸವ ಹತ್ತು ಹಲವು ವಿಶೇಷತೆಗಳೊಂದಿಗೆ ಮುಂದುವರಿಯುತ್ತಿದೆ. ಏಪ್ರಿಲ್ ೫ರಂದು ಪ್ರಾರಂಭಗೊAಡಿರುವ ೨೬ನೆಯ ವರ್ಷದ ಹಾಕಿ ಹಬ್ಬ ಇದೀಗ ೧೭ ದಿನ ಪೂರೈಸಿದೆ. ಪ್ರಸಕ್ತ ವರ್ಷದ ಚೇನಂಡ ಕಪ್ ಹಾಕಿ ಪಂದ್ಯಾವಳಿಯ ಮುಕ್ತಾಯಕ್ಕೆ ಇನ್ನೇನು ಕೇವಲ ೧೦ ದಿನಗಳಷ್ಟೇ ಬಾಕಿ ಉಳಿದಿದೆ.

ನಾಪೋಕ್ಲುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಚೇನಂಡ ಕಪ್ ಇದೀಗ ರೋಚಕ ಘಟ್ಟ ತಲುಪಿದೆ. ಒಟ್ಟು ೩೮೩ ಕುಟುಂಬಗಳ ಪೈಕಿ ೩೨೧ ಕುಟುಂಬ ತಂಡಗಳು ಪಂದ್ಯಾವಳಿಯಿAದ ನಿರ್ಗಮಿಸಿದ್ದು, ಇದೀಗ ಕೇವಲ ೬೨ ಕುಟುಂಬಗಳು ಮಾತ್ರ ಬಾಕಿ ಉಳಿದಿದ್ದು, ಪ್ರಶಸ್ತಿ ಸುತ್ತಿನ ಹೋರಾಟ ರೋಚಕ ಪಂದ್ಯಗಳೊAದಿಗೆ ಹಾಕಿ ಅಭಿಮಾನಿಗಳನ್ನು ಸೆಳೆಯುತ್ತಿವೆ. ಬಲಿಷ್ಠ ತಂಡಗಳು ಇದೀಗ ಕಣದಲ್ಲಿ ಇರುವುದರಿಂದ ಸಹಜವಾಗಿ ಪ್ರೇಕ್ಷಕರ ಸಂಖ್ಯೆಯೂ ಹೆಚ್ಚುತ್ತಿದೆ. ತಾ. ೨೨ ರಿಂದ (ಇಂದಿನಿAದ) ಎರಡು ಮೈದಾನಗಳಲ್ಲಿ ಮಾತ್ರ ಪಂದ್ಯ ನಡೆಯಲಿದೆ.

‘ವಿಶೇಷತೆಗಳ ನಡುವೆ ಹಾಕಿ ನಮ್ಮೆ’

ಚೇನಂಡ ಕಪ್ ಹಾಕಿ ಕೆಲವು ವಿಶೇಷತೆಗಳ ನಡುವೆ ಸಾಗುತ್ತಿದೆ. ಆಯೋಜಕ ಕುಟುಂಬದ ಚಿಂತನೆಯAತೆ ಈ ಬಾರಿ ಪಂದ್ಯಾವಳಿಯಲ್ಲಿ ಪಾಲ್ಗೊಂಡಿರುವ ಎಲ್ಲಾ ತಂಡಗಳಿಗೂ ಜೇನುಪೆಟ್ಟಿಗೆಯನ್ನು ಕೊಡುಗೆಯಾಗಿ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಜೇನು ಕೃಷಿ ಮತ್ತೆ ಹಿಂದಿನ ಗತವೈಭವ ಕಾಣಬೇಕೆಂಬ ಪರಿಕಲ್ಪನೆಯೊಂದಿಗೆ ಆಯೋಜಕರು ಜೇನುಪೆಟ್ಟಿಗೆ ನೀಡುತ್ತಿದ್ದಾರೆ.

೩೨೧ ಪೆಟ್ಟಿಗೆ ವಿತರಣೆ

ಪಂದ್ಯಾವಳಿಯಿAದ ಪರಾಭವಗೊಂಡು ಹಿಂತಿರುಗುವ ಸಂದರ್ಭ ಚೇನಂಡ ಕುಟುಂಬದ ವಿಶೇಷ ‘ಪಾಪುಲಿ’ ಸ್ಮರಣೆಯೊಂದಿಗೆ ಜೇನುಪೆಟ್ಟಿಗೆ ವಿಶೇಷ ಕೊಡುಗೆಯಾಗಿದೆ. ಎಲ್ಲಾ ೩೮೩ ಕುಟುಂಬಗಳಿಗೂ ಈ ಪೆಟ್ಟಿಗೆ ಸಿಗಲಿದೆ. ಪುತ್ತೂರಿನ ಕಾರ್ಖಾನೆಯೊಂದಕ್ಕೆ ಈ ಕುರಿತ ಬೇಡಿಕೆ ನೀಡಲಾಗಿದ್ದು, ಅಲ್ಲಿಂದು ಜೇನುಪೆಟ್ಟಿಗೆ ತರಿಸಲಾಗಿದೆ.

ಒಲಂಪಿಯನ್‌ಗಳ ಸಹಿಯ ಹಾಕಿ ಸ್ಟಿಕ್

ಪ್ರತಿ ಪಂದ್ಯದಲ್ಲಿ ಪಂದ್ಯಪುರುಷೋತ್ತಮನಾಗಿ ಆಯ್ಕೆಯಾಗುವ ಆಟಗಾರನಿಗೆ ಜಿಲ್ಲೆಯ ಒಲಂಪಿಯನ್‌ಗಳು, ವರ್ಲ್ಡ್ಕಪ್, ಏಷ್ಯನ್ ಗೇಮ್ಸ್ನಲ್ಲಿ ಸಾಧನೆ ಮಾಡಿರುವವರು ಚೇನಂಡ ಕುಟುಂಬದ ಅಧ್ಯಕ್ಷರು, ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷರು ಸೇರಿದಂತೆ ಒಟ್ಟು ೧೬ ಮಂದಿ ಸಹಿ ಮಾಡಿರುವ ಹಾಕಿ ಸ್ಟಿಕ್ ಅನ್ನು ನೀಡುತ್ತಿರುವುದು ಮತ್ತೊಂದು ವಿಶೇಷ.