ಮಡಿಕೇರಿ, ಏ. ೨೦: ೨೦೨೫ರ ಮಾರ್ಚ್ನಲ್ಲಿ ನಡೆದಿದ್ದ ಹಲ್ಲೆ ಪ್ರಕರಣವೊಂದಕ್ಕೆ ಸಂಬAಧಿಸಿದAತೆ ಇದೀಗ ಮೂವರ ವಿರುದ್ಧ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾ. ೧೮.೩.೨೦೨೫ ರಂದು ನಾಪೋಕ್ಲು ಬೇತು ಗ್ರಾಮದ ನಿವಾಸಿ ಹಮೀದ್ ಎಂಬವರ ಸಹೋದರ ಹಂಸ ಎಂಬವರು ನೀಡಿದ ದೂರಿಗೆ ಸಂಬAಧಿಸಿದAತೆ ಹಮೀದ್ ಅವರು ತಮ್ಮ ಸೋದರ ಸಂಬAಧಿ ಸಫಿಯಾ ಹಾಗೂ ಅತ್ತಿಗೆ ಸಫೂರ ಎಂಬವರೊAದಿಗೆ ನಾಪೋಕ್ಲು ಠಾಣೆಗೆ ಭೇಟಿ ನೀಡಿ ಬಳಿಕ ಮನೆಗೆ ಹಿಂತಿರುಗುವ ವೇಳೆ ನಾಪೋಕ್ಲು ಮಾರುಕಟ್ಟೆ ಬಳಿಯ ಲುಕ್ಮನ್ ಹೊಟೇಲ್ ಬಳಿಗೆ ಏಂ -೦೫ -ಒಒ-೨೦೨೨ ಸಂಖ್ಯೆಯ ಕಾರಿನಲ್ಲಿ ಬಂದ ನಾಪೋಕ್ಲು ಬೇತು ಗ್ರಾಮದ ಕೆ.ಎ. ಇಸ್ಮಾಯಿಲ್, ಕೆ.ಐ. ಮಹಮ್ಮದ್ ಅಲಿ ಹಾಗೂ ಕೆ.ಎಚ್. ಅಹಮದ್ ಎಂಬುವರು ಹಮೀದ್ ಹಾಗೂ ಸಫಿಯಾ, ಸಫೂರ ಅವರುಗಳ ಮೇಲೆ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆ ಸಂದರ್ಭ ಹಮೀದ್ ಠಾಣೆಗೆ ದೂರು ನೀಡಿದ್ದರು. ಆದರೆ, ತನ್ನ ದೂರಿಗೆ ಸಂಬAಧಿಸಿದAತೆ ಸರಿಯಾದ ತನಿಖೆ ನಡೆದಿಲ್ಲ ಎಂದು ಹಮೀದ್ ನ್ಯಾಯಾಲಯ ಮೊರೆ ಹೋಗಿದ್ದರು. ಹಮೀದ್ ಅರ್ಜಿಯನ್ನು ಪರಿಶೀಲಿಸಿದ ನ್ಯಾಯಾಲಯ ಕೂಡಲೇ ಈ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ನಾಪೋಕ್ಲು ಪೊಲೀಸರಿಗೆ ಆದೇಶ ನೀಡಿದ ಹಿನ್ನೆಲೆಯಲ್ಲಿ ಇದೀಗ ತಾ. ೧೬ ರಂದು ಕೆ.ಎ.ಇಸ್ಮಾಯಿಲ್, ಕೆ.ಐ. ಮಹಮ್ಮದ್ ಅಲಿ ಹಾಗೂ ಕೆ.ಎಚ್. ಅಹಮದ್ ಇವರುಗಳ ವಿರುದ್ಧ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.