ಮಡಿಕೇರಿ, ಏ.೧೮: ಲೋಕಸಭೆ ಹಾಗೂ ವಿಧಾನಸಭೆಯಲ್ಲಿ ಶೇ.೩೩ ರಷ್ಟು ಮಹಿಳಾ ಮೀಸಲಾತಿ ತರುವ ಐತಿಹಾಸಿಕ ಮಸೂದೆ ಮಂಡನೆ ವಿರುದ್ಧ ಪ್ರಮುಖವಾಗಿ ಕಾಂಗ್ರೆಸ್ ಸೇರಿದಂತೆ ಇತರ ವಿರೋಧ ಪಕ್ಷಗಳು ಮತ ಹಾಕಿ ನಾರಿಶಕ್ತಿಗೆ ವಿರೋಧವಾಗಿ ನಡೆದಿದ್ದನ್ನು ಕೊಡಗು ಜಿಲ್ಲಾ ಬಿ.ಜೆ.ಪಿ ಖಂಡಿಸಿದೆ.

ನಗರದಲ್ಲಿAದು ನಡೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಜಿಲ್ಲಾ ಬಿ.ಜೆ.ಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಅವರು, ಭಾರತೀಯ ಸಂಸ್ಕೃತಿ-ಪರAಪರೆಯೂ ಮಹಿಳಾ ಪ್ರಾತಿನಿದ್ಯಕ್ಕೆ ಹೆಚ್ಚು ಒತ್ತು ಕೊಡುತ್ತದೆ. ಎಲ್ಲಾ ಕ್ಷೇತ್ರಗಳಲ್ಲಿಯೂ ಇಂದು ಮಹಿಳೆಯರು ಉತ್ತಮ ಸಾಧನೆಗೈಯ್ಯುತ್ತಿದ್ದು, ರಾಜಕೀಯವಾಗಿಯೂ ಕೂಡ ಮಹಿಳೆಯರು ಮುಂದೆ ಬರುವ ಉದ್ದೇಶದಿಂದ ಬಿ.ಜೆ.ಪಿ ಮಂಡಿಸಿದ ಮಹಿಳಾ ಮೀಸಲಾತಿ ಮಸೂದೆಯನ್ನು ತಿರಸ್ಕರಿಸುವ ಮೂಲಕ ಕಾಂಗ್ರಸ್ ಸೇರಿದಂತೆ ಇತರ ವಿರೋಧ ಪಕ್ಷಗಳು ಮಹಿಳೆಯರಿಗೆ ಅನ್ಯಾಯ ಮಾಡಿದೆ ಎಂದರು. ಮುಂದಿನ ದಿನಗಳಲ್ಲಿ ದೇಶದ ಮಹಿಳೆಯರು ಇದಕ್ಕೆ ತಕ್ಕ ಉತ್ತರ ನೀಡಲಿದ್ದಾರೆ ಎಂದರು.

ಮಾಜಿ ಶಾಸಕರಾದ ಕೆ.ಜಿ ಬೋಪಯ್ಯ ಅವರು ಮಾತನಾಡಿ, ಮಹಿಳಾ ಮೀಸಲಾತಿ ಸಂಬAಧ ೪೦ ವರ್ಷಗಳಿಂದ ಇದ್ದ ಬೇಡಿಕೆ ವಿರೋಧ ಪಕ್ಷಗಳಿಂದಾಗಿ ಪೂರೈಕೆಯಾಗಿಲ್ಲ. ೨೦೧೧ರ ಜನಗಣತಿ ಆಧಾರದ ಮೇಲೆ ಡೀಲಿಮಿಟೇಷನ್ ಮಾಡಿ ಲೋಕಸಭಾ ಸ್ಥಾನಗಳನ್ನು ೮೫೦ರವರೆಗೆ ಏರಿಸಿದ ಬಳಿಕ ಇದ್ದುಪಡಿ ಮೂಲಕ ಶೇ.೩೩ ರಷ್ಟು ಮಹಿಳಾ ಮೀಸಲಾತಿ ನೀಡುವ ಮಸೂದೆಯನ್ನು ಬಿ.ಜೆ.ಪಿಯು ಸಾಂವಿಧಾನಿಕವಾಗಿ ಮಸೂದೆ ಮಂಡಿಸಿತ್ತ್ತು. ಮಸೂದೆಯಿಂದ ದಕ್ಷಿಣ ರಾಜ್ಯಗಳಿಗೆ ಅನಾನುಕೂಲವಾಗಲಿದೆ ಎಂಬ ಕಾಂಗ್ರೆಸ್‌ನ ಪ್ರಮುಖ ಆರೋಪವನ್ನು ಅಲ್ಲಗಳೆದ ಅವರು, ಕರ್ನಾಟಕ ಸೇರಿದಂತೆ ಇತರ ದಕ್ಷಿಣ ರಾಜ್ಯಗಳ ಸೀಟುಗಳನ್ನೂ ಹೆಚ್ಚಿಸಿ ಒಟ್ಟು ಸ್ಥಾನಗಳಲ್ಲಿ ಶೇಕಡವಾರು ಹೆಚ್ಚಿಸಿಯೇ ಮಸೂದೆ ಮಂಡಿಸಿದ್ದಾಗಿ ಮಾಹಿತಿ ನೀಡಿದರು. ಅದಾಗ್ಯೂ ರಾಜಕೀಯ ಕಾರಣದಿಂದಾಗಿ ವಿರೋಧ ಪಕ್ಷಗಳು ಐತಿಹಾಸಿಕ ಮಸೂದೆ ತಿರಸ್ಕರಿಸಿರುವುದು ದೇಶದ ಮಹಿಳೆಯರಿಗೆ ಮಾಡಿದ ಅನ್ಯಾಯ ಎಂದು ಅವರು ಹೇಳಿದರು. ಮುಂದಿನ ದಿನಗಳಲ್ಲಿ ಈ ಮಸೂದೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಬಿ.ಜೆ.ಪಿಯಿಂದ ಮಾಡಲಿದ್ದೇವೆ ಎಂದು ಈ ಸಂದರ್ಭ ಅವರು ಮಾಹಿತಿ ನೀಡಿದರು.

ನಗರಸಭಾ ಅಧ್ಯಕ್ಷೆ ಕಲಾವತಿ ಅವರು ಮಾತನಾಡಿ, ಎಲ್ಲಾ ಕ್ಷೇತ್ರಗಳಲ್ಲಿಯೂ ಹಾಗೂ ಎಲ್ಲಾ ಪಕ್ಷಗಳಲ್ಲಿಯೂ ಇಂದು ಮಹಿಳೆಯರು ಸ್ಥಾನ ಪಡೆದಿದ್ದಾರೆ. ಮಹಿಳಾ ಮೀಸಲಾತಿಗೆ ವಿರೋಧ ಮಾಡಿದ ವಿರೋಧ ಪಕ್ಷಗಳ ನಡೆ ಖಂಡನೀಯ ಎಂದರು.

ಗೋಷ್ಠಿಯಲ್ಲಿ ಜಿಲ್ಲಾ ಬಿ.ಜೆ.ಪಿ ವಕ್ತಾರ ಬಿ.ಕೆ ಅರುಣ್ ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ ಹಾಗೂ ಮಡಿಕೇರಿ ನಗರ ಮಹಿಳಾ ಮೋರ್ಚಾ ಅಧ್ಯಕ್ಷೆ ಸೌಮ್ಯ ಅವರುಗಳು ಹಾಜರಿದ್ದರು.