ಈಗ ಎಲ್ಲಿ ಹೋದರು ಬಿಸಿಲಿನ ಧಗೆ. ಕೊಡಗಿ ನಲ್ಲಿ ಬೆಳಿಗ್ಗೆ ೧೧ ಗಂಟೆ ನಂತರವAತೂ ಮನೆ ಹೊರಗಿನ ಸಂಚಾರಕ್ಕೆ ಬಿಸಿಲು ಅಡ್ಡಿ. ಆದರೂ ಮನೆ ಸುತ್ತಮುತ್ತಲು ಮರ ಗಿಡಗಳಿದ್ದರೆ ಸ್ವಲ್ಪ ತಂಪು. ಆದರೆ ನಗರ ಪ್ರದೇಶಗಳಲ್ಲಿ ಬಿಸಿಲ ಪ್ರಖರತೆ ಜೋರು. ಇನ್ನು ದಕ್ಷಿಣ ಕನ್ನಡದಲ್ಲಂತೂ ಬಿಸಿಲು ತಡೆಯುವುದೇ ಅಸಾಧ್ಯ. ಕೊಡಗಿನಲ್ಲಿ ೧೧ ಗಂಟೆಗೆ ಬೆಳಿಗ್ಗೆಯಿಂದ ಸಾಧಾರಣ ೪ ಗಂಟೆಯ ವರೆಗೂ ಬಿಸಿಲಿನ ಕಾವು ಇರುವುದು. ಇದನ್ನು ಎದುರಿಸು ವುದು ಸವಾಲೇ ಸರಿ. ಇದರಿಂದ ಆರೋಗ್ಯಕ್ಕೆ ತೊಂದರೆಗಳು ಸಂಭವಿಸಬಹುದು. ಈ ನಿಟ್ಟಿನಲ್ಲಿ ನಾವು ಹಲವು ಎಚ್ಚರಿಕೆಗಳನ್ನು ವಹಿಸಬೇಕು. ಹಾಗಾದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಬೇಸಿಗೆಯಲ್ಲಿ ಉಷ್ಣತೆ ಹೆಚ್ಚಾಗಿರುವುದರಿಂದ ದೇಹದ ನೀರು ಕಡಿಮೆಯಾಗುವುದು. ಹೀಟ್‌ಸ್ಟೊçÃಕ್ಸ್, ತಲೆನೋವು, ಚರ್ಮದ ಸಮಸ್ಯೆಗಳು, ಸುಸ್ತು ಇತರೆ ತೊಂದರೆಗಳು ಆಗುವುವು. ಹಾಗಾದರೆ ನಾವು ವಹಿಸಬಹುದಾದ ಎಚ್ಚರಿಕೆಗಳಾವುವು ಎಂದು ನೋಡೋಣ.

೧. ನೀರು ಮತ್ತು ದ್ರವಗಳು ಸೇವನೆ: ದಿನಕ್ಕೆ ಕನಿಷ್ಟ ೩-೪ ಲೀಟರ್ ನೀರು ಕುಡಿಯಬೇಕು (ಬೆವರು ಹೆಚ್ಚಾದರೆ ಹೆಚ್ಚು)

೨. ತಣ್ಣಗಿರುವ ನೀರು, ನಿಂಬೆ ಪಾನೀಯ, ಬಟಾಣಿ ಅಂಬಲಿ, ಮಜ್ಜಿಗೆ, ತಾಳಿಜ್ಯೂಸ್ (ದೊರೆತರೆ) ಕೊಬ್ಬರಿ ನೀರು ಸೇವಿಸಬೇಕು.

೩. ಚಹಾ, ಕಾಫಿ, ಕೋಲ್‌ಡ್ರಿಂಕ್ಸ್, ಆಲ್ಕೊಹಾಲ್ ಕಡಿಮೆ ಮಾಡಬೇಕು. (ಇವು ದೇಹದ ನೀರು ಹೀರಿಕೊಳ್ಳುತ್ತವೆ)

೨. ಸೂರ್ಯನ ಕಿರಣಗಳಿಂದ ರಕ್ಷಣೆ: ಬೆಳಿಗ್ಗೆ ೧೦ ಗಂಟೆಯಿAದ ಮಧ್ಯಾಹ್ನ ೪ ಗಂಟೆಯವರೆಗೆ ನೇರ ಸೂರ್ಯನ ಬೆಳಕಿಗೆ ಹೋಗುವುದನ್ನು ತಪ್ಪಿಸಬೇಕು.

೧. ಹೊರಗೆ ಹೋದಾಗ ಟೋಪಿ, ಕೈಗವಸು, ಸನ್‌ಗ್ಲಾಸ್, ಕೊಡೆ ಬಳಸುವುದು.

