ವೀರಾಜಪೇಟೆ, ಏ. ೧೮: ಯುವ ಜನತೆ ಸೋಲನ್ನು ಸ್ವೀಕರಿಸುವ ಮನೋಭಾವ ಕಳೆದುಕೊಂಡು ಆತ್ಮಹತ್ಯೆಯಂತಹ ಕಾರ್ಯಕ್ಕೆ ಮುಂದಾಗುತ್ತಿರುವುದು ಕಳವಳಕಾರಿ ಸಂಗತಿ ಎಂದು ವೀರಾಜಪೇಟೆ ಡಿವೈಎಸ್ಪಿ ಮಹೇಶ್ ಕುಮಾರ್ ಹೇಳಿದರು.
ವೀರಾಜಪೇಟೆಯ ಬಿಲ್ಲವ ಸೇವಾ ಸಂಘದ ವತಿಯಿಂದ ವೀರಾಜಪೇಟೆ ಜೂನಿಯರ್ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದ್ದ ೨೦ನೇ ವರ್ಷದ ವಾರ್ಷಿಕ ಕ್ರೀಡಾಕೂಟ ಸಮಾರಂಭಕ್ಕೆ ದೀಪ ಬೆಳಗಿ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಶಿಕ್ಷಣಕ್ಕೆ ಮಹತ್ವ ನೀಡಿ ಸಮಾಜದ ಪ್ರತಿಯೊಬ್ಬ ವ್ಯಕ್ತಿಗಳು ಶಿಕ್ಷಿತರಾಗಬೇಕು. ಸಂಘಟನೆಯು ಬಲವಾಗಿದ್ದಲ್ಲಿ ಸರಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಹಕಾರವಾಗುತ್ತದೆ ಎಂದರು.
ನಾರಾಯಣ ಗುರು ಯುವ ವೇದಿಕೆ ರಾಜ್ಯ ಅಧ್ಯಕ್ಷರಾದ ಸತ್ಯಜಿತ್ ಸುರತ್ಕಲ್ ಮಾತನಾಡಿ, ಜಿಲ್ಲೆಯಲ್ಲಿ ಬಿಲ್ಲವ ಸಮುದಾಯ ಬಾಂಧವರು ಯಾವುದೇ ಕ್ರೀಡೆಗಳನ್ನು ಆಯೋಜಿಸುವುದಾದಲ್ಲಿ ಮುಂದಿನ ಸಾಲಿನಿಂದ ಹೋಬಳಿ, ಗ್ರಾಮಾಂತರ ಮಟ್ಟದಿಂದ ಆಯಾಯ ಗ್ರಾಮಗಳಿಗೆ ಸೀಮಿತವಾಗಿ ತಂಡಗಳನ್ನು ನೋಂದಣಿ ಮಾಡಿಕೊಂಡು ಕ್ರೀಡಾಕೂಟಗಳಲ್ಲಿ ಭಾಗವಹಿಸುವಂತಾಗಬೇಕು ಎಂದು ಹೇಳಿದರು.
ಕೊಡಗು ಜಿಲ್ಲಾ ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಬಿ.ಆರ್. ಲಿಂಗಪ್ಪ ಮಾತನಾಡಿ ಕ್ರೀಡಾಕೂಟಗಳ ಆಯೋಜನೆಯೊಂದಿಗೆ ಸಂಘಟನೆಯ ಬೆಳವಣಿಗೆಗೆ ಸಹಕಾರ ದೊರಕುವಂತಗಾಬೇಕು. ಜಿಲ್ಲಾ ಸಂಘವು ಸದಸ್ಯತ್ವ ಜಿಲ್ಲೆಯಾದ್ಯಂತ ಸದಸ್ಯತ್ವ ಅಭಿಯಾನ ಆರಂಭಿಸಿದ್ದು ತಾಲೂಕು ಸಂಘದಲ್ಲಿ ನೋಂದಣಿಯಾದAತೆ ಜಿಲ್ಲಾ ಸಂಘದಲ್ಲಿಯೂ ನೋಂದಣಿ ಮಾಡಿಕೊಂಡು ಸಂಘಟನೆಯ ಬಲವಧÀðನೆಗೆ ಸಹಕಾರ ನೀಡಬೇಕೆಂದರು.
ವೀರಾಜಪೇಟೆ ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಬಿ.ಎಂ. ಗಣೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಜನಾಂಗ ಬಾಂಧವರು ಕ್ರೀಡಾಕೂಟಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ಹೆಚ್ಚಿನ ಸಹಕಾರ ನೀಡುತ್ತಾ ಬಂದಿದ್ದಾರೆ ಎಂದರು. ಕಾರ್ಯಕ್ರಮದ ಆರಂಭದಲ್ಲಿ ಶ್ರೀ ನಾರಾಯಣ ಗುರು ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು, ಅತಿಥಿಗಳು ಬ್ಯಾಟ್ ಬೀಸುವ ಮೂಲಕ ಕ್ರೀಡಾಕೂಟಕ್ಕೆ ವಿದ್ಯುಕ್ತ ಚಾಲನೆ ನೀಡಿದರು.
ವೇದಿಕೆಯಲ್ಲಿ ಕ್ರೀಡಾಕೂಟದ ಅಧ್ಯಕ್ಷ ಬಿ.ಜೆ. ಅಶೋಕ್, ಎನ್.ಕೆ ಮೋಹನ್ ಕುಮಾರ್, ಉದ್ಯಮಿಗಳಾದ ಬಿ.ಆರ್. ಬೋಜಪ್ಪ ಪೂಜಾರಿ, ಮಾಜಿ ಜಿಲ್ಲಾ ಅಧ್ಯಕ್ಷ ರಘು ಆನಂದ, ಮಾಜಿ ತಾಲೂಕು ಅಧ್ಯಕ್ಷ ಸುಬ್ಬಪ್ಪ ಪೂಜಾರಿ, ಬಿ.ಎಸ್. ಚಂದ್ರಶೇಖರ್ ಪಟ್ಟಣ ಪಂಚಾಯಿತಿ ಮಾಜಿ ಸದಸ್ಯರಾದ ಅನಿತ ಕುಮಾರ್, ಬಿ.ಡಿ. ಸುನೀತ, ಗೌರವ ಅಧ್ಯಕ್ಷ ಬಿ.ಆರ್. ರಾಜ, ನಗರ ಠಾಣೆಯ ಪಿ.ಎಸ್.ಐ. ವಾಣಿಶ್ರೀ ಮತ್ತು ಬಿ.ಎ. ಗಣೇಶ ಉಪಸ್ಥಿತರಿದ್ದರು. ಬಿಲ್ಲವ ಸೇವಾ ಸಂಘದ ಖಜಾಂಚಿ ಬಿ.ಎಸ್, ಸತೀಶ್ ಸ್ವಾಗತಿಸಿ, ಕಿಶೋರ್ ರೈ ಕತ್ತಲೆಕಾಡು ನಿರೂಪಿಸಿದರು.