ಮಡಿಕೇರಿ, ಏ.೨೦; ಮಡಿಕೇರಿ ಅರೆಭಾಷೆ ಗೌಡ ಸ್ಪೋರ್ಟ್ಸ್ ಅಕಾಡೆಮಿ ವತಿಯಿಂದ ಮಡಿಕೇರಿಯ ಗಾಂಧಿ ಮೈದಾನದಲ್ಲಿ ಗೌಡ ಜನಾಂಗ ಬಾಂಧವರಿಗಾಗಿ ಏರ್ಪಡಿಸಲಾಗಿದ್ದ, ಎರಡು ದಿನಗಳ ಕಾಲ ನಡೆದ ಹೊನಲು ಬೆಳಕಿನ ಗೌಡ ಕ್ರೀಡಾ ಹಬ್ಬ ವರ್ಣರಂಜಿತ ತೆರೆ ಕಂಡಿತು.
ಶನಿವಾರ ಬೆಳಿಗ್ಗೆ ಆರಂಭಗೊAಡ ಕ್ರೀಡಾ ಹಬ್ಬ ಭಾನುವಾರ ರಾತ್ರಿವರೆಗೆ ಹೊನಲು ಬೆಳಕಿನಲ್ಲಿ ನಡೆಯಿತು. ಮಕ್ಕಳು, ಮಹಿಳೆಯರು, ಪುರುಷರ ಮುಕ್ತ ಫುಟ್ಬಾಲ್ ಚಾಂಪಿಯನ್‌ಶಿಪ್ ಹಾಗೂ ವಿಶೇಷವಾಗಿ ೪೫ವರ್ಷ ಮೇಲ್ಪಟ್ಟ ಹಿರಿಯರ ಲೆಜೆಂಡ್ಸ್ ಪಂದ್ಯಾವಳಿ ಕ್ರೀಡಾಭಿಮಾನಿಗಳು ಹಾಗೂ ಪ್ರೇಕ್ಷಕರ ಮನಸೂರೆಗೊಂಡವು. ರಾತ್ರಿ ವೇಳೆ ನಡೆದ ನಾಲ್ಕು ವಿಭಾಗಗಳ ಅಂತಿಮ ಪಂದ್ಯಾವಳಿ ಸಂದರ್ಭ ಗಾಂಧಿ ಮೈದಾನದಲ್ಲಿ ಕಿಕ್ಕಿರಿದು ನೆರೆದಿದ್ದ ಕ್ರೀಡಾಭಿಮಾನಿಗಳು ಶಿಳ್ಳೆ, ಚಪ್ಪಾಳೆಯೊಂದಿಗೆ ಕ್ರೀಡಾಪಟುಗಳನ್ನು ಹುರಿದುಂಬಿಸಿದರು. ಗ್ರಾಮವಾರು ಮಹಿಳೆಯರ ಹಗ್ಗ ಜಗ್ಗಾಟ ರೋಚಕತೆಯಿಂದ ಕೂಡಿತ್ತು. ಉಭಯ ಕಡೆಗಳ ತಂಡಗಳು ಉಸಿರು ಬಿಗಿ ಹಿಡಿದು ಹಲವು ನಿಮಿಷಗಳ ಕಾಲ ಹಗ್ಗ ಜಗ್ಗಾಡಲು ಬಿಡದೆ ಎಳೆದಾಡುತ್ತಿದ್ದ ಕ್ಷಣಗಳು ಪ್ರೇಕ್ಷಕರನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿತು. ರಾತ್ರಿ ವೇಳೆ ಬಹುಮಾನ ವಿತರಣೆಯೊಂದಿಗೆ ಕ್ರೀಡಾ ಹಬ್ಬಕ್ಕೆ ತೆರೆ ಎಳೆಯಲಾಯಿತು.