೨. ಎಸ್.ಪಿ.ಎಫ್ ೩೦+ ಅಥವಾ ಹೆಚ್ಚಿನ ಸನ್‌ಸ್ಕಿçÃನ್ ಚರ್ಮಕ್ಕೆ ಹಚ್ಚುವುದು. (ಪ್ರತಿ ೨-೩ ಗಂಟೆಗೊಮ್ಮೆ ಮತ್ತೆ ಹಚ್ಚುವುದು)

೩. ಹಗುರವಾದ, ಬಿಳಿ ತಿಳಿ ಬಣ್ಣದ ಬಟ್ಟೆಗಳನ್ನು ಧರಿಸುವುದು.

೩. ಆಹಾರದಲ್ಲಿ ಜಾಗ್ರತೆ: ತಾಜಾ ಹಣ್ಣುಗಳು (ಕಲ್ಲಂಗಡಿ, ಮಾವು, ಸೇಬು, ಕಿತ್ತಳೆ, ಮೂಸಂಬಿ) ತರಕಾರಿಗಳಾದ ಕುಂಬಳಕಾಯಿ (ಬೂದು) ಸೌತೆಕಾಯಿಯನ್ನು ಇತರೆ ತಂಪು ಹಣ್ಣು, ತರಕಾರಿಗಳನ್ನು ಹೆಚ್ಚು ಸೇವಿಸಬೇಕು.

೪. ದೇಹದ ತಂಪನ್ನು ಕಾಯ್ದುಕೊಳ್ಳುವುದು: ತಂಪಾದ ನೀರಿನಲ್ಲಿ ಸ್ನಾನ ಮಾಡುವುದು, ತಲೆಗೆ ತಣ್ಣೀರು ಹಾಕಿಕೊಳ್ಳುವುದು.

ಮನೆಯನ್ನು ತಂಪಾಗಿರಿಸಿ ಫ್ಯಾನ್, ಎಸಿ, ತೆರೆದ ಕಿಟಕಿಗಳನ್ನು ಬಳಸಬೇಕು.

ಹಗಲು ನಿದ್ರೆ ತಪ್ಪಿಸಿ ರಾತ್ರಿ ಉತ್ತಮ ನಿದ್ದೆ ಮಾಡಬೇಕು.

೫. ವಿಶೇಷ ಎಚ್ಚರಿಕೆಗಳು: ಮಕ್ಕಳು, ವೃದ್ಧರು, ಗರ್ಭಿಣಿಯರು, ಹೃದಯ ರೋಗಿಗಳು ಹೆಚ್ಚು ಜಾಗ್ರತೆ ವಹಿಸಬೇಕು.

ತಲೆ ತಿರುವುದು, ವಾಂತಿ, ತೀವ್ರ ಬೆವರು, ಚರ್ಮ ಕೆಂಪಾಗುವುದು ಕಂಡು ಬಂದರೆ ವೈದ್ಯರನ್ನು ತಡ ಮಾಡದೇ ಕಾಣಬೇಕು. (ಇದು ಹೀಟ್ ಸ್ಟೊçÃಕ್ ಲಕ್ಷಣಗಳು) ಪ್ರಯಾಣದ ಸಂದರ್ಭ ನೀರು ಜೊತೆಯಲ್ಲಿ ಇಟ್ಟು ಕೊಳ್ಳಬೇಕು. ಪ್ರಾಣಿ, ಪಕ್ಷಿಗಳಿಗೂ ನೀರಿಡಬೇಕು.

ಬೇಸಿಗೆಯಲ್ಲಿ ನೀರು ರಕ್ಷಣೆಯ ಕೀಲಿ. ಸೂರ್ಯನ ತಾಪದಿಂದ ದೂರಿವಿದ್ದು, ತಂಪಾದ ಆಹಾರವನ್ನು ಸೇವಿಸಬೇಕು. ದೇಹವನ್ನು ತಂಪಾಗಿರಿಸಿಕೊಳ್ಳಬೇಕು. ಬೇಸಿಗೆಯಲ್ಲಿ ದೇಹಕ್ಕೆ ತಂಪು ನೀಡುವ, ಹಗುರವಾಗ ಮತ್ತು ಜೀರ್ಣವಾಗುವ ಆಹಾರಗಳನ್ನು ಆಯ್ಕೆ ಮಾಡಿ ಸೇವಿಸಬೇಕು.

ಹೀಗೆ ಬೇಸಿಗೆಯಲ್ಲಿ ಏಪ್ರಿಲ್, ಮೇ ಹೆಚ್ಚು ಬಿಸಿಲಿನ ಕಾಲ. ಜೂನ್‌ನಲ್ಲಿ ಮಳೆ ಬರುವುದು. ಬಿಸಿಲಿನ ಬೇಸಿಗೆಯನ್ನು ನಾವು ಜಾಗ್ರತೆಯಿಮದ ಕಳೆದರೆ ಆರೋಗ್ಯವುಳಿದು ಮಳೆಗಾಲದ ತಂಪನ್ನು ಎದುರಿಸಲು ತಯಾರಾಗಬಹುದು.

-ಹರೀಶ್ ಸರಳಾಯ, ಮಡಿಕೇರಿ

ಮೊ. ೯೭೩೧೮೧೦೨೫೦