ಮಹಿಳಾ ಹಾಕಿ ಉತ್ಸವ ತಾ. ೨೫ ರಿಂದ ಪ್ರಾರಂಭಗೊಳ್ಳಲಿದ್ದು, ಈ ಬಾರಿ ಕುಟುಂಬ ತಂಡಗಳು ಭಾಗವಹಿಸಲಿವೆ.

ವಿಜೇತರಿಗೆ ರೂ. ೨ ಲಕ್ಷ

ಮಹಿಳಾ ಹಾಕಿ ವಿಜೇತ ತಂಡ ರೂ ೨ ಲಕ್ಷ ನಗದು ಬಹುಮಾನ ಪಡೆಯಲಿದ್ದರೆ, ರನ್ನರ್ಸ್ ತಂಡ ರೂ. ೧ ಲಕ್ಷ ನಗದು ಪಡೆಯಲಿದೆ. ಭಾರತ ಹಾಕಿ ತಂಡಕ್ಕೆ ಆಡಿದ ಪ್ರಥಮ ಕೊಡವ ಮಹಿಳೆ ಪಾಂಡAಡ ಪುಷ್ಪ ಸುಬ್ಬಯ್ಯ ಬಹುಮಾನ ಪ್ರಾಯೋಜಿಸುತ್ತಿದ್ದಾರೆ. ಚೇನಂಡ ಕುಟುಂಬ ಟ್ರೋಫಿ ನೀಡಲಿದೆ.

ಲೇಕ್ ಸೈಡ್ ಕ್ಲಬ್ : ಬೆಂಗಳೂರಿನ ಲೇಕ್ ಸೈಡ್ ಹಾಕಿ ಕ್ಲಬ್‌ನ ಸದಸ್ಯರು ಮಹಿಳಾ ಹಾಕಿ ಪಂದ್ಯಾಟವನ್ನು ನಡೆಸಿಕೊಡುತ್ತಿದ್ದಾರೆ ಎಂದು ದೀನಾ ಚಂಗಪ್ಪ ಮಾಹಿತಿ ನೀಡಿದರು.