ವೀರಾಜಪೇಟೆ, ಏ. ೨೦: ಅಮ್ಮತ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪುಲಿಯೇರಿ (ಇಂಜಿಲಗೆರೆ) ಗ್ರಾಮದಲ್ಲಿರುವ ಮಂಗಳಾAಕುನ್ನೇಲ್ ಶ್ರೀ ಚಾಮುಂಡೇಶ್ವರಿ ಗುಳಿಗನ್ ದೇವಸ್ಥಾನದ ಪ್ರತಿಷ್ಠಾ ಬ್ರಹ್ಮ ಕಲಶ ಮಹೋತ್ಸವ ತಾ. ೨೧ ರಿಂದ (ಇಂದಿನಿAದ) ರಿಂದ ತಾ. ೨೩ ರವರೆಗೆ ನಡೆಯಲಿದೆ ಎಂದು ದೇವಾಲಯದ ಮುಖ್ಯಸ್ಥ ಎಂ.ಬಿ. ಶ್ರೀಜಿಶ್ ತಿಳಿಸಿದ್ದಾರೆ.
ಸುಮಾರು ೩೦೦ ವರ್ಷಗಳಿಗೂ ಅಧಿಕ ಕಾಲದಿಂದ ಪೂಜೆ ನಡೆಯುತ್ತಿದ್ದು, ಕಳೆದ ೧೨ ವರ್ಷಗಳಿಂದ ದೇವಾಲಯ ನಿರ್ಮಾಣಕ್ಕೆ ಶ್ರಮಿಸಲಾಗುತ್ತಿತ್ತು. ಇದೀಗ ದೇವಾಲಯ ನಿರ್ಮಾಣಗೊಂಡಿದ್ದು, ಅಂದಾಜು ೨೫ ಲಕ್ಷ ರೂ ವೆಚ್ಚವಾಗಿದೆ. ತಾ. ೨೧ ರಂದು ಸಂಜೆ ೫ ಗಂಟೆಗೆ ಕಾಂಞAಗಾಡ್ ಎಡಮನ ಇಲ್ಲತ್ತಿಲ್ ಬ್ರಹ್ಮಶ್ರೀ ಶ್ರೀ ಈಶ್ವರ ತಂತ್ರಿಗಳನ್ನು ಸ್ವಾಗತಿಸಿಕೊಂಡು ಧಾರ್ಮಿಕ ಕಾರ್ಯಗಳಿಗೆ ಚಾಲನೆ ದೊರೆಯಲಿದೆ. ತಾ. ೨೨ ರಂದು ಬೆಳಿಗ್ಗೆ ೬ ಗಂಟೆಗೆ ಮಹಾಗಣಪತಿ ಹೋಮ, ಮಹಾ ಮೃತ್ಯುಂಜಯ ಹೋಮ, ಪೂಜೆಗಳು ನಡೆಯಲಿವೆೆ. ತಾ. ೨೩ ರಂದು ಬೆಳಿಗ್ಗೆ ೬ ಗಂಟೆಗೆ ಮಹಾಗಣಪತಿ ಹೋಮ, ಸಾಮೂಹಿಕ ನೀಲಾಂಜನ ಸಮರ್ಪಣೆ, ಬೆಳಿಗ್ಗೆ ೬ ಗಂಟೆಗೆ ಮಹಾಗಣಪತಿ ಹೋಮ, ಬೆಳಿಗ್ಗೆ ೭.೩೪ ರಿಂದ ೯:೩೭ರ ವೇಳೆಗೆ ಮಂಗಳಾAಕುನ್ನೇಲ್ ಶ್ರೀ ಚಾಮುಂಡೇಶ್ವರಿ ಗುಳಿಗನ್ ಪ್ರತಿಷ್ಠಾಪನೆ ನಡೆಯಲಿದೆ. ನಂತರ ದೇವಿಗೆ ಬ್ರಹ್ಮಕಲಶಾಭಿಷೇಕ, ಅಲಂಕಾರ ಪೂಜೆ ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆ ನಡೆಯಲಿದೆ ಎಂದರು.