ಮಡಿಕೇರಿ ಏ. ೨೦: ಕೊಡವ ಕುಟುಂಬಗಳ ನಡುವೆ ಮೂರ್ನಾಡಿನಲ್ಲಿ ನಡೆಯುತ್ತಿರುವ ೨೪ನೇ ವರ್ಷದ ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆಯಲ್ಲಿ ಮಾಳೇಟಿರ ಹಾಗೂ ತಂಬುಕುತ್ತಿರ ತಂಡ ಮಿಂಚಿನ ಆಟದ ಮೂಲಕ ಗಮನ ಸೆಳೆಯಿತು.
ಲಾಲು ಮುದ್ದಯ್ಯ ಮೈದಾನದಲ್ಲಿ ಮಾಳೇಟಿರ (ಕೆದಮುಳ್ಳೂರು) ಮತ್ತು ಕೊಡಂದೇರ ತಂಡಗಳ ನಡುವಿನ ಪಂದ್ಯದಲ್ಲಿ ಮಾಳೇಟಿರ ತಂಡಕ್ಕೆ ೧೪೮ ರನ್ಗಳ ಭರ್ಜರಿ ಗೆಲುವು ಲಭಿಸಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಮಾಳೇಟಿರ ೬ ಓವರ್ಗಳಲ್ಲಿ ೧ ವಿಕೆಟ್ ನಷ್ಟಕ್ಕೆ ದಾಖಲೆಯ ೧೯೦ ರನ್ಗಳನ್ನು ಪೆೆÃರಿಸಿತು. ಕೊಡಂದೇರ ೬ ಓವರ್ಗಳಲ್ಲಿ ೬ ವಿಕೆಟ್ ನಷ್ಟಕ್ಕೆ ೪೨ ರನ್ಗಳನ್ನಷ್ಟೇ ಗಳಿಸಿ ಸೋಲು ಅನುಭವಿಸಿತು.
ತಂಬುಕುತ್ತಿರ ಮತ್ತು ಚೇಂದAಡ ನಡುವಿನ ಪಂದ್ಯದಲ್ಲಿ ತಂಬುಕುತ್ತಿರಕ್ಕೆ ೪೯ ರನ್ ಅಂತರದ ಗೆಲುವು ದೊರೆಯಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ತಂಬುಕುತ್ತಿರ ೬ ಓವರ್ಗಳಲ್ಲಿ ೧ ವಿಕೆಟ್ ನಷ್ಟಕ್ಕೆ ೧೧೧ ರನ್ ಗಳನ್ನು ಗಳಿಸಿತು. ಚೇಂದAಡ ೬ ಓವರ್ಗಳಲ್ಲಿ ೩ ವಿಕೆಟ್ ನಷ್ಟಕ್ಕೆ ೬೨ ರನ್ ಗಳಿಸಿ ಸೋಲು ಅನುಭವಿಸಿತು.
ಬೊಜ್ಜಂಗಡ ಮತ್ತು ಚಿರಿಯಪಂಡ ನಡುವಿನ ಪಂದ್ಯದಲ್ಲಿ ಚಿರಿಯಪಂಡ ತಂಡಕ್ಕೆ ೮ ವಿಕೆಟ್ಗಳ ಜಯ ಲಭಿಸಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಬೊಜ್ಜಂಗಡ ೬ ಓವರ್ಗಳಲ್ಲಿ ೧ ವಿಕೆಟ್ ನಷ್ಟಕ್ಕೆ ೮೨ ರನ್ ಗಳಿಸಿತು. ಚಿರಿಯಪಂಡ ೫.೪ ಓವರ್ಗಳಲ್ಲಿ ೨ ವಿಕೆಟ್ ನಷ್ಟಕ್ಕೆ ೮೪ ರನ್ ಸೇರಿಸಿ ಗೆಲುವು ಸಾಧಿಸಿತು.
ಕನ್ನಂಡ ಮತ್ತು ಅಲ್ಲಂಗಡ ನಡುವಿನ ಪಂದ್ಯದಲ್ಲಿ ಕನ್ನಂಡ ೧೦ ರನ್ಗಳ ಗೆಲುವು ದಾಖಲಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕನ್ನಂಡ ೬ ಓವರ್ಗಳಲ್ಲಿ ೩ ವಿಕೆಟ್ ನಷ್ಟಕ್ಕೆ ೮೨ ರನ್ ಸೇರಿಸಿತು. ಅಲ್ಲಂಗಡ ೬ ಓವರ್ಗಳಲ್ಲಿ ೫ ವಿಕೆಟ್ ನಷ್ಟಕ್ಕೆ ೭೨ ರನ್ ಗಳಿಸಿ ಸೋಲೊಪ್ಪಿಕೊಂಡಿತು.
ಅರಮೇರಿಯ ಎಸ್ಎಂಎಸ್ ಮೈದಾನದಲ್ಲಿ ಮುಕ್ಕಾಟಿರ (ಕುಂಬಳದಾಳು) ಮತ್ತು ಚೀಕಂಡ ನಡುವಿನ ಪಂದ್ಯದಲ್ಲಿ ಮುಕ್ಕಾಟಿರ ತಂಡಕ್ಕೆ ೧೦ ವಿಕೆಟ್ಗಳ ಜಯ ಲಭಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಚೀಕಂಡ ೬ ಓವರ್ಗಳಲ್ಲಿ ೮ ವಿಕೆಟ್ ನಷ್ಟಕ್ಕೆ ೩೨ ರನ್ ಗಳಿಸಿತು. ಮುಕ್ಕಾಟಿರ ೩.೧ ಓವರ್ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ ೩೫ ರನ್ ಸೇರಿಸಿ ಗೆಲುವು ಕಂಡಿತು.
ಬಲ್ಲಚAಡ ಮತ್ತು ಸಿದ್ದಂಡ ನಡುವಿನ ಪಂದ್ಯದಲ್ಲಿ ಸಿದ್ದಂಡ ತಂಡ ೩೭ ರನ್ಗಳಿಂದÀ ಗೆಲುವು ದಾಖಲಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸಿದ್ದಂಡ ೬ ಓವರ್ಗಳಲ್ಲಿ ೧ ವಿಕೆಟ್ ನಷ್ಟಕ್ಕೆ ೮೦ ರನ್ ಗಳನ್ನು ಸೇರಿಸಿತು. ಬಲ್ಲಚಂಡ ೬ ಓವರ್ಗಳಲ್ಲಿ ೫ ವಿಕೆಟ್ ನಷ್ಟಕ್ಕೆ ೪೩ ರನ್ಗಳನ್ನು ಗಳಿಸಿ ಸೋಲು ಕಂಡಿತು.
ಬೊಳ್ಳೇರ ಮತ್ತು ಅಣ್ಣಳಮಾಡ (ಪೂಕೊಳ) ನಡುವಿನ ಹಣಾಹಣಿಯಲ್ಲಿ ಬೊಳ್ಳೇರ ೫ ವಿಕೆಟ್ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಅಣ್ಣಳಮಾಡ ೬ ಓವರ್ಗಳಲ್ಲಿ ೬ ವಿಕೆಟ್ ನಷ್ಟಕ್ಕೆ ೪೭ ರನ್ಗಳನ್ನು ಗಳಿಸಿತು. ಬೊಳ್ಳೇರ ೫.೫ ಓವರ್ಗಳಲ್ಲಿ ೫ ವಿಕೆಟ್ ನಷ್ಟಕ್ಕೆ ೪೮ ರನ್ ದಾಖಲಿಸಿ ಜಯ ಸಾಧಿಸಿತು.
ಮಾಳೇಟಿರ (ಕೆದಮುಳ್ಳೂರು) ಮತ್ತು ಮಲ್ಚೀರ ನಡುವಿನ ಪಂದ್ಯದಲ್ಲಿ ಮಾಳೇಟಿರ ೨೫ ರನ್ಗಳಿಂದ ಗೆಲುವು ಸಾಧಿಸಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಮಾಳೇಟಿರ ೬ ಓವರ್ಗಳಲ್ಲಿ ೫ ವಿಕೆಟ್ ನಷ್ಟಕ್ಕೆ ೬೧ ರನ್ ಸೇರಿಸಿತು. ಮಲ್ಚೀರ ೬ ಓವರ್ಗಳಲ್ಲಿ ೭ ವಿಕೆಟ್ ನಷ್ಟಕ್ಕೆ ೩೬ ರನ್ ಗಳಿಸಿ ಸೋಲೊಪ್ಪಿಕೊಂಡಿತು. ಐಚೋಡಿಯಂಡ ಮತ್ತು ಚೆಕ್ಕೇರ ನಡುವಿನ ಪಂದ್ಯದಲ್ಲಿ ಚೆಕ್ಕೇರ ೨೩ ರನ್ಗಳಿಂದ ಗೆಲುವು ದಾಖಲಿಸಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಚೆಕ್ಕೇರ ೬ ಓವರ್ಗಳಲ್ಲಿ ೧ ವಿಕೆಟ್ ನಷ್ಟಕ್ಕೆ ೯೧ ರನ್ಗಳನ್ನು ಗಳಿಸಿತು. ಐಚೋಡಿಯಂಡ ೬ ಓವರ್ಗಳಲ್ಲಿ ೩ ವಿಕೆಟ್ ನಷ್ಟಕ್ಕೆ ೬೮ ರನ್ಗಳನ್ನಷ್ಟೇ ಸೇರಿಸಿ ಸೋಲು ಕಂಡಿತು.
ಮಹಿಳಾ ಕ್ರಿಕೆಟ್ ಫಲಿತಾಂಶ
ಮಲ್ಚೀರ ಮತ್ತು ಕಟ್ಟೆರ (ಅರಮೇರಿ) ತಂಡಗಳ ನಡುವಿನ ಪಂದ್ಯದಲ್ಲಿ ಕಟ್ಟೆರ ೩೦ ರನ್ಗಳ ಜಯ ಸಾಧಿಸಿತು. ಕಟ್ಟೆರ ೫ ಓವರ್ಗಳಲ್ಲಿ ೩ ವಿಕೆಟ್ ನಷ್ಟಕ್ಕೆ ೫೫ ರನ್ ಸೇರಿಸಿತು. ಮಲ್ಚೀರ ೫ ಓವರ್ಗಳಲ್ಲಿ ೬ ವಿಕೆಟ್ ನಷ್ಟಕ್ಕೆ ೨೫ ರನ್ ಗಳಿಸಿ ಸೋಲೊಪ್ಪಿಕೊಂಡಿತು.
ಮಾಚಿಮಂಡ ಮತ್ತು ಕೊಕ್ಕೆಂಗಡ ನಡುವಿನ ಪಂದ್ಯದಲ್ಲಿ ಮಾಚಿಮಂಡ ೬೨ ರನ್ಗಳಿಂದ ಗೆಲುವು ಸಾಧಿಸಿತು. ಮಾಚಿಮಂಡ ೫ ಓವರ್ಗಳಲ್ಲಿ ೨ ವಿಕೆಟ್ ನಷ್ಟಕ್ಕೆ ೮೭ ರನ್ ಗಳಿಸಿತು. ಕೊಕ್ಕೆಂಗಡ ೫ ಓವರ್ಗಳಲ್ಲಿ ೩ ವಿಕೆಟ್ ನಷ್ಟಕ್ಕೆ ೨೫ ರನ್ ಪೆÉÃರಿಸಿ ಸೋಲು ಕಂಡಿತು.
ಅಚ್ಚಪ್ಪAಡ ಮತ್ತು ಚೇಂದಿರ ನಡುವಿನ ಪಂದ್ಯದಲ್ಲಿ ಅಚ್ಚಪ್ಪಂಡ ತಂಡಕ್ಕೆ ೯ ವಿಕೆಟ್ಗಳ ಜಯ ಲಭಿಸಿತು. ಚೇಂದಿರ ೫ ಓವರ್ಗಳಲ್ಲಿ ೩ ವಿಕೆಟ್ ನಷ್ಟಕ್ಕೆ ೩೫ ರನ್ಗಳನ್ನು ಸೇರಿಸಿತು. ಅಚ್ಚಪ್ಪಂಡ ೪.೧ ಓವರ್ಗಳಲ್ಲಿ ೧ ವಿಕೆಟ್ ನಷ್ಟಕ್ಕೆ ೩೭ ರನ್ಗಳನ್ನು ಗಳಿಸಿ ಗೆಲುವು ಸಾಧಿಸಿತು.
ಮೀದೇರಿರ ಮತ್ತು ಮುಕ್ಕಾಟಿರ (ಮೂವತ್ತೊಕ್ಲು) ನಡುವಿನ ಪಂದ್ಯದಲ್ಲಿ ಮುಕ್ಕಾಟಿರ ೧೦ ವಿಕೆಟ್ಗಳ ಜಯ ಸಾಧಿಸಿತು. ಮೀದೇರಿರ ೫ ಓವರ್ಗಳಲ್ಲಿ ೨ ವಿಕೆಟ್ ನಷ್ಟಕ್ಕೆ ೩೫ ರನ್ ಗಳಿಸಿತು. ಮುಕ್ಕಾಟಿರ ತಂಡ ೪.೫ ಓವರ್ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ ೩೮ ರನ್ ಸೇರಿಸಿ ಗೆಲುವಿನ ನಗು ಬೀರಿತು. ಕುಪ್ಪಣ್ಣಮಾಡ ಮತ್ತು ಮಂದನೆರವAಡ ನಡುವಿನ ಪಂದ್ಯದಲ್ಲಿ ಮಂದನೆರವAಡ ತಂಡ ೧೦ ವಿಕೆಟ್ಗಳ ಜಯ ಕಂಡಿತು. ಮಂದನೆರವAಡ ೫ ಓವರ್ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ ೬೧ ರನ್ ಗಳಿಸಿತು. ಕುಪ್ಪಣ್ಣಮಾಡ ೫ ಓವರ್ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ ೪೬ ರನ್ ಸೇರಿಸಿ ಸೋಲು ಅನುಭವಿಸಿತು.
ಅರಮಣಮಾಡ (ಬೆಸಗೂರು) ಮತ್ತು ಕಟ್ಟೆರ ನಡುವಿನ ಹಣಾಹಣಿಯಲ್ಲಿ ಅರಮಣಮಾಡ ೮ ವಿಕೆಟ್ ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು. ಕಟ್ಟೆರ ೫ ಓವರ್ಗಳಲ್ಲಿ ೨ ವಿಕೆಟ್ ನಷ್ಟಕ್ಕೆ ೨೨ ರನ್ ಸೇರಿಸಿತು. ಅರಮಣಮಾಡ ೩.೫ ಓವರ್ಗಳಲ್ಲಿ ೨ ವಿಕೆಟ್ ನಷ್ಟಕ್ಕೆ ೨೩ ರನ್ಗಳನ್ನು ಗಳಿಸಿ ಜಯ ಸಾಧಿಸಿತು.