ಮಡಿಕೇರಿ, ಏ. ೨೦: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ವತಿಯಿಂದ ೯ನೇ ಕೊಡವ ಪುಸ್ತಕ ಪತ್ತಾಯವನ್ನು ಮಡಿಕೇರಿಯಲ್ಲಿರುವ ಶಕ್ತಿ ದಿನಪತ್ರಿಕೆ ಕಾರ್ಯಾಲಯದಲ್ಲಿ ತಾ. ೨೨ ರಂದು ಸ್ಥಾಪಿಸಲಾಗುವುದು.
ಸಂಜೆ ೪ ಗಂಟೆಗೆ ನಡೆಯಲಿರುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ ವಹಿಸಿಕೊಳ್ಳಲಿದ್ದಾರೆ. ಶಕ್ತಿ ದಿನಪತ್ರಿಕೆಯ ಪ್ರಧಾನ ಸಂಪಾದಕ ಜಿ. ರಾಜೇಂದ್ರ ಕಾರ್ಯಕ್ರಮ ಉದ್ಘಾಟಿಸಲಿದ್ದು, ಪುಸ್ತಕ ಪತ್ತಾಯವನ್ನು ಪತ್ರಕರ್ತ ಹೆಚ್.ಟಿ. ಅನಿಲ್ ಅನಾವರಣಗೊಳಿಸಲಿದ್ದಾರೆ. ‘ಶಕ್ತಿ’ ಸಂಪಾದಕ ಜಿ. ಚಿದ್ವಿಲಾಸ್ ಹಾಗೂ ಸಲಹಾ ಸಂಪಾದಕ ಬಿ.ಜಿ.ಅನಂತಶಯನರ ಉಪಸ್ಥಿತಿಯಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಮಡಿಕೇರಿ ಎಫ್ಎಂಕೆಎAಸಿ ಪದವಿ ಕಾಲೇಜಿನ ಉಪನ್ಯಾಸಕ ಕಾಳಿಮಡ ಎಂ. ಪೂಣಚ್ಚ, ಮಡಿಕೇರಿ ಕೊಡವ ಸಮಾಜ ಪೊಮ್ಮಕ್ಕಡ ಕೂಟ ಅಧ್ಯಕ್ಷೆ ಕವಿತ ಬೊಳ್ಳಪ್ಪ, ಸಮಾಜ ಸೇವಕ ಮುನೀರ್ ಅಹಮದ್ ಪಾಲ್ಗೊಳ್ಳಲಿದ್ದಾರೆ.