ವಾಷಿಂಗ್‌ಟನ್, ಏ.೨೦: ಇರಾನ್ ದೇಶದ ಸರಕು ಸಾಗಿಸುವ ಹಡಗನ್ನು ಅಮೇರಿಕಾದ ನೌಕಾಪಡೆಯು ವಶಕ್ಕೆ ಪಡೆದಿದ್ದು, ಮಧ್ಯಪ್ರಾಚ್ಯದಲ್ಲಿನ ಪರಿಸ್ಥಿತಿ ಇನ್ನಷ್ಟು ಉದ್ವಿಗ್ನವಾಗುವ ಸಾಧ್ಯತೆಗಳಿವೆ.

ಇರಾನ್ ದೇಶದ ಟೂಸ್ಕಾ ಹೆಸರಿನ ಸರಕು ತುಂಬಿದ ಹಡಗನ್ನು ಇರಾನ್‌ನ ಬಂದರು ಬಳಿಯೇ ಅಮೇರಿಕಾದ ನೌಕಾಪಡೆಯು ದಾಳಿ ಮಾಡಿ ವಶಕ್ಕೆ ಪಡೆದುಕೊಂಡಿದೆ. ದಾಳಿ ಮಾಡಿರುವ ವೀಡಿಯೋವನ್ನು ಕೂಡ ಬಿಡುಗಡೆ ಮಾಡಿರುವ ಅಮೇರಿಕಾದ ಸೇನೆಯು, ರಾತ್ರೋರಾತ್ರಿ ಈ ಘಟನೆ ನಡೆದಿದ್ದು, ಇರಾನಿನ ಸರಕು ಹಡಗಿನ ಮೇಲೆ ಹೆಲಿಕಾಪ್ಟರ್‌ಗಳನ್ನೂ ಬಳಸಿ ಸೇನಾ ಸಿಬ್ಬಂದಿ ಇಳಿದು ಸಂಪೂರ್ಣವಾಗಿ ವಶಕ್ಕೆ ಪಡೆಯುವ ಚಿತ್ರಣ ಕಾಣಬಹುದು.

ಸರಕು ಹಡಗಿನಲ್ಲಿನ ಸಿಬ್ಬಂದಿಗಳ ಸ್ಥಿತಿಗತಿ ಬಗ್ಗೆ ಇದುವರೆಗೂ ಯಾವುದೇ ಮಾಹಿತಿಯನ್ನು ಇರಾನ್ ಆಗಲಿ ಅಮೇರಿಕಾ ಆಗಲಿ ಬಹಿರಂಗಪಡಿಸಿರುವುದಿಲ್ಲ.

ಮಾತುಕತೆ ವೈಫಲ್ಯ ಬಳಿಕ ಇರಾನ್‌ಗೆ ಬಂದಿದ್ದ ಅಮೇರಿಕಾ ನೌಕಾಪಡೆ

ಫೆ.೨೮ರಿಂದ ನಡೆಯುತ್ತಿರುವ ಅಮೇರಿಕಾ-ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧ ಸಂಬAಧ ಏಪ್ರಿಲ್ ೮ ರಂದು ೨ ವಾರಗಳ ಕದನ ವಿರಾಮ ಘೋಷಣೆಯಾಗಿತ್ತು. ೪ಮೂರನೇ ಪುಟಕ್ಕೆ

(ಮೊದಲ ಪುಟದಿಂದ) ಇದಾದ ಬಳಿಕ ಇತ್ತೀಚೆಗಷ್ಟೆ ಪಾಕಿಸ್ತಾನದ ಸಹಕಾರದಲ್ಲಿ ಇರಾನ್ ಹಾಗೂ ಅಮೇರಿಕಾ ನಡುವೆ ಹಲವಾರು ಒಪ್ಪಂದಗಳ ಆಧಾರದಲ್ಲಿ ಯುದ್ಧ ಸಂಪೂರ್ಣ ನಿಲ್ಲಿಸುವ ಸಂಬAಧ ಮಾತುಕತೆ ನಡೆದಿತ್ತು. ಈ ಮಾತುಕತೆ ವಿಫಲವಾಯಿತು. ಇದರ ಬೆನ್ನಲ್ಲೇ ಮಧ್ಯಪ್ರಾಚ್ಯದ ಕತಾರ್, ದುಬೈ ಹಾಗೂ ಇತರ ದೇಶಗಳಲ್ಲಿ ಶಾಶ್ವತವಾಗಿ ನೆಲೆಸಿರುವ ಅಮೇರಿಕಾ ಸೇನೆಯು ತನ್ನ ನೌಕಾಪಡೆಯ ಸಹಕಾರದಲ್ಲಿ ಇರಾನ್‌ನಲ್ಲಿರುವ ಬಂದರುಗಳನ್ನು ಸುತ್ತುವರಿದಿತು. ನೌಕಾಪಡೆಯ ಈ ಬ್ಲಾಕೇಡ್‌ಅನ್ನು ದಾಟಿ ಸಾಗಲು ಇರಾನ್‌ನ ಹಡಗು ಇಂದು ಯತ್ನಿಸಿದಾಗ ಅಮೇರಿಕಾ ನೌಕಾಪಡೆಯು ತನ್ನ ಯು.ಎಸ್.ಎಸ್ ಸ್ಪುçಯಾನ್ಸ್ ಡಿಸ್ಟಾçಯರ್ ಹಡಗನ್ನು ಬಳಸಿ ಇರಾನಿನ ಸರಕು ಹಡಗಿನ ಇಂಜಿನ್ ಮೇಲೆ ದಾಳಿ ಮಾಡಿ ನಿಷ್ಕಿçಯಗೊಳಿಸಿ ಸಂಪೂರ್ಣ ಹಡಗನ್ನು ವಶಕ್ಕೆ ಪಡೆಯಿತು.

ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣ ಖಾತೆ ಟ್ರುತ್ ಸೋಷಿಯಲ್‌ನಲ್ಲಿ ಮಾಹಿತಿ ಹಂಚಿಕೊAಡಿರುವ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, “ನಮ್ಮ ನೌಕಾಪಡೆಯ ಬ್ಲಾಕೇಡ್ ಮೂಲಕ ಇರಾನ್ ಹಡಗು ದಾಟಲು ಯತ್ನಿಸಿತು. ಎಚ್ಚರಿಕೆ ನೀಡಿದರೂ ಹಿಂತಿರುಗದ ಕಾರಣ ಅದರ ಇಂಜಿನ್ ನಿಷ್ಕಿçಯಗೊಳಿಸಿ ವಶಕ್ಕೆ ಪಡೆಯಲಾಗಿದೆ. ಹಡಗಿನಲ್ಲಿ ಏನೇನಿವೆ ಎಂಬುದನ್ನು ಪರಿಶೀಲಿಸಲಾಗುತ್ತಿದೆ” ಎಂದು ಬರೆದುಕೊಂಡಿದ್ದಾರೆ.

ಹೋರ್ಮುಜ್ ಜಲಸಂಧಿಯೂ ಬ್ಲಾಕ್

ಮಧ್ಯಪ್ರಾಚ್ಯದಿಂದ ಪೂರ್ವದ ರಾಷ್ಟçಗಳಿಗೆ ಇಂಧನ ಸಾಗಾಣಿಕೆಯ ಪ್ರಮುಖ ಮಾರ್ಗ ಹೋರ್ಮುಜ್ ಜಲಸಂಧಿಯನ್ನೂ ೨ ದಿನಗಳ ಹಿಂದೆ ಇರಾನ್ ನೌಕಾಪಡೆಯು ತಡೆದಿದ್ದು, ಭಾರತದ ಸರಕು ಹಡಗುಗಳು ಕೂಡ ಜಲಸಂಧಿಯಲ್ಲಿಯೇ ಉಳಿಯುವಂತಾಗಿದೆ.

ಮಧ್ಯಪ್ರಾಚ್ಯದಿಂದ ಇತರ ರಾಷ್ಟçಗಳ ಹಡಗುಗಳ ಸಂಚಾರಕ್ಕೆ ಇರಾನ್ ತಡೆ ಮಾಡಿದರೆ, ಇರಾನ್‌ನ ಬಂದರುವಿನಿAದ ಇರಾನ್‌ನ ಹಡಗುಗಳೇ ಸಮುದ್ರಕ್ಕೆ ಇಳಿಯದ ಪರಿಸ್ಥಿಯನ್ನು ಅಮೇರಿಕಾ ಸೃಷ್ಟಿಸಿದ್ದು ವಿಶ್ವದಾದ್ಯಂತ ಇಂಧನ ಕೊರತೆ, ಬೆಲೆ ಏರಿಕೆಯಾಗುವ ಸಾಧ್ಯತೆಗಳಿವೆ.