ಮಡಿಕೇರಿ, ಏ.೨೧: ಪೊನ್ನಂಪೇಟೆ ತಾಲೂಕಿನ ತಿತಿಮತಿಯಲ್ಲಿ ರೋಮನ್ ಕ್ಯಾಥೋಲಿಕ್ ಅಸೋಸಿ ಯೇಷನ್ ಆಶ್ರಯದಲ್ಲಿ ನಡೆದ ಕ್ರೀಡೋತ್ಸವದಲ್ಲಿ ವೀರಾಜಪೇಟೆ ಶಾಸಕ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ. ಎಸ್. ಪೊನ್ನಣ್ಣ ಭಾಗವಹಿಸಿ ಮಾತನಾಡಿ ಕ್ರೀಡೆಯು ಪ್ರತಿ ಯೊಬ್ಬರ ಮಾನಸಿಕ ಹಾಗೂ ದೈಹಿಕ ಸಮತೋಲನಕ್ಕೆ ಸಹಕಾರಿ ಎಂದರು.

ಈ ಸಂದರ್ಭ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಅಧ್ಯಕ್ಷ ಜಾನ್ಸನ್ ಪಿಂಟೋ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಿದೇರಿರ ನವೀನ್, ವಲಯ ಅಧ್ಯಕ್ಷ ನವೀನ್, ಪಂಚಾಯಿತಿ ಮಾಜಿ ಸದಸ್ಯ ಅಫ್ರೋಜ್, ಪಕ್ಷದ ಮುಖಂಡರಾದ ಜೋಕಿಮ್, ಮರ್ವಿನ್ ಲೋಬೊ, ರವೀಂದ್ರ ಭಾವೆ, ಮೇಲ್ರಯ್ ಲೋಬೋ, ತೆರೇಸಾ ವಿಕ್ಟರ್, ಫಿಲೋಮಿನಾ ಮತ್ತಿತರರು ಉಪಸ್ಥಿತರಿದ್ದರು.