ಮಡಿಕೇರಿ, ಏ. ೨೦: ಮಡಿಕೇರಿ ನಗರದ ಶ್ರೀ ಓಂಕಾರೇಶ್ವರ ದೇವಾಲಯ ಹಾಗೂ ಶ್ರೀ ಆಂಜನೇಯ ದೇವಾಲಯದ ವಾರ್ಷಿಕ ಪ್ರತಿಷ್ಠಾ ದಿನಾಚರಣೆ ಏಪ್ರಿಲ್ ೨೬ ರಂದು ಜರುಗಲಿದೆ. ಅಲ್ಲದೆ, ಶ್ರೀ ಆಂಜನೇಯ ದೇವಾಲಯ ಆವರಣದಲ್ಲಿ ನೂತನವಾಗಿ ನವಗ್ರಹ ಪ್ರತಿಷ್ಠಾಪನೆ ನಡೆಯಲಿದೆ. ಕ್ಷೇತ್ರ ತಂತ್ರಿಗಳಾದ ಉಚ್ಚಿಲದ ವೇದಬ್ರಹ್ಮ ಶ್ರೀ ನೀಲೇಶ್ವರ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ ಧಾರ್ಮಿಕ ಆಚರಣೆ ನಡೆಯಲಿದೆ.

ಕಾರ್ಯಕ್ರಮಗಳ ವಿವರಗಳು

ತಾ. ೨೫ ಶನಿವಾರದಂದು ಸಂಜೆ ೬ ರಿಂದ ಪ್ರಾರ್ಥನೆ, ಆಂಜನೇಯ ಗುಡಿಯಲ್ಲಿ ಪುಣ್ಯಾಹ, ಆರೂಢ ಪರಿಗ್ರಹ ಹಾಗೂ ನವಗ್ರಹ ಬಿಂಬ ಪರಿಗ್ರಹ, ಜಲಾಧಿವಾಸ, ವಾಸ್ತುರಾಕ್ಷೆÆÃಘ್ನ ಹೋಮ, ವಾಸ್ತು ಬಲಿ ಹಾಗೂ ಮಹಾಪೂಜೆ ನಡೆಯಲಿದೆ.

ತಾ. ೨೬ ಭಾನುವಾರದಂದು ಬೆಳಿಗ್ಗೆ ೭ ರಿಂದ ಗಣಪತಿ ಹೋಮ, ಬಿಂಬ ಶುದ್ಧಿ, ಶ್ರೀ ನೀಲೇಶ್ವರ ಪದ್ಮನಾಭ ತಂತ್ರಿಯವರಿAದ ೧೧ ಗಂಟೆಗೆ ಮಿಥುನ ಲಗ್ನದ ಶುಭ ಮುಹೂರ್ತದಲ್ಲಿ ನವಗ್ರಹ ಪ್ರತಿಷ್ಠಾಪನೆ (ಆಂಜನೇಯ ದೇವಾಲಯದ ಆವರಣದಲ್ಲಿ) ಸಾನ್ನಿಧ್ಯ ಕಳಶ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ. ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ ಎಂದು ಓಂಕಾರೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚುಮ್ಮಿ ದೇವಯ್ಯ ತಿಳಿಸಿದ್ದಾರೆ.