ನಾಪೋಕ್ಲು, ಏ.೧೮: ಸ್ಥಳೀಯ ಗ್ರಾ.ಪಂ. ವ್ಯಾಪ್ತಿಯ ವಾರದ ಸಂತೆ ತಾ.೨೦ ಸೋಮವಾರದಂದು ನಡೆಯಬೇಕಿದ್ದನ್ನು ತಾ. ೨೪ರ ಶುಕ್ರವಾರಕ್ಕೆ ಮುಂದೂಡಲಾಗಿದೆ.
ತಾ.೨೦ ಎಮ್ಮೆಮಾಡು ಉರೂಸ್ ನಡೆಯಲಿದ್ದು ಈ ದಿನದಂದು ಜಿಲ್ಲೆ ಹಾಗೂ ರಾಜ್ಯದ ಬೇರೆ ಕಡೆಯಿಂದ ಹೆಚ್ಚು ಜನರು ಆಗಮಿಸುವುದರಿಂದ ಜನದಟ್ಟಣೆ ಹಾಗೂ ವಾಹನ ಸಂಚಾರ ಹೆಚ್ಚಾಗಲಿದೆ. ಈ ಕಾರಣದಿಂದಾಗಿ ಸೋಮವಾರ ದಂದು ನಡೆಯಬೇಕಿದ್ದ ಸಂತೆಯನ್ನು ತಾ. ೨೪ ರ ಶುಕ್ರವಾರಕ್ಕೆ ಮುಂದೂಡಲಾಗಿದ್ದು ಸಾರ್ವಜನಿಕರು ಹಾಗೂ ವರ್ತಕರು ಸಹಕರಿಸಬೇಕಾಗಿ ಗ್ರಾ.ಪಂ. ಪತ್ರಿಕಾ ಪ್ರಕಟಣೆ ತಿಳಿಸಿದೆ.