ವೀರಾಜಪೇಟೆ, ಏ. ೨೦: ವೀರಾಜಪೇಟೆ ತಾಲೂಕಿನ ಆರ್ಜಿ ಗ್ರಾಮದಲ್ಲಿನ ವಾಲ್ಮೀಕಿ ಭವನದಲ್ಲಿ ನಕ್ಸಲ್ ನಿಗ್ರಹ ಪಡೆ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಗಿತ್ತು. ನಕ್ಸಲ್ ಪೀಡಿತ ಪ್ರದೇಶಗಳ ಬುಡಕಟ್ಟು ಜನಾಂಗದವರ ಆರೋಗ್ಯ ಹಿತದೃಷ್ಟಿಯಿಂದ ಹಮ್ಮಿಕೊಳ್ಳಲಾಗಿದ್ದ ಈ ಕಾರ್ಯಕ್ರಮ ಯಶಸ್ವಿಯಾಯಿತು.
ನಕ್ಸಲ್ ನಿಗ್ರಹ ಪಡೆಯ ಪೊಲೀಸ್ ಅಧೀಕ್ಷಕರಾದ ಹರಿರಾಮ್ ಶಂಕರ್ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕಿ ಬಿಂದು ಮಣಿ ಆರ್.ಎನ್, ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ನಕ್ಸಲ್ ಪೀಡಿತ ದುರ್ಗಮ ಪ್ರದೇಶಗಳಲ್ಲಿ ವಾಸಿಸುವ ಬುಡಕಟ್ಟು ಜನಾಂಗದವರಿಗೆ ಉತ್ತಮ ಆರೋಗ್ಯ ಸೇವೆಗಳನ್ನು ಅವರ ಮನೆಬಾಗಿಲಿಗೆ ತಲುಪಿಸುವ ಮತ್ತು ಅವರಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಶಿಬಿರವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಕೆ. ಅಮರನಾಥ್ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರು ಹಾಗೂ ಎ.ಬಿ ಶೆಟ್ಟಿ ಡೆಂಟಲ್ ಕಾಲೇಜಿನ ಅಸೋಸಿಯೇಟ್ ಡೀನ್ ಆಗಿರುವ ಡಾ. ಅಮರಶ್ರೀ ಅಮರನಾಥ್ ಶೆಟ್ಟಿ ಹಾಗೂ ಇತರೆ ವೈದ್ಯರ ತಂಡವು ಕಾರ್ಯಕ್ರಮವನ್ನು ಉದ್ಘಾಟಿಸಿತು. ಡಾ. ಅಮರಶ್ರೀ ಅಮರನಾಥ್ ಶೆಟ್ಟಿ ಅವರು ಮಾತನಾಡಿ ಕಾರ್ಯಕ್ರಮದ ಉದ್ದೇಶ ಹಾಗೂ ಶಿಬಿರದಲ್ಲಿ ಯಾವ ಯಾವ ಚಿಕಿತ್ಸೆಯನ್ನು ನೀಡಲಾಗುತ್ತಿದೆ ಎಂಬುದರ ಬಗ್ಗೆ ಮಾಹಿತಿ ನೀಡಿದರು
ವೇದಿಕೆಯಲ್ಲಿ ನಿಟ್ಟೆಯ ಎ.ಬಿ ಶೆಟ್ಟಿ ಡೆಂಟಲ್ ಕಾಲೇಜಿನ ಡಾ. ಶಿಲ್ಪ, ಮಂಗಳೂರಿನ ದೇರಳಕಟ್ಟೆಯ ಜಸ್ಟಿಸ್ ಕೆ.ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆಯ ಡಾ. ಕುಶಾಲ್, ಮಡಿಕೇರಿಯ ಇಕ್ಷ ಕಣ್ಣಿನ ಆಸ್ಪತ್ರೆ, ಡಾ. ಗುರುಪ್ರಸಾದ್ ಉಪಸ್ಥಿತರಿದ್ದು ಮಾತನಾಡಿದರು. ಈ ಶಿಬಿರದಲ್ಲಿ ಮೂಡುಬಿದಿರೆಯ ಕೆ. ಅಮರನಾಥ್ ಶೆಟ್ಟಿ ಚಾರಿಟೇಬಲ್ ಟ್ರಸ್ಟ್, ಮಂಗಳೂರಿನ ಎ.ಬಿ ಶೆಟ್ಟಿ ಮೆಮೋರಿಯಲ್ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸ್ ನಿಟ್ಟೆ(ಡಿ.ಯು), ಜಸ್ಟಿಸ್ ಕೆ.ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ ದೇರಳಕಟ್ಟೆ, ಮಂಗಳೂರು, ಮಡಿಕೇರಿಯ ಇಕ್ಷ ಕಣ್ಣಿನ ಆಸ್ಪತ್ರೆಯ ಸುಮಾರು ೫೦ ಪರಿಣಿತ ವೈದ್ಯರ ತಂಡ ಭಾಗವಹಿಸಿ ೪ಮೂರನೇ ಪುಟಕ್ಕೆ
(ಮೊದಲ ಪುಟದಿಂದ) ಜನರಿಗೆ ವೈದ್ಯಕೀಯ ಸೇವೆ ನೀಡಿತು. ಕೊಡಗು ಭಾಗದ ನಕ್ಸಲ್ ಪೀಡಿತ ಪ್ರದೇಶಗಳ ಕಾಡುಕುರುಬ, ಜೇನುಕುರುಬ, ಸೋಲಿಗ, ಎರವ, ಕುಡಿಯ ಬುಡಕಟ್ಟು ಜನಾಂಗದ ಒಟ್ಟು ೨೭೫ ಮಂದಿ ಈ ಶಿಬಿರದ ಪ್ರಯೋಜನ ಪಡೆದರು. ದುರ್ಗಮ ಪ್ರದೇಶಗಳಿಂದ ಬರಲು ಸಾಧ್ಯವಾಗದ ಗ್ರಾಮಸ್ಥರನ್ನು ಎಎನ್‌ಎಫ್ ಘಟಕದ ವಾಹನಗಳ ಮೂಲಕವೇ ಅವರ ಗ್ರಾಮಗಳಿಂದ ಕರೆತಂದು ತಪಾಸಣೆ ಮುಗಿದ ಬಳಿಕ ಮರಳಿ ಅವರ ಮನೆಗೆ ಬಿಡುವ ವ್ಯವಸ್ಥೆಯನ್ನು ನಕ್ಸಲ್ ನಿಗ್ರಹ ಪಡೆ ಮಾಡಿತ್ತು. ಶಿಬಿರದಲ್ಲಿ ಹೃದಯ, ಕಣ್ಣು, ಕಿವಿ, ಮೂಗು, ದಂತ, ಬಿ.ಪಿ, ಶುಗರ್, ಮೂಳೆ ಮತ್ತು ಗಂಟು, ಪ್ರಸೂತಿ ಮತ್ತು ಸ್ತಿçÃರೋಗ ಹಾಗೂ ಚರ್ಮರೋಗಕ್ಕೆ ಸಂಬAಧಿಸಿದAತೆ ತಪಾಸಣೆ ನಡೆಸಲಾಯಿತು.
ನೇತ್ರ ಚಿಕಿತ್ಸೆ: ಒಟ್ಟು ೧೮೦ ಜನರನ್ನು ತಪಾಸಣೆ ನಡೆಸಲಾಗಿದ್ದು, ೬೯ ಜನರಿಗೆ ಕನ್ನಡಕ ಹಾಗೂ ೫ ಜನರಿಗೆ ಕಣ್ಣಿನ ಶಸ್ತçಚಿಕಿತ್ಸೆಯ ಅಗತ್ಯವಿದ್ದು, ಉಡುಪಿಯ ಪ್ರಸಾದ್ ನೇತ್ರಾಲಯದಲ್ಲಿ ಉಚಿತವಾಗಿ ಕನ್ನಡಕ ವಿತರಣೆ ಮಾಡುವ ಬಗ್ಗೆ ಹಾಗೂ ಶಸ್ತç ಚಿಕಿತ್ಸೆಯನ್ನು ಮಡಿಕೇರಿಯ ಇಕ್ಷ ಕಣ್ಣಿನ ಆಸ್ಪತ್ರೆಯಲ್ಲಿ ಮಾಡಲು ಕ್ರಮ ಕೈಗೊಳ್ಳಲಾಗಿದೆ.
ದಂತ ಚಿಕಿತ್ಸೆ: ೯೩ ಜನರು ತಪಾಸಣೆಗೆ ಒಳಪಟ್ಟಿದ್ದು, ಹೆಚ್ಚಿನ ಚಿಕಿತ್ಸೆ ಅಗತ್ಯವಿರುವ ೮ ಜನರಿಗೆ ಎ.ಬಿ ಶೆಟ್ಟಿ ಡೆಂಟಲ್ ಕಾಲೇಜಿನಲ್ಲಿ ವ್ಯವಸ್ಥೆ ಮಾಡಲಾಗಿದೆ.
ಜನರಲ್ ಮೆಡಿಸಿನ್: ೨೭೫ ಜನರ ತಪಾಸಣೆಯನ್ನು ನಡೆಸಿದ್ದು, ಎಲ್ಲರಿಗೂ ಉಚಿತವಾಗಿ ಔಷಧಿ ಮತ್ತು ಮಾತ್ರೆಗಳನ್ನು ವಿತರಣೆ ಮಾಡಲಾಗಿದೆ. ಶಿಬಿರದಲ್ಲಿ ಪಾಲ್ಗೊಂಡ ಎಲ್ಲಾ ಗ್ರಾಮಸ್ಥರು ಹಾಗೂ ವೈದ್ಯಕೀಯ ತಂಡಕ್ಕೆ ಎಎನ್‌ಎಫ್ ವತಿಯಿಂದ ಊಟ ಮತ್ತು ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು. ಈ ಸಂದರ್ಭ ನಕ್ಸಲ್ ನಿಗ್ರಹ ಪಡೆಯ ಎಲ್ಲಾ ಸಿಬ್ಬಂದಿಗಳು ಹಾಜರಿದ್ದು ಶಿಬಿರದ ನಿರ್ವಹಣೆ ಮಾಡಿದರು.