ಮಡಿಕೇರಿ ಏ.೨೦ : ಕಳೆದ ಅನೇಕ ವರ್ಷಗಳಿಂದ ನಿರ್ಗತಿಕರು, ವಯೋವೃದ್ಧರು ಹಾಗೂ ಆಶ್ರಯ ಇಲ್ಲದವರಿಗೆ ಆಶ್ರಯ ನೀಡಿ ಸಂತೈಸುತ್ತಿರುವ ಮಡಿಕೇರಿಯ ವಿಕಾಸ್ ಜನತಾ ಸೇವಾ ಟ್ರಸ್ಟ್ನ ನೂತನ ವ್ಯವಸ್ಥಾಪನಾ ಸಮಿತಿಯನ್ನು ರಚಿಸಲಾಗಿದೆ.
ಸಮಿತಿಯ ಅಧ್ಯಕ್ಷರಾಗಿ ಮಿನಾಜ಼್ ಪ್ರವೀಣ್, ಗೌರವ ಸಲಹೆಗಾರರಾಗಿ ಮಹಮ್ಮದ್ ಕೆ.ಕೆ., ಪ್ರಧಾನ ಕಾರ್ಯದರ್ಶಿಯಾಗಿ ಗಣೇಶ್ ಕೆ.ಎ, ಖಜಾಂಚಿಯಾಗಿ ಪ್ರಮೋದ್, ಸಂಚಾಲಕರಾಗಿ ಕವನ್ ಕೊತ್ತೋಳಿ, ದಿನೇಶ್ ಕೆ.ಆರ್, ಕಾರ್ಯದರ್ಶಿ ಡೇವಿಡ್ ಡಿಸೋಜ, ಸಹ ಕಾರ್ಯದರ್ಶಿ ಚಿನ್ಮಯಿ, ಉಪಾಧ್ಯಕ್ಷರುಗಳಾಗಿ ಬಿ.ಎ.ಹರಿಣಾಕ್ಷಿ ಹಾಗೂ ಉಮೇಶ್ ಗೌಡ ಪಿ. ಅವರುಗಳನ್ನು ಸಭೆಯಲ್ಲಿ ನೇಮಕ ಮಾಡಲಾಯಿತು.
ವಿಕಾಸ್ ಜನತಾ ಸೇವಾ ಟ್ರಸ್ಟ್ನ ಸ್ಥಾಪಕಾಧ್ಯಕ್ಷ ಡಿ.ಕರಿಯಪ್ಪ, ಅಧ್ಯಕ್ಷ ನವೀನ್ ಬಿ.ಕೆ ಪ್ರಧಾನ ಕಾರ್ಯದರ್ಶಿ ಕೋಚನ ಚೇತನ್ ಹಾಗೂ ಗೌರವ ಅಧ್ಯಕ್ಷ ಪ್ರಸನ್ನ ಭಟ್ ಅವರ ನೇತೃತ್ವದಲ್ಲಿ ನೂತನ ವ್ಯವಸ್ಥಾಪನಾ ಸಮಿತಿಯ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.