ಕ್ರೀಡಾ ಸಂಸ್ಕೃತಿ-ಪರAಪರೆ ಮುಂದುವರಿಯಬೇಕು
ಕ್ರೀಡಾ ಹಬ್ಬದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ, ರೋಲಿಂಗ್ ಟ್ರೋಫಿ ಅನಾವರಣಗೊಳಿಸಿ ಮಾತನಾಡಿದ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವೀರಾಜಪೇಟೆ ಕ್ಷೇತ್ರದ ಶಾಸಕರಾದ ಎ.ಎಸ್. ಪೊನ್ನಣ್ಣ ಮಾತನಾಡಿ; ಕೊಡಗು ಜಿಲ್ಲೆಯಲ್ಲಿ ಇದೀಗ ಹಬ್ಬದ ವಾತಾವರಣವಿದೆ. ಯಾವದೇ ಮೈದಾನ ನೋಡಿದರೂ ೪ಮೂರನೇ ಪುಟಕ್ಕೆ
(ಮೊದಲ ಪುಟದಿಂದ) ಅಲ್ಲಿ ಕ್ರೀಡಾಕೂಟಗಳು ನಡೆಯುತ್ತಿವೆ. ಎಲ್ಲ ಜನಾಂಗ, ಧರ್ಮ, ಜಾತಿ,ವರ್ಗ, ಪಂಗಡ ಎಲ್ಲ ಸೇರಿ ಒಟ್ಟು ಸೇರಿ ಕ್ರೀಡೆಯಲ್ಲಿ ಭಾಗವಹಿಸುತ್ತಿರುವದು ಹೆಮ್ಮೆಯ ವಿಷಯವೆಂದು ಹೇಳಿದರು.
ಕೊಡಗು ಸಣ್ಣ ಜಿಲ್ಲೆಯಾಗಿದ್ದು, ಜನಸಂಖ್ಯೆಯೂ ಸಣ್ಣದಿದೆ. ಆದರೆ ಕ್ರೀಡೆಗೆ ದೊಡ್ಡ ಕೊಡುಗೆ ನೀಡಿದೆ. ಒಂದು ಜಿಲ್ಲೆಯಿಂದ ದೇಶದಲ್ಲಿ ಅತಿ ಹೆಚ್ಚು ಸಂಖ್ಯೆಯ ಒಲಂಪಿಯನ್ಸ್, ಅಂತರರಾಷ್ಟಿçÃಯ ಆಟಗಾರರನ್ನು ನೀಡಿರುವ ಜಿಲ್ಲೆಯೆಂದರೆ ಅದು ಕೊಡಗು ಎಂದು ಬಣ್ಣಿಸಿದ ಅವರು; ಕ್ರೀಡಾ ಹಬ್ಬಗಳು ಇಂದಿನ ಅವಶ್ಯಕತೆ ಕೂಡಾ ಹೌದು. ಮೈದಾನದಲ್ಲಿ ಆಟವಾಡದಿದ್ದರೂ ಮಕ್ಕಳು, ಯುವಕ-ಯುವತಿಯರು, ಮಹಿಳೆಯರು ಓಡಾಡಿಕೊಢಿದ್ದರೆ ಸಮಾಜ ಜಾಗೃತವಾಗಿದೆ ಎಂದರ್ಥ ಎಂದು ಹೇಳಿದರು.
ಕ್ರೀಡಾಕೂಟ ಆಯೋಜನೆ ಕಷ್ಟದ ಹಾಗೂ ಫಲಾಪೇಕ್ಷೆಯಿಲ್ಲದ ಕೆಲಸ, ಎಲ್ಲರೂ ಆಟವಾಡಿ ಹೋಗುತ್ತಾರೆ, ಆಯೋಜಕರ ಶ್ರಮವನ್ನು ಗುರುತಿಸುವದಿಲ್ಲ. ಅಂತಹದ್ದರಲ್ಲಿ ಅರೆಭಾಷೆ ಸ್ಪೋರ್ಟ್ಸ್ ಅಕಾಡೆಮಿಯ ಶ್ರಮ ಶ್ಲಾಘನೀಯವಾದುದೆಂದು ಹೇಳಿದರು.
ಸೋತು-ಗೆಲ್ಲುವ ಸಾಮರ್ಥ್ಯ ಇರಬೇಕು
ಜಿಲ್ಲೆಯ ವಿದ್ಯಾರ್ಥಿನಿ ಹೊಸಮನೆ ಸಿಂಚನ ಪ್ರಸನ್ನ ಶೇ.೯೯.೫ ಅಂಕಗಳೊAದಿಗೆ ಪ್ರಥಮ ಗಳಿಸಿರುವದು ಹೆಮ್ಮೆಯ ವಿಷಯ. ಇಲ್ಲಿ ಎಲ್ಲರಿಗೂ ಪ್ರಥಮ ಸ್ಥಾನ ಪಡೆಯಲು ಸಾಧ್ಯವಿಲ್ಲ, ಇದಕ್ಕೆ ಶಿಕ್ಷಣ ಕ್ಷೇತ್ರದಲ್ಲೂ ಉತ್ತರವಿಲ್ಲ. ಹಲವಾರು ಪ್ರತಿಭಾವಂತರು ಇರುತ್ತಾರೆ, ಅವರುಗಳಿಗೆ ಕ್ರೀಡೆ ಮುಂತಾದ ಚಟುವಟಿಕೆಗಳಿಂದ ಸಾಧನೆ ಮಾಡಲು ಸಾಧ್ಯವಿದೆ. ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವದೊಂದಿಗೆ ಸೋತು ಗೆಲ್ಲುವ ಸಾಮರ್ಥ್ಯ ಬರಲಿದೆ ಎಂದು ಅಭಿಪ್ರಾಯಿಸಿದರು.
ಎಲ್ಲರಲ್ಲೂ ಪ್ರತಿಭೆಯಿದ್ದು ಎಲ್ಲರಿಗೂ ವೇದಿಕೆ ಹಾಗೂ ಅವಕಾಶಗಳ ಕೊರತೆ ಇರುತ್ತದೆ, ಇಂತಹ ಕಾರ್ಯಕ್ರಮಗಳ ಮೂಲಕ ಕ್ರೀಡಾ ಸಂಸ್ಕೃತಿ-ಪರAಪರೆ ಮುಂದುವರಿಯಬೇಕು. ಈ ಒಂದು ಕ್ರೀಡಾ ಹಬ್ಬದಲ್ಲಿ ಲೆಜೆಂಡ್ಸ್ ತಂಡದಲ್ಲಿ ೬೦ವರ್ಷಕ್ಕೂ ಮೇಲ್ಪಟ್ಟವರು ಕೂಡ ಭಾಗವಹಿಸಿರುವದು ಸಂತೋಷದ ವಿಷಯವೆಂದರು.
ಉದ್ಯಮಿ ಎಡಿಕೇರಿ ಪ್ರಸನ್ನ, ರಾಜ್ಯ ಒಕ್ಕಲಿಗರ ಸಂಘದ ಕಾರ್ಯಾಧ್ಯಕ್ಷ ಹರಪಳ್ಳಿ ರವೀಂದ್ರ ಕ್ರೀಡಾ ಹಬ್ಬಕ್ಕೆ ಶುಭ ಹಾರೈಸಿದರು. ಇದಕ್ಕೂ ಮುನ್ನ ಶಾಸಕ ಪೊನ್ನಣ್ಣ ಅವರು ಹಗ್ಗಜಗ್ಗಾಟ ಅಂತಿಮ ಪಂದ್ಯಾವಳಿಗೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಮಡಿಕೇರಿ ನಗರಸಭಾಧ್ಯಕ್ಷೆ ಪಿ.ಕಲಾವತಿ, ಉಪಾಧ್ಯಕ್ಷ ಮಹೇಶ್ ಜೈನಿ, ಸದಸ್ಯೆ ಕುಟ್ಟನ ಶ್ವೇತಾ ಪ್ರಶಾಂತ್, ನಾಮ ನಿರ್ದೇಶಿತ ಸದಸ್ಯ ಮುದ್ದುರಾಜ್, ಅಯ್ಯಂಗೇರಿ ಗ್ರಾ.ಪಂ. ಮಾಜಿ ಅಧ್ಯಕ್ಷ ಕುಯ್ಯಮುಡಿ ರಂಜು, ಕಾಂಗ್ರೆಸ್ ಮುಖಂಡ ಅಪ್ರು ರವೀಂದ್ರ, ಸಮಾಜ ಸೇವಕ ಸೂರಜ್ ಹೊಸೂರು, ದಾನಿಗಳಾದ ಬೊಮ್ಮನ ಕಿರಣ್, ತೋಟಂಬೈಲ್ ಅನಂತ್‌ಕುಮಾರ್, ದಂಬೆಕೋಡಿ ಕವನ ಭೀಷ್ಮ, ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಮುಕ್ಕಾಟಿ ಅರುಣ್‌ಕುಮಾರ್ ಹಾಗೂ ಗೌಡ ಸ್ಪೋರ್ಟ್ಸ್ ಅಕಾಡೆಮಿ ಪದಾಧಿಕಾರಿಗಳು ಇದ್ದರು. ನಂತರ ನಾಲ್ಕು ವಿಭಾಗಗಳ ಫುಟ್ಬಾಲ್ ಪಂದ್ಯಾವಳಿಗಳ ಅಂತಿಮ ಪಂದ್ಯಾಟಗಳು ನಡೆದು ಬಳಿಕ ಬಹುಮಾನ ವಿತರಣೆ ಮಾಡಲಾಯಿತು.