ಪೊನ್ನAಪೇಟೆ, ಏ. ೨೦: ಕೂರ್ಗ್ ಕ್ರಿಕೆಟ್ ಫೌಂಡೇಷನ್ ವತಿಯಿಂದ ಗೋಣಿಕೊಪ್ಪಲು ಕಾವೇರಿ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿರುವ ೩ನೇ ವರ್ಷದ ಟಿ-೨೦ ಮಾದರಿಯ ಕೊಡವ ಲೆದರ್ ಬಾಲ್ ಕ್ರಿಕೆಟ್ ಪ್ರೀಮಿಯರ್ ಲೀಗ್‌ನಲ್ಲಿ ಎಂ.ಟಿ.ಬಿ ರಾಯಲ್ಸ್ ಮತ್ತು ಪ್ರಗತಿ ಕ್ರಿಕೆಟ್ ಅಕಾಡೆಮಿ ನಡುವೆ ನಡೆದ ಕೊನೆಯ ಲೀಗ್ ಪಂದ್ಯದಲ್ಲಿ ಪ್ರಗತಿ ಕ್ರಿಕೆಟ್ ಅಕಾಡೆÀಮಿ ಗೆಲುವಿನೊಂದಿಗೆ ಪಂದ್ಯಾವಳಿಯಿAದ ನಿರ್ಗಮಿಸಿತು.

ಮೊದಲು ಬ್ಯಾಟ್ ಮಾಡಿದ ಪ್ರಗತಿ ಕ್ರಿಕೆಟ್ ಅಕಾಡೆಮಿ ೧೯.೫ ಓವರ್‌ಗಳಲ್ಲಿ ಎಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು ೧೭೩ ರನ್ ಗಳಿಸಿ, ಎಂ.ಟಿ.ಬಿ ರಾಯಲ್ಸ್ಗೆ ೧೭೪ ರನ್‌ಗಳ ಗುರಿ ನೀಡಿತು. ಅಭಿಮನ್ಯು ದೇವಯ್ಯ ೪೯ ಎಸೆತಗಳಲ್ಲಿ ೬೦ ರನ್ ಗಳಿಸಿದರು. ಎಂ.ಟಿ.ಬಿ ರಾಯಲ್ಸ್ ಪರ ನೆಲ್ ದೇವಯ್ಯ ೨ ವಿಕೆಟ್ ಕಬಳಿಸಿದರು. ಗುರಿ ಬೆನ್ನಟ್ಟಿದ ಎಂ.ಟಿ.ಬಿ ರಾಯಲ್ಸ್ ಗೆಲುವಿಗಾಗಿ ತೀವ್ರ ಹೋರಾಟ ನಡೆಸಿ, ೨೦ ಓವರ್ ಗಳಲ್ಲಿ ೮ ವಿಕೆಟ್ ನಷ್ಟಕ್ಕೆ ೧೬೪ ಗಳಿಸಿ ಸೋಲೊಪ್ಪಿಕೊಂಡಿತು. ಸುಕ್ಕಿ ೪೧ ಎಸೆತಗಳಲ್ಲಿ ೫೨ ರನ್‌ಗಳಿಸಿದರು.ಪ್ರಗತಿ ಕ್ರಿಕೆಟ್ ಅಕಾಡಮಿ ಪರ ಪೊನ್ನಣ್ಣ ೨ ವಿಕೆಟ್ ಗಳಿಸಿದರು. ಪ್ರಗತಿ ಕ್ರಿಕೆಟ್ ಅಕಾಡಮಿಯ ಅಭಿಮನ್ಯು ದೇವಯ್ಯ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದುಕೊಂಡರು.

ಪ್ಲೇ ಆಫ್‌ಗೆ ಅರ್ಹತೆ ಪಡೆದ ತಂಡಗಳು

೧೧ ದಿನಗಳ ಕಾಲ ೧೦ ತಂಡಗಳ ನಡುವೆ ನಡೆದ ಲೀಗ್ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರಿದ ೪ ತಂಡಗಳು ಪ್ಲೇ ಆಫ್ ಗೆ ಅರ್ಹತೆ ಪಡೆದು ಕೊಂಡಿವೆ. ಅಂಜಿಗೇರಿ ನಾಡ್, ಟೀಮ್ ಕೊಡವ ಟ್ರೆöÊಬ್, ಕೂರ್ಗ್ ಟೈಟಾನ್ಸ್ ಮತ್ತು ಎಂ.ಟಿ. ಬಿ ರಾಯಲ್ಸ್ ತಂಡಗಳು ಚಾಂಪಿಯನ್ ಪಟ್ಟಕ್ಕಾಗಿ ಸೆಣೆಸಾಟ ನಡೆಸಲಿವೆ. ಪ್ಲೇ ಆಫ್ ಹಂತದ ಪಂದ್ಯಗಳು ತಾ. ೨೪ ರಿಂದ ನಡೆಯಲಿದ್ದು, ಫೈನಲ್ ಪಂದ್ಯ ತಾ. ೨೬ ರಂದು ನಡೆಯಲಿದೆ. - ಚನ್ನನಾಯಕ