ಮಡಿಕೇರಿ, ಏ.೨೦: ಚೆರಿಯಪರಂಬುವಿನ ಜನರಲ್ ಕೆ.ಎಸ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಚೇನಂಡ ಕಪ್ ಹಾಕಿ ನಮ್ಮೆಯಲ್ಲಿನ ಪಂದ್ಯಗಳಿಗೆ ಮತ್ತೇ ಮಳೆ ಅಡ್ಡಿಯಾಗಿದ್ದು, ಕೆಲ ಪಂದ್ಯಗಳನ್ನು ಮುಂದೂಡಲಾಯಿತು. ತಾ.೧೯ ರಂದು ಕೂಡ ಮಳೆಯಿಂದ ಕೆಲ ಪಂದ್ಯಗಳು ಆಯೋಜಿಸಲು ಅಸಾಧ್ಯವಾಗಿದ್ದು, ಈ ಎಲ್ಲ ಪಂದ್ಯಗಳು ತಾ.೨೧ ರಂದು (ಇಂದು) ನಡೆಯಲಿವೆ.

ತಾ.೨೦ ರಂದು ನಡೆದ ಪಂದ್ಯಗಳ ಫಲಿತಾಂಶ:

ಕÉÆÃಳÉರ ತಂಡವು ಮಾಚಿಮಂಡ ತಂಡವನ್ನು ೨-೦ ಗೋಲುಗಳಿಂದ ಮಣಿಸಿತು.

ಮಂಡೇಟಿರ ತಂಡವು ಕೈಬಿಲಿರ ತಂಡವನ್ನು ೩-೦ ಗೋಲುಗಳಿಂದ ಸೋಲಿಸಿತು.

ಮೇರಿಯಂಡ ತಂಡವು ಕಂಬೆಯAಡ ತಂಡವನ್ನು ಟೈ ಬ್ರೇಕರ್‌ನಲ್ಲಿ ೫-೪ ಗೋಲುಗಳಿಂದ ಸೋಲಿಸಿತು. ನಿಗದಿತ ಪಂದ್ಯದಲ್ಲಿ ೧-೧ ಸಮಬಲವಾಗಿತ್ತು.

ಬೊಳ್ಳೆಪಂಡ ತಂಡವು ಮಂದೆಯAಡ ತಂಡವನ್ನು ೩-೦ ಗೋಲುಗಳಿಂದ ಸೋಲಿಸಿತು. ಬೊಳ್ಳೆಪಂಡ ಪರ ಗ್ಯಾನ್ ಗಣಪತಿ ಹ್ಯಾಟ್ರಿಕ್ ಸಾಧನೆಗೈದರು.

ಪುದಿಯೊಕ್ಕಡ ತಂಡವು ಮರುವಂಡ ತಂಡದ ಪರ ೫-೧ ಅಂತರದಲ್ಲಿ ಗೆಲುವು ಸಾಧಿಸಿತು. ಪುದಿಯೊಕ್ಕಡ ಪರ ಪ್ರಧಾನ್ ಸೋಮಣ್ಣ ಹ್ಯಾಟ್ರಿಕ್ ಸಾಧನೆಗೈದರು. ಕೊಂಗAಡ ತಂಡವು ಮುಕ್ಕಾಟಿರ(ಬೋಂದ) ತಂಡದ ವಿರುದ್ಧ ೨-೦ ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು.

ಮಚ್ಚಾರಂಡ ತಂಡವು ನಾಳಿಯಂಡ ತಂಡವನ್ನು ೧-೦ ಗೋಲುಗಳ ಅಂತರದಲ್ಲಿ ಮಣಿಸಿತು. ಪರದಂಡ ತಂಡವು ೪-೧ ಗೋಲುಗಳ ಅಂತರದಲ್ಲಿ ನಂಬುಡುಮಾಡ ತಂಡವನ್ನು ಮಣಿಸಿತು. ಪರದಂಡ ಪರ ರಂಜನ್ ಅಯ್ಯಪ್ಪ ಹ್ಯಾಟ್ರಿಕ್ ಬಾರಿಸಿದರು. ಪಟ್ಟಚೆರುವಂಡ ತಂಡವು ಕುಂದಿರ ತಂಡವನ್ನು ೨-೦ ಗೋಲುಗಳಿಂದ ಸೋಲಿಸಿತು.

ಮಂಡೇಪAಡ ತಂಡವು ಕಡೇಮಾಡ ತಂಡದ ವಿರುದ್ಧ ೩-೦ ಅಂತರದಲ್ಲಿ ಗೆಲುವು ಸಾಧಿಸಿತು.

ಐಚೆಟ್ಟಿರ ತಂಡವು ೧-೦ ಅಂತರದಲ್ಲಿ ಆಲೆಮಾಡ ತಂಡದ ವಿರುದ್ಧ ಜಯ ಸಾಧಿಸಿತು.

ಸಣ್ಣುವಂಡ ತಂಡವು ಟೈ ಬ್ರೇಕರ್‌ನಲ್ಲಿ ಕುಮ್ಮಂಡ ತಂಡದ ವಿರುದ್ಧ ೨-೧ ಗೋಲುಗಳಿಂದ ಗೆಲುವು ಸಾಧಿಸಿತು. ನಿಗದಿತ ಪಂದ್ಯದಲ್ಲಿ ೦-೦ ಸಮಬಲವಾಗಿತ್ತು.

ಮೂಕೊಂಡ ತಂಡವು ಚಿಮ್ಮಣಮಾಡ ತಂಡವನ್ನು ೪-೦ ಅಂತರದಲ್ಲಿ ಮಣಿಸಿತು.

ಕುಪ್ಪಂಡ (ನಾಂಗಾಲ) ತಂಡವು ಪಂದ್ಯAಡ ತಂಡದ ವಿರುದ್ಧ ೨-೦ ಗೋಲುಗಳಿಂದ ಜಯ ಬೀರಿತು.

ಇಟ್ಟಿರ ತಂಡವು ಐಚಂಡ ತಂಡದ ವಿರುದ್ಧ ೧-೦ ಅಂತರದಲ್ಲಿ ಗೆಲುವು ಸಾಧಿಸಿತು.

ಚೇಂದAಡ ತಂಡವು ಮುಕ್ಕಾಟಿರ (ಕಡಗದಾಳು) ತಂಡದ ವಿರುದ್ಧ ೧-೦ ಅಂತರದಲ್ಲಿ ಜಯ ಸಾಧಿಸಿತು. ಕಾಡ್ಯಮಾಡ ತಂಡವು ತೀತಮಾಡ ತಂಡದ ವಿರುದ್ಧ ೧-೦ ಅಂತರದಲ್ಲಿ ಗೆಲುವು ಸಾಧಿಸಿತು.

ನೆಲ್ಲಮಕ್ಕಡ ಹಾಗೂ ಉದಿಯಂಡ ತಂಡಗಳ ನಡುವಿನ ಪಂದ್ಯದಲ್ಲಿ ನೆಲ್ಲಮಕ್ಕಡ ತಂಡಕ್ಕೆ ವಾಕ್‌ಓವರ್ ಮೂಲಕ ಮುಂದಿನ ಹಂತಕ್ಕೆ ಪ್ರವೇಶ ದೊರಕಿತು.

ಮೆಕೇರಿರ ತಂಡವು ಕಂಗಾAಡ ತಂಡದ ವಿರುದ್ಧ ಟೈ ಬ್ರೇಕರ್‌ನಲ್ಲಿ ೪-೩ ಗೋಲುಗಳಿಂದ ಜಯ ಬೀರಿತು. ನಿಗದಿತ ಪಂದ್ಯದಲ್ಲಿ ೦-೦ ಸಮಬಲವಾಗಿತ್ತು. ಚೆಪ್ಪುಡಿರ ತಂಡವು ೪-೦ ಅಂತರದಲ್ಲಿ ಚೀಯಕಪೂವಂಡ ತಂಡವನ್ನು ಮಣಿಸಿತು